ಚಳಿಗಾಲದಲ್ಲೂ ಕೊತಕೊತನೆ ಕುದಿಯತೊಡಗಿದ ಬಿಎಸ್‌ವೈ

bjp-govt-kicks-out-bsy-loyalists-yeddyurappa-on-warpath
ಮೈಸೂರು, ಡಿ.26: ರಾಜಧಾನಿಯಲ್ಲಿ ಮೂರು ದಿನಗಳಿಂದ ಚಳಿ ಹೆಚ್ಚಾಗಿದೆ. ಆದರೆ ಆ ಚಳಿಗೆ ಕಾವು ಕೊಡುವಂತೆ ಆಡಳಿತಾರೂಢ ಬಿಜೆಪಿ ಪಕ್ಷವು ಹೋಲ್ ಸೇಲ್ ಆಗಿ ಒಂದಷ್ಟು ಶಾಸಕರನ್ನು ನಿಗಮ/ ಮಂಡಳಿಗಳಿಂದ ಹೊರಗಟ್ಟಿದೆ.

ಕುತೂಹಲದ ಸಂಗತಿಯೆಂದರೆ ಈ ಕಾವು ನೇರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಾಕಿದೆ. ಹಾಗಾಗಿ ಧನುರ್ಮಾಸ ಚಳಿಯಲ್ಲಿ ದೂರ್ವಾಸ ಮುನಿಯಾಗಿ ಕೊತಕೊತನೆ ಕುದಿಯತೊಡಗಿದ್ದಾರೆ.

ಬಿಜೆಪಿ ಸರಕಾರದ ಭವಿಷ್ಯ ಮುಸುಕು:
ಮೊನ್ನೆ ಮೊನ್ನೆ ಪುಟ್ಸಾಮಿ, ಬಸವರಾಜು ವಿರುದ್ಧ ಅನಗತ್ಯವಾಗಿ ಕ್ರಮ ಕೈಗೊಂಡಿರಿ. ಅಷ್ಟಕ್ಕೇ ಸುಮ್ನಾಗ್ತಾರೆ ಅಂದ್ಕೋಂಡಿದ್ದೆ. ಆದರೆ ಈಗ ಮತ್ತಷ್ಟು ನನ್ನ ಬೆಂಬಲಿಗರನ್ನು ಅಧಿಕಾರ ವಂಚಿತರಾಗಿಸಿದ್ದಾರೆ.

ಇನ್ನು ಈ ಬಿಜೆಪಿ ಮಂದಿಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎದ್ದುಕುಂತಿರುವ ಯಡಿಯೂರಪ್ಪ, ಸೀದಾ ಗೌರ್ನರ್ ಅಂಗಳಕ್ಕೆ ಹಾರಲು ಅನುಮತಿ ಪಡೆದಿದ್ದಾರೆ. ಇದರಿಂದ ಈ ಹಿಂದೆ ಯಡಿಯೂರಪ್ಪ ಅವರೇ ನೀಡಿದ್ದ ಜ. 20ರ ಗಡುವು ಹಾಗಿರಲಿ ಅದಕ್ಕೂ ಮುನ್ನವೇ ಬಿಜೆಪಿ ಭವಿಷ್ಯ ಮುಸುಕಾಗಿದೆ.

ಅದಕ್ಕೂ ಮುನ್ನ, ಗವರ್ನರ್ ಮನೆ ಒಕ್ಕದಲ್ಲೇ ಇರುವ ಶಕ್ತಿಕೇಂದ್ರಕ್ಕೆ ಲಗ್ಗೆ ಹಾಕಿ, ಶೆಟ್ಟರ್ ಅವರ ಖುರ್ಚಿಯನ್ನು ಅಲ್ಲಾಡಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅಂದರೆ 11 ಗಂಟೆಗೆಲ್ಲ ಯಡಿಯೂರಪ್ಪ ಬೆಂಬಲಿಗರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವುತ್ತಿರುವ ಸಿಎಂ ಶೆಟ್ಟರ್ ಗೆ ನಮ್ಮ ಬೆಂಬಲ ಬೇಡವೆಂದಾದಲ್ಲಿ ಒಂದು ಕ್ಷಣವೂ ಅವರು ಅಧಿಕಾರದಲ್ಲಿ ಮುಂದುವರಿಯುವುದು ಬೇಡ, ತಕ್ಷಣವೇ ಜನರ ಮುಂದೆ ಹೋಗುವುದು ಒಳಿತು ಎಂದು ಯಡಿಯೂರಪ್ಪ ಚಳಿಯಲ್ಲಿ ಹಲ್ಲು ಕಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+