ಹಾವೇರಿ: ಬ್ಯಾಂಕ್ ಮ್ಯಾನೇಜರ್ ಪತ್ನಿಗೆ ಕಿರುಕುಳ

ಬ್ಯಾಂಕ್ ಮ್ಯಾನೇಜರ್ ಒಬ್ಬರ ಪತ್ನಿಯೇ ಬಾಧಿತ ಮಹಿಳೆ. ಈಕೆ ಸೀಬರ್ಡ್ ಬಸ್ಸಿನಲ್ಲಿ ಬೆಳಗಾವಿಗೆ ಪ್ರಯಾಣಿಸುತ್ತಿದ್ದಾಗ ಹಾವೇರಿ ಬಳಿ ಶುಕ್ರವಾರ ರಾತ್ರಿ ಈ ಕಹಿ ಘಟನೆ ನಡೆದಿದೆ. ರಾಣೆಬನ್ನೂರಿನ ಬಳಿ ಬಸ್ಸಿನ ಚಾಲಕ, ಆರೋಪಿ ಷಕೀಲ್ ಅಹಮದ್ ಪಟೇಲ್ ಉಪಟಳ ಜಾಸ್ತಿಯಾದಾಗ ಪ್ರಯಾಣಿಕರು ಅವನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
'ಆದರೆ ತಾನು ಅಂತಹ ತಪ್ಪೇನು ಮಾಡಿಲ್ಲ. ಆಕೆ ನನಗಿಂತ ಹಿರಿಯರು. ನಾನು ಹೇಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಿ' ಎಂದು ಆರೋಪಿ ಷಕೀಲ್ ಅಲವತ್ತುಕೊಂಡಿದ್ದಾನೆ.
'ಬೆಳಗಿನ ಜಾವ 4 ಗಂಟೆಯಲ್ಲಿ ಡಾಬಾವೊಂದರ ಬಳಿ ಬಸ್ ನಿಲ್ಲಿಸಲಾಯಿತು. ಆ ಬಳಿಕ ಚಾಲಕ ಬಂದು ನನ್ನ ಸೀಟಿನ ಪಕ್ಕದಲ್ಲೇ ಕುಳಿತುಕೊಂಡು, ಚೇಷ್ಟೆ ಶುರು ಮಾಡಿದ. ಒಂದಷ್ಟು ಸಹಿಸಿಕೊಂಡೆ. ಆದರೆ ಅದು ಅತಿರೇಕಕ್ಕೆ ಹೋಗುತ್ತಿದೆ ಅನ್ನಿಸಿದಾಗ ಕೂಗಿಕೊಂಡೆ. ಆಗ ಸಹ ಪ್ರಯಾಣಿಕರು ನನ್ನ ನೆರವಿಗೆ ಬಂದರು. ಬಳಿಕ ಅವನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು' ಎಂದು ಬಾಧಿತ ಮಹಿಳೆ ತಿಳಿಸಿದ್ದಾರೆ.
ಬಂಕಾಪುರ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಯಾಣಿಕರ ಒತ್ತಾಯದ ನಂತರ ಬಸ್ಸು 6 ಗಂಟೆಗೆ ಬೆಳಗಾವಿಯತ್ತ ಚಲಿಸಿತು.












Click it and Unblock the Notifications