ಶಾಸಕನನ್ನು ಹಿಡಿಯುವ ಹಾವಾಡಿಗ ಬೇಕಾಗಿದ್ದಾನೆ

ಆದಿಲಾಬಾದ್ ಮತ್ತು ನಿಜಾಮಾಬಾದ್ ಪ್ರಾಂತ್ಯದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ವಿರುದ್ದ ವಿಷ ಕಕ್ಕುತ್ತಿದ್ದರೆ ನೆರೆದ ಜನಸ್ತೋಮ ಚಪ್ಪಾಳೆ ತಟ್ಟಿ ಅವನನ್ನು ಮತ್ತಷ್ಟು ಹುರಿದುಂಬಿಸುತ್ತಾರೆ. ಇದರಿಂದ ಪ್ರಚೋದಿತನಾದ ಓವೈಸಿ ಬಹುಸಂಖ್ಯಾತ ಹಿಂದೂಗಳನ್ನು ಮತ್ತಷ್ಟು ವಾಮಾಗೋಚರವಾಗಿ ನಿಂದಿಸುತ್ತಾನೆ.
ಇವನ ಭಾಷಣ ಕೇಳುತ್ತಾ ಪೊಲೀಸರು ಕೂಡಾ ನಿಸ್ಸಹಾಯಕರಾಗುತ್ತಾರೆ. ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಸಾಮಾಜಿಕ ತಾಣದಲ್ಲಿ ಇವನ ಭಾಷಣದ ವಿರುದ್ದ ಜನ ದಂಗೇಳುತ್ತಾರೆ. ಆದರೆ ಸೆಕ್ಯುಲರ್ ವಾದಿಗಳು, ಜಾತ್ಯಾತೀತ ಪಕ್ಷಗಳು, ಬುದ್ದಿವಾದಿಗಳು ಏನೂ ಅರಿಯದಂತೆ ಸುಮ್ಮನಿದ್ದು ಬಿಡುತ್ತಾರೆ.
ಈ ರೀತಿಯ ಭಾಷಣ ಅವನಿಗೆ ಹೊಸದೇನೂ ಅಲ್ಲ. ಆದರೂ ಇವನ ಮೇಲೆ ಸಣ್ಣದೊಂದು ಕೇಸು ದಾಖಲಿಸಿ ರಾಜಕೀಯ ಕಾರಣಗಳಿಗಾಗಿ 'ರಾಜಿ' ಮಾಡಿಕೊಳ್ಳುತ್ತಿರುವುದರಿಂದಲೇ ಅವನು ಮತ್ತು ಅವನ ಪಕ್ಷ ಆಂಧ್ರದಲ್ಲಿ ಪ್ರಭಾವಿ ಪಕ್ಷವಾಗಿ ಬೆಳೆದು ನಿಂತಿದೆ.
ಇದು ನಮ್ಮ ವ್ಯವಸ್ಥೆ. ಈ ವ್ಯವಸ್ಥೆಯಲ್ಲೇ ನಾವು ಬದುಕುತ್ತಿದ್ದೇವೆ, ಮುಂದೆಯೂ ಬದುಕಬೇಕಾದ ಅನಿವಾರ್ಯತೆ. ಇರಲಿ, ಓವೈಸಿ ಹಿಂದೂ ವಿರೋಧಿ ಭಾಷಣದ ನಂತರ ನಮ್ಮ ಬುದ್ಧಿಜೀವಿಗಳನ್ನು, ಪ್ರಗತಿಪರ ಚಿಂತಕರನ್ನು ಮತ್ತು ಭಾರತೀಯರನ್ನು ಕಾಡುವ ಎಂಟು ಪ್ರಶ್ನೆಗಳು ಹೀಗಿವೆ:
1. ಗೋಧ್ರಾ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶ ಅಲ್ಲಿಯ ಮುಸ್ಲಿಮರ ಒತ್ತಡಕ್ಕೆ ಮಣಿದು ವೀಸಾ ನಿರಾಕರಿಸಿತ್ತು. ಆದರೆ ಈಗ ಓವೈಸಿ ಲಂಡನ್ ನಲ್ಲಿ ಹಾಯಾಗಿದ್ದಾನೆ. (ತಾಜಾ ಸುದ್ದಿಯ ಪ್ರಕಾರ ಈಗ ಹೈದರಾಬಾದಿಗೆ ಬಂದಿಳಿದಿದ್ದಾನೆ). ಅಲ್ಲಿನ ಸರಕಾರ, ಎಜುಕೇಟೆಡ್ ಮುಸ್ಲಿಮರು ಮತ್ತು ಅಲ್ಲಿ ವಾಸವಾಗಿರುವ ಹಿಂದೂಗಳು ಅವನನ್ನು ಗಡೀಪಾರು ಮಾಡಲು ಸರಕಾರದ ಮೇಲೆ ಒತ್ತಡ ತರುತ್ತಾರೆಯೇ ಅಥವಾ ಖುದ್ದು ಸರಕಾರ ಇವನ ವಿರುದ್ದ ಕ್ರಮ ತೆಗೆದು ಕೊಳ್ಳುತ್ತದೆಯೇ ?
2. ಓವೈಸಿ, ಸಂಸದನಾಗಿರುವ ಈತನ ಸಹೋದರ ಮತ್ತು ಆತನ ಪಕ್ಷ (ಎಂಐಎಂ) ಈ ಮಟ್ಟಕ್ಕೆ ಆಂಧ್ರದಲ್ಲಿ ಬೆಳೆಯಲು ಅಂದಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ್ ರೆಡ್ಡಿ ಜೊತೆಗಿನ ಸ್ನೇಹವೇ ಕಾರಣ. ಈತನ ಭಾಷಣದ ವಿರುದ್ದ ಆಂಧ್ರ ಕಾಂಗ್ರೆಸ್ ಘಟಕ ಮತ್ತು ದೆಹಲಿಯ ಮೇಡಂ ನಿಮ್ಮ ನಿಲುವೇನು?
3. ಆರ್ ಎಸ್ ಎಸ್ ಅಥವಾ ಯಾವುದೇ ಹಿಂದೂಪರ ಸಂಘಟನೆಗಳು ಏನಾದರೂ ಹೇಳಿಕೆ ನೀಡಿದರೆ, ಅದರ ವಿರುದ್ದ ವ್ಯಂಗ್ಯವಾಗಿ ಹೇಳಿಕೆ ನೀಡುವ ಕಾಂಗ್ರೆಸಿನ ಬಾಯಿಬಡುಕ ವಕ್ತಾರ ದಿಗ್ವಿಜಯ್ ಸಿಂಗ್ ಇವನ ಭಾಷಣದ ವಿರುದ್ದ ಏನಂತಾರೆ?
4. ಅಲ್ಪಸಂಖ್ಯಾತರ ವಿರುದ್ದ ಮುಖ್ಯವಾಗಿ ಹಿಂದೂ ಸಂಘಟನೆಗಳು ಏನಾದರೂ ಹೇಳಿಕೆ ನೀಡಿದರೆ, ಘಟನೆಗಳು ನಡೆದರೆ ಸೆಟೆದೇಳುವ ನಮ್ಮ ರಾಜ್ಯದ ರಾಜಕಾರಿಣಿಗಳು ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಓವೈಸಿ ಭಾಷಣ ಆಲಿಸಿದ್ದೀರಾ?
5. ವೈಎಸ್ಆರ್ ನಿಧನದ ನಂತರ ಈಗಿನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹೈದರಾಬಾದಿನಲ್ಲಿರುವ ಚಾರ್ಮಿನಾರ್ ಮಸೀದಿ ಪಕ್ಕವಿರುವ ಐತಿಹಾಸಿಕ ಭಾಗ್ಯಲಕ್ಷ್ಮಿ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡುತ್ತಾರೆ. ಕಾಂಗ್ರೆಸ್ ಜೊತೆ ಗಳಸ್ಯ ಕಂಠಸ್ಯದಂತೆ ಸಂಬಂಧ ಹೊಂದಿದ್ದ ಓವೈಸಿ ಪಕ್ಷ ಅಂದಿನಿಂದ ಕಾಂಗ್ರೆಸ್ ಸಂಬಂಧ ಮುರಿದುಕೊಂಡು ಹಿಂದೂಸ್ತಾನದಲ್ಲಿ ಮುಸ್ಲಿಮರ ನಿರ್ನಾಮಕ್ಕೆ ಹಿಂದೂಗಳು ಮುಂದಾಗುತ್ತಿದ್ದಾರೆ ಎಂದು ಬೊಬ್ಬಿರಿಯುತ್ತಾನೆ. ಯಾವ ಪಕ್ಷಗಳಿಗೂ ಈತನ ಗಿಮಿಕ್ ಅರ್ಥವಾಗುವುದಿಲ್ಲ ?
6. ಹಿಂದೂಗಳು, ಹಿಂದೂ ಸಂಸ್ಕೃತಿ, ಆಚರಣೆ ಬಗ್ಗೆ ಕೇವಲವಾಗಿ ಮಾತನಾಡುವ ರಾಜ್ಯದ ಜಾತಿವಾದಿಗಳು, ಬುದ್ದಿಜೀವಿಗಳು ಒವೈಸಿಗೆ 'ಬುದ್ದಿ' ಹೇಳಲು ಮುಂದಾಗುತ್ತೀರಾ?
7. ಓವೈಸಿ ಭಾಷಣ ಒಂದು ಪ್ರಾಮಾಣಿಕ ತಪ್ಪು. ಉತ್ತಮ ವಾಗ್ಮಿಗಳಿಂದ ಕೆಲವೊಮ್ಮೆ ಈ ರೀತಿಯ ತಪ್ಪು ನಡೆಯುತ್ತದೆ ಎಂದು ಓವೈಸಿಪಕ್ಷ (MIM) ಆತನನ್ನು ಸಮರ್ಥಿಸಿಕೊಂಡಿದ್ದು ಸರಿಯೇ?
8. ಈತನ ಮತ್ತು ಈತನ ಪಕ್ಷದ ಹುಚ್ಚಾಟಕ್ಕೆ ಕೊನೆಯಿಲ್ಲವೇ? ದೇಶದ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಹಿಂದೂಗಳಿಲ್ಲವೇ ? ನಮ್ಮ ಸಂಸ್ಕೃತಿ, ದೇವರನ್ನು ಹೀಯಾಳಿಸಿದಾಗ ಕೊನೇ ಪಕ್ಷ ಇವರಿಗೆ ತಾನೊಬ್ಬ ಹಿಂದೂ ಎನ್ನುವ ಮನೋಭಾವನೆ ಬರುವುದಿಲ್ಲವೇ?
ಕರ್ನಾಟಕದಲ್ಲಿ 'ಕನ್ನಡಿಗರು' ಅಲ್ಪಸಂಖ್ಯಾತರು. ಹಿಂದೂ ರಾಷ್ಟ್ರ ಭಾರತದಲ್ಲಿ 'ಹಿಂದೂಗಳು' ಅಲ್ಪಸಂಖ್ಯಾತರು. ಜೈ ಕರ್ನಾಟಕ, ಜೈ ಹಿಂದ್.












Click it and Unblock the Notifications