ಕುಲಪತಿ ರಂಗಪ್ಪ ನೇಮಕಾತಿ, ದೇವೇಗೌಡರ ಕೈವಾಡ

ದೇವೇಗೌಡರ ಮೊಮ್ಮಗನೊಬ್ಬನ ಮದುವೆ ರಂಗಪ್ಪ ಅವರ ಮಗಳ ಜೊತೆ ನಡೆಸಲು ನಿಶ್ಚಯಿಸಲಾಗಿದೆ. ಹೀಗಾಗಿ ರಂಗಪ್ಪ ಅವರನ್ನು ಕುಲಪತಿ ಮಾಡಲು ದೇವೇಗೌಡರು ನೆರವಾಗಿದ್ದಾರೆ ಎಂಬ ಸುದ್ದಿ ವಿವಿ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ರಂಗಪ್ಪ ಅವರ ನೇಮಕಾತಿಯಲ್ಲಿ ದೇವೇಗೌಡರ ಪಾತ್ರ ಇರುವುದನ್ನು ರಾಜಭವನ ಹಾಗೂ ಮುಖ್ಯಮಂತ್ರಿಗಳ ಸಚಿವಾಲಯ ಮೂಲಗಳು ಕೂಡಾ ದೃಢಪಡಿಸಿದೆ.
ಜಗದೀಶ್ ಶೆಟ್ಟರ್ ಅವರ ಹೆಗಲ ಮೇಲೆ ದೇವೇಗೌಡರು ಕೈ ಇಟ್ಟ ಸುದ್ದಿ ಓದಿರುತ್ತೀರಿ..ಆ ಮೀಟಿಂಗ್ ಸಮಯದಲ್ಲೇ ರಂಗಪ್ಪ ಅವರ ನೇಮಕಾತಿ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಶೆಟ್ಟರ್ ಅವರು ಆರೆಸ್ಸೆಸ್ ಮುಖಂಡರು, ಎಬಿವಿಪಿ ನಾಯಕರೊಡನೆ ಚರ್ಚಿಸಿದ್ದಾರೆ. ರಾಜಭವನಕ್ಕೆ ತೆರಳಿ ರಂಗಪ್ಪ ಅವರ ನೇಮಕಾತಿಗೆ ಸರ್ಕಾರದ ಒಪ್ಪಿಗೆ ಇದೆ ಎಂದಿದ್ದಾರೆ. ನಂತರ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ ಎಂದು DNA ಪತ್ರಿಕೆ ವರದಿ ಮಾಡಿದೆ.
ನಿಯಮ ಮೀರಿ ನೇಮಕಾತಿ: ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡೆ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ.
ನಿಯಮದ ಪ್ರಕಾರ ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ 'ಶೋಧನಾ ಸಮಿತಿ' ಮೂರು ಹೆಸರುಗಳನ್ನು ಶಿಫಾರಸು ಮಾಡಬೇಕು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಪಿ.ಖಿಂಚ ಅಧ್ಯಕ್ಷತೆಯಲ್ಲಿ ನಡೆದ ಶೋಧನಾ ಸಮಿತಿ ಸಭೆಯಲ್ಲಿ, ಕುಲಪತಿ ಸ್ಥಾನಕ್ಕೆ ಯಾರ ಹೆಸರನ್ನು ಶಿಫಾರಸು ಮಾಡಬೇಕು ಎಂಬ ಬಗ್ಗೆ ಸಹಮತ ಮೂಡಿರಲಿಲ್ಲ. ಹೀಗಾಗಿ ಸಭೆಯ ನಡಾವಳಿಯನ್ನು ಮಾತ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸರ್ಕಾರ ಆ ವರದಿಯನ್ನೇ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು.
ಆದರೆ, ಶೋಧನಾ ಸಮಿತಿ ಸಭೆಯಲ್ಲಿ ಪ್ರೊ.ರಂಗಪ್ಪ, ಪ್ರೊ.ಎನ್.ಎಸ್. ಅಶೋಶಕುಮಾರ್, ಪ್ರೊ.ಜಿ.ಕೆ. ಕಾರಂತ್ ಹಾಗೂ ಪ್ರೊ. ಮೇವಾ ಸಿಂಗ್ ಹೆಸರುಗಳು ಪ್ರಸ್ತಾಪವಾಗಿದ್ದವು. ರಂಗಪ್ಪ ಹೆಸರನ್ನು ಶಿಫಾರಸು ಮಾಡುವ ಸಂಬಂಧ ಪರ - ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.ಸಹಮತ ವ್ಯಕ್ತವಾಗಿರಲಿಲ್ಲ
ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ- 2000 ಪ್ರಕಾರ ಎರಡನೇ ಬಾರಿಗೆ ಕುಲಪತಿ ಹುದ್ದೆ ಹೊಂದಲು ಅವಕಾಶವಿಲ್ಲ. ಆದರೆ, ಈ ಕಾಯ್ದೆ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯಕ್ಕೆ ಅನ್ವಯವಾಗುವುದಿಲ್ಲ. ಹೀಗಾಗಿ ಮುಕ್ತ ವಿ.ವಿ.ಯಲ್ಲಿ ರಂಗಪ್ಪ ಅವರು ಕುಲಪತಿಯಾಗಿ ಕಾರ್ಯನಿರ್ವಹಿಸಿದ ಅವಧಿಯನ್ನು ರಾಜ್ಯಪಾಲರು ಗಣನೆಗೆ ತೆಗೆದುಕೊಂಡಿರಲಿಕ್ಕಿಲ್ಲ' ಎಂದು ಶಿಕ್ಷಣ ತಜ್ಞರೊಬ್ಬರು ಹೇಳಿದ್ದಾರೆ.
ರಂಗಪ್ಪ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ (ರಿಟ್ ಅರ್ಜಿ ಸಂಖ್ಯೆ 11444/2012 (ಜಿಎಂ-ಪಿಐಎಲ್). ಅದು ಇತ್ಯರ್ಥವಾಗುವವರೆಗೂ ಅವರ ಹೆಸರನ್ನು ಶಿಫಾರಸು ಮಾಡುವುದು ಸರಿಯಲ್ಲ' ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ತಮ್ಮ ಪುತ್ರನಿಗೆ ಅಕ್ರಮವಾಗಿ ಸೀಟು ಕೊಡಿಸಿದ ಆರೋಪ ರಂಗಪ್ಪ ಅವರ ಮೇಲಿದೆ. ಈ ಸಂಬಂಧ ಕೆ.ಎಸ್. ಶಿವರಾಂ ಎಂಬುವವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ಇನ್ನೂ ನಡೆದಿದೆ. ಹೆಚ್ಚಿನ ವಿವರಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಲಭ್ಯ












Click it and Unblock the Notifications