ರಾಜ್ಯಸಭೆ ಕುರ್ಚಿ ಮೇಲೆ ನಟಿ ನಗ್ಮಾ ಕಣ್ಣು

ಕಾಂಗ್ರೆಸ್ ನಾಯಕ ವಿಲಾಸ್‌ರಾವ್ ದೇಶ್‌ಮುಖ್ ಅವರ ನಿಧನದಿಂದಾಗಿ ತೆರವಾಗಿರುವ ರಾಜ್ಯಸಭೆಯ ಸ್ಥಾನಕ್ಕೆ ಉಪಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ.
ಚಿತ್ರನಟಿ ನಗ್ಮಾ ಅವರು 2009ರ ವಿಧಾನಸಭಾ ಚುನಾವಣೆಗಳಲ್ಲಿ ಮುಂಬೈನಿಂದ ಸ್ಫರ್ಧಿಸಲು ಕಾಂಗ್ರೆಸ್ ಹೈಕಮಾಂಡ್‌ನಿಂದ ಟಿಕೆಟ್ ಕೇಳಿದ್ದರು. ನಗ್ಮಾ ಅವರಿಗೆ ಟಿಕೆಟ್ ಸಿಗದಿದ್ದರೂ ಪಕ್ಷದ ಪರ ಬಿರುಸಿನ ಪ್ರಚಾರ ಮಾಡಿ ಹಿರಿಯ ಮುಖಂಡರ ಕೃಪೆಗೆ ಒಳಗಾಗಿದ್ದರು.
ನಗ್ಮಾ ಅವರಿಗೆ ಟಿಕೆಟ್ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಆಕೆ ಪಕ್ಷದ ಕಾರ್ಯಕರ್ತೆ ಎಂದು ರಾಜ್ಯ ಘಟಕದ ಅಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಹೇಳಿದ್ದಾರೆ.
ಆದರೆ, ನಗ್ಮಾಗೆ ಟಿಕೆಟ್ ಸಿಗುವುದು ಅಷ್ಟು ಸುಲಭವಿಲ್ಲ. ಪಕ್ಷದ ಒಂದು ಬಣ ವಿಲಾಸ್‌ರಾವ್ ದೇಶ್‌ಮುಖ್ ಪತ್ನಿ ವೈಶಾಲಿನಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ದೇಶ್ ಮುಖ್ ಕುಟುಂಬ ರಾಜಕೀಯದತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದೆ.
ಮಹಿಳಾ ನಾಯಕಿ ರಜನಿ ಪಾಟೀಲ್, ಮಾಜಿ ಸಚಿವ ರೋಹಿದಾಸ್ ಪಾಟೀಲ್, ಮಾಜಿ ಶಾಸಕ ಮುಜಾಫರ್ ಹುಸೈನ್, ಮಾಜಿ ಶಿವಸೇನಾ ನಾಯಕ ಪರಿವರ್ತಿತ ಕಾಂಗ್ರೆಸಿಗ ಸುಭೋದ್ ಮೋಹಿತೆ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶಿವಸೇನೆ-ಬಿಜೆಪಿ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತಾಗಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಮೈತ್ರಿಪಕ್ಷ ಎನ್‌ಸಿಪಿ ಸದಸ್ಯರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ಅಭ್ಯರ್ಥಿ ಸುಲಭದಲ್ಲಿ ಗೆಲ್ಲುವ ಸಾಧ್ಯತೆಯಿದೆ.
ಹೈ ಬೆಂಬಲ ನಗ್ಮಾಗೆ?: ಗುಜರಾತ್ ಕಡೆ ಲಿಂಕ್ ಇರುವ ನಗ್ಮಾ ಅವರಿಗೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಬೆಂಬಲ ಸಿಕ್ಕಿದೆ. ಮುಸ್ಲಿಂ, ಹಿಂದೂ ಸಮ್ಮಿಶ್ರ ಕುಟುಂಬ ಹೊಂದಿರುವ ನಗ್ಮಾ ಅವರಿಗೆ ಟಿಕೆಟ್ ನೀಡಿದರೆ ಗುಜರಾತ್ ಸೇರಿದಂತೆ ಮುಂಬೈನಲ್ಲೂ ಮುಸ್ಲಿಂ ಮತ ಸೆಳೆಯುವುದು ಸುಲಭ ಎಂದು ಹೈಕಮಾಂಡ್ ಯೋಜಿಸಿದೆ.
ಜೊತೆಗೆ, ನಗ್ಮಾ ಅವರು ಭೋಜ್ ಪುರಿ ನಟಿಯಾಗಿ ಜನಪ್ರಿಯತೆ ಗಳಿಸಿರುವುದು ಇನ್ನಷ್ಟು ಅನುಕೂಲಕರವಾಗಿದೆ. ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕದಲ್ಲಿ ನಗ್ಮಾ ನಟಿಯಾಗಿ ಹೆಸರು ಮಾಡಿದ್ದಾರೆ.












Click it and Unblock the Notifications