ಬಿಜೆಪಿ ರಾಜ್ಯಾಧ್ಯಕ್ಷರ ಕೈಲಿ 150 ಅಭ್ಯರ್ಥಿಗಳ ಪಟ್ಟಿ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯನ್ನು ಜಗದೀಶ್ ಶೆಟ್ಟರ್ ಅವರ ನಾಯಕತ್ವದಲ್ಲಿ ಎದುರಿಸಲು ಪಕ್ಷದ ಪ್ರಮುಖ ನಾಯಕರು ತೀರ್ಮಾನಿಸಿದ್ದಾರೆ. ರಾಜ್ಯಾಧ್ಯಕ್ಷ ಯಾರು ಎಂಬುದು ತೀರ್ಮಾನವಾಗಿದೆ. ಎಲ್ಲರ ಕುತೂಹಲದ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಸದ್ಯದಲ್ಲಿಯೇ ಘೋಷಣೆ ಮಾಡಲಾಗುವುದು ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಣಿಸುವುದು ನಮ್ಮ ಗುರಿ. ಕೆಜೆಪಿ ನಮ್ಮ ಗುರಿ ಅಲ್ಲ. ರಾಜ್ಯದ ಜನ ನೆಗೆಟಿವ್ ಪಾಲಿಟಿಕ್ಸ್‌ಗೆ ಬೆಂಬಲಿಸುವುದಿಲ್ಲ. ಕೆಜೆಪಿ ಖಾಲಿ ಡಬ್ಬ, ನಮ್ಮ ಟಾರ್ಗೆಟ್ ಎಂದಿದ್ದರೂ ಕಾಂಗ್ರೆಸ್ ಮಾತ್ರ ಎಂದರು.
ನಾಲ್ಕು ಬಾರಿ ಸಂಸದ, ಒಮ್ಮೆ ಶಾಸಕ ಹಾಗೂ ಕೇಂದ್ರದ ಕ್ಯಾಬಿನೆಟ್ ದರ್ಜೆಯ ಅವಕಾಶವನ್ನು ಬಿಜೆಪಿ ಪಕ್ಷ ಧನಂಜಯ ಕುಮಾರ್ ಅವರಿಗೆ ನೀಡಿತ್ತು. ಇದೆಲ್ಲವನ್ನೂ ಅನುಭವಿಸಿದ ನಂತರ ಬಿಜೆಪಿಯ ಮೇಲೆ ನಿಷ್ಠೆ ಇಲ್ಲದಂತೆ ಮಾತನಾಡುತ್ತಿರುವ ಧನಂಜಯ್ ಅವರಿಗೆ ಯಾವ ನೈತಿಕತೆ ಇದೆ ಎಂದು ಸಿಟಿ ರವಿ ಪ್ರಶ್ನಿಸಿದರು.
ಶ್ರೀಗಳ ನಿಧನಕ್ಕೆ ಕಂಬನಿ: ಸಮುದಾಯವನ್ನು ಒಗ್ಗೂಡಿಸಿ ಬೆಳೆಸಿ, ಚುಂಚನಗಿರಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ಶಿಕ್ಷಣ,ಆರೋಗ್ಯ ಹಾಗೂ ಪರಿಸರ ಕ್ಷೇತ್ರದಲ್ಲಿ ಅವರು ನೀಡಿದ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಿದೆ. 5 ಕೋಟಿ ಸಸಿ ನೆಡುವ ಬೃಹತ್ ಕಾರ್ಯಕ್ಕೆ ಕೈ ಹಾಕಿದರು.
ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಸಮರ್ಧವಾಗಿ ಜನರ ನಡುವೆ ಇದ್ದು ಮಾಡಿದರು. ಅವರ ಗ್ರಾಮೀಣಾಭಿವೃದ್ಧಿ ಕಾರ್ಯಗಳು ಅನುಕರಣೀಯ, ಕುಡಿಯುವ ನೀರು ಯೋಜನೆ ಬಗ್ಗೆ ಅವರಿಗಿದ್ದ ಕನಸನ್ನು ಸರ್ಕಾರ ಖಂಡಿತವಾಗಿಯೂ ನೆರವೇರಿಸಲಿದೆ ಎಂದು ಸಿಟಿ ರವಿ ಭರವಸೆ ಇತ್ತರು.












Click it and Unblock the Notifications