ಹೊಸ ವರ್ಷಾಚರಣೆ ಅಪಘಾತಕ್ಕೆ ಮಹಿಳಾ ಟೆಕ್ಕಿ ಬಲಿ

techie-jayasree-rao-killed-accident-byatarayanapura-bng
ಬೆಂಗಳೂರು, ಜ.2: ಹೊಸ ವರ್ಷದಂದು ಮಹಿಳಾ ಟೆಕ್ಕಿಯೊಬ್ಬರು ಅಪಘಾತಕ್ಕೆ ಬಲಿಯಾಗಿದ್ದಾನೆ. ಹೊಸ ವರುಷದ ಶುಭಾಶಯ ಕೋರಲು ಮಗನ ಜತೆ ದ್ವಿಚಕ್ರ ವಾಹನದಲ್ಲಿ ಮಾವನ ಮನೆಗೆ ತೆರಳುತ್ತಿದ್ದ ಟೆಕ್ಕಿ ಜಯಶ್ರೀ ರಾವ್ (35) ಅವರಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಅವರು ಮೃತಪಟ್ಟು, ಐದು ವರ್ಷದ ಮಗ ನಿಖಿಲ್ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ITPL ಬಳಿ ಸಾಫ್ಟ್‌ ವೇರ್ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಜಯಶ್ರೀ, ಪತಿ ಪ್ರಸನ್ನ ರಾವ್ ಜತೆ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಅಪಾರ್ಟ್‌ ಮೆಂಟಿನಲ್ಲಿ ವಾಸವಿದ್ದರು. ಹೊಸ ವರ್ಷಕ್ಕೆ ರಜೆ ಇದ್ದ ಕಾರಣ ಬಸವೇಶ್ವರ ನಗರದಲ್ಲಿ ಮಾವ ಚಂದ್ರಶೇಖರ್ ಅವರನ್ನು ನೋಡಲು ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

ನಾಗರಬಾವಿ ನ್ಯೂ ಬಿಡಿಎ ರಿಂಗ್ ರಸ್ತೆ, ಐಟಿಐ ಲೇ ಔಟ್ ಜಂಕ್ಷನ್ ಸಮೀಪ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಹಿಂದಿನಿಂದ ಬಂದ ಕ್ಯಾಂಟರ್, ಜಯಶ್ರೀ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಜಯಶ್ರೀ ಅವರ ಮೇಲೆ ಕ್ಯಾಂಟರ್ ಹಿಂದಿನ ಚಕ್ರ ಹರಿದಿದೆ. ಮತ್ತೊಂದು ಕಡೆ ಬಿದ್ದ ನಿಖಿಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತ ಮಾಡಿದ ಚಾಲಕ ಆಂಧ್ರ ಪ್ರದೇಶ ನೋಂದಣಿಯ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+