ಬಿಜೆಪಿ ಮೇಲೆ ಮತ್ತೆ ಯಡಿಯೂರಪ್ಪ ವಾಕ್ ಪ್ರಹಾರ

ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರ ಸಹವಾಸವೇ ಬೇಡವೆಂದು ಏಕಾಂಗಿಯಾಗಿ ರಾಜ್ಯದೆಲ್ಲಡೆ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಅಲ್ಲಿ ನರೇಂದ್ರ ಮೋದಿ ಹೆಸರು 'ಮೋಡಿ' ಮಾಡಿತೇ ಹೊರತು ಬಿಜೆಪಿಯಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗುಜರಾತ್ ಫಲಿತಾಂಶದ ನಂತರ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಮೋದಿ ಬರೀ ತಮ್ಮ ಫೋಟೋ ಮುಂದಿಟ್ಟುಕೊಂಡು ಪ್ರಚಾರ ನಡೆಸಿ ಗೆಲುವು ಸಾಧಿಸಿದ್ದಾರೆ, ಅಲ್ಲಿರುವುದು ಮೋದಿ ಮುಂದಾಳುತ್ವದ 'ಪ್ರಾದೇಶಿಕ ಬಿಜೆಪಿ ಪಕ್ಷ'ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಕೆಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಯಡಿಯೂರಪ್ಪ, ಧನಂಜಯಕುಮಾರ್ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಬಿ ಜಿ ಬಣಕರ್, ಜಬ್ಬರ್ ಖಾನ್ ಹೊನ್ನಳ್ಳಿ, ವಿಜಯ್ ಸಂಕೇಶ್ವರ, ಬಸವರಾಜ್ ಪಾಟೀಲ್ ಅನ್ವರಿ, ಕೆ ಎಚ್ ಶ್ರೀನಿವಾಸ್ ಅವರನ್ನು ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಎಂ ಡಿ ಲಕ್ಷೀನಾರಾಯಣ, ರಾಜೇಂದ್ರ ಗೋಖಲೆ, ಶಂಕರಗೌಡ ಪಾಟೀಲರನ್ನು ಮತ್ತು ಮಾಧ್ಯಮ ಮುಖ್ಯಸ್ಥರಾಗಿ ಬಿ ಆರ್ ಪಾಟೀಲರನ್ನು ಬಿಎಸ್ವೈ ನೇಮಿಸಿದ್ದಾರೆ.












Click it and Unblock the Notifications