ಮನಸ್ಸು ಬದಲಾಯಿಸಿದ ಯಡಿಯೂರಪ್ಪ; ಶೆಟ್ಟರ್ ಸೇಫ್

ಇದರೊಂದಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲದೆ ಸುಸೂತ್ರವಾಗಿ ಉಳಿದ ಅಧಿಕಾರಾವಧಿ ಪೂರೈಸಲಿದೆ ಎಂಬುದು ದೃಢಪಟ್ಟಿದೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಶೆಟ್ಟರ್ ಸರಕಾರಕ್ಕೆ ತಮ್ಮ ಬೆಂಬಲ ಇಲ್ಲವೆಂದು ಘೋಷಿಸುವ ಕಾರ್ಯಕ್ರಮ ಹಾಕಿಕೊಂಡಿದ್ದ ಯಡಿಯೂರಪ್ಪನವರು ಹೀಗೆ ದಿಢೀರನೆ ತಮ್ಮ ನಿಲುವು ಬದಲಿಸುವುದಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಆದರೆ ಸಭೆಗೆ ಯಡಿಯೂರಪ್ಪನವರು ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಬಿಜೆಪಿ ಶಾಸಕರು/ ಸಚಿವರು ಹಾಜರಾಗಿರಲಿಲ್ಲ.
'ನನ್ನ ಜತೆಗೆ ಈಗಲೂ 42 ಶಾಸಕರು ಇದ್ದಾರೆ (ಈ ಹಿಂದೆ 60-70 ಶಾಶಕರು ಎಂದು ಹೇಳುತ್ತಿದ್ದರು). ಬಿಜೆಪಿಯಿಂದ ಸಿಡಿದುಬಂದವಷ್ಟೇ ಅಲ್ಲ. ಅನೇಕ ಮಾಜಿ/ಹಾಲಿ ಶಾಸಕ/ಸಚಿವರೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ನನಗೆ ಮತ್ತಷ್ಟು ಉತ್ಸಾಹ ಬಂದಿದೆ. ವಿರೋಧ ಪಕ್ಷವಾಗಿ ಮುಂದಿನ ಚುನಾವಣೆವರೆಗೂ ನಮ್ಮ ಜವಾಬ್ದಾರಿ ನಿಭಾಯಿಸುತ್ತೇವೆ' ಎಂದು ಅವರು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 15ಕ್ಕೆ ಹೊಸ ಡೆಡ್ ಲೈನ್: ಒಂದು ವೇಳೆ ಶೆಟ್ಟರ್ ಸರಕಾರವೇನಾದರೂ ನಮ್ಮ ಶಾಸಕರಿಗೆ ಕಿರುಕುಳ ಕೊಟ್ಟು ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದೇ ಆದರೆ ಜನವರಿ 15ರ ವೇಳೆಗೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲೂ ಸಿದ್ಧ ಎಂದು ಯಡಿಯೂರಪ್ಪ ಎಚ್ಚರಿಕೆಯ ಸಂದೇಶ ರವಾನಿಸಲು ಮರೆಯಲಿಲ್ಲ.
ಈ ಮಧ್ಯೆ, ಸರಕಾರಕ್ಕೆ ನೀಡಿರುವ ಬೆಂಬಲವನ್ನು ಯಡಿಯೂರಪ್ಪ ಬೆಂಬಲಿಗ ಶಾಸಕರು ವಾಪಸ್ ಪಡೆಯಬಹುದು ಎಂಬ ಆತಂಕದಲ್ಲಿ ಬಿಜೆಪಿ ವರಿಷ್ಠರು ನಾಳೆ ಬೆಂಗಳೂರಿನ ಹೊರವಲಯದಲ್ಲಿ ಖಾಸಗಿ ಹೋಟೆಲಿನಲ್ಲಿ ಚಿಂತನ್-ಮಂಥನ್ ಬೈಠಕ್ ಆಯೋಜಿಸಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.












Click it and Unblock the Notifications