ಮಂಜುನಾಥ ಸ್ವಾಮಿಗೆ ಯಡಿಯೂರಪ್ಪ ವಿಶೇಷ ಪೂಜೆ

BS Yeddyurappa
ಉಡುಪಿ, ಡಿ.22: ನನಗೆ ಸಿಎಂ ಆಗೋ ಹುಚ್ಚು ಇಲ್ಲ. ನನ್ನ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಲಿ, ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಗುಡುಗಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ದೇಗುಲಗಳಿಗೆ ಭೇಟಿ ನೀಡಿರುವ ಯಡಿಯೂರಪ್ಪ ಅವರು ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳ್ಳಿ ರಥೋತ್ಸವ ಮುಂತಾದ ಪ್ರಮುಖ ಸೇವಾ ಕಾರ್ಯದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಇದಲ್ಲದೆ, ಕೊಲ್ಲೂರು ಮುಕಾಂಬಿಕೆಗೆ ಪಾದಕ್ಕೆ ಎರೆಗಿದ ಯಡಿಯೂರಪ್ಪ ಅವರು ಅಲ್ಲೂ ಕೂಡಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲೇ ಬಿಜೆಪಿ ಸರ್ಕಾರ ಕೆಳಗಿಳಿಸುವ ಸೂಚನೆಯನ್ನು ಯಡಿಯೂರಪ್ಪ ಹೊರ ಹಾಕಿದ್ದರು.

ಆಣೆ ಪ್ರಮಾಣ ನಂತ ಎರಡನೇ ಭೇಟಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಸ್ಟ್ 15, 2011 ರಂದು ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಮಾಡುವ ಮೂಲಕ ಮಂಜುನಾಥ ಸ್ವಾಮಿಯ ಮುಂದೆ ಕ್ಷಮೆ ಯಾಚಿಸಿದ್ದರು.

ಆಣೆ-ಪ್ರಮಾಣದಿಂದ ಕುತೂಹಲ ಕೆರಳಿಸಿದ್ದ ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರ ಸ್ವಾಮಿ ನಡುವಣ ಕದನ ತಣಿದು ಅಧಿಕಾರ ಕಳೆದುಕೊಂಡಿದ್ದರು.

ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೂನ್ 27,2011 ರಂದು ಮಧ್ಯಾಹ್ನ 12.30ಕ್ಕೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಸತ್ಯ ನಿವೇದನೆ ನೆರವೇರಿಸಿದರು. ತಮ್ಮಿಬ್ಬರ ಭೇಟಿಯಿಂದ ಶ್ರೀಕ್ಷೇತ್ರದಲ್ಲಿ ಉಂಟಾದ ಅನಾನುಕೂಲಗಳಿಗೆ ಸಾರ್ವಜನಿಕರಿಗೆ ಮೊದಲನೆಯದಾಗಿ ಕ್ಷಮೆ ಬೇಡುವೆ ಎಂದಿದ್ದರು.

ಧಾರ್ಮಿಕ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಂಡ ಇಬ್ಬರೂ ನಾಯಕರಿಗೆ ಭಕ್ತಾದಿಗಳು ಛೀಮಾರಿ ಹಾಕಿದ್ದರು. ಆದರೆ ತಮ್ಮ ನಾಯಕರು ಮಾತು ಉಳಿಸಿಕೊಂಡರು ಎಂದು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಗೆ ಜೈಕಾರ ಹಾಕಿದ್ದರು.

ರಾಜಕೀಯ ಗೊಂದಲಗಳನ್ನು ದೇವಸ್ಥಾನದೊಳಗೆ ತಂದಿರುವ ಯಡಿಯೂರಪ್ಪನವರು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶ. ಹೀಗಾಗಿ ಅವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಡಬಾರದು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. [ಯಡ್ಡಿ - ಎಚ್ಡಿಕೆ ಧರ್ಮ ( ಡ್ರಾಮ ) ಯುದ್ಧ! ರೀಕ್ಯಾಪ್ ಓದಿ]

ಅವರಲ್ಲಿ ಆತ್ಮವಿಶ್ವಾಸವಿದ್ದರೆ, ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದ್ದಿದ್ದರೆ ಇಂದು ಆಣೆ ಪ್ರಮಾಣ ಮಾಡಬೇಕಾಗಿತ್ತು. ಆಣೆ ಮಾಡದೆ ಹೇಡಿಯಂತೆ ವರ್ತಿಸುತ್ತಿದ್ದಾರೆ. ದೇವರಿಗೇ ಅಪಚಾರ ಮಾಡಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೂರದೂರದಿಂದ ಬಂದಿದ್ದರೂ ದೇವಸ್ಥಾನದೊಳಗೆ ಬಿಡಲು ನಿರಾಕರಿಸುತ್ತಿರುವುದು ಅನ್ಯಾಯ ಎಂದು ಕೂಗುತ್ತಿದ್ದರು.

ಯಾವುದೇ ಒಬ್ಬ ವ್ಯಕ್ತಿ ತಾನೊಬ್ಬನೇ ದೇವರ ಎದುರು ನಿಂತು ಅವರ ಸತ್ಯವನ್ನು ಬಿನ್ನವಿಸಿದರೆ ಅದು ಪ್ರಮಾಣ ಆಗುವುದಿಲ್ಲ. ಆಣೆ ಪ್ರಮಾಣಕ್ಕೆ ಬೇರೆಯದೆ ವಿಧಿ ವಿಧಾನಗಳಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+