ಮೋದಿ ಗೆಲುವು ಖುಷಿ ಇದೆ; ಬಿಜೆಪಿಗೆ ಮರಳಲ್ಲ

BS Yeddyurappa reaction on Modi's victory
ಬೆಂಗಳೂರು, ಡಿ.20 : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಗೆಲುವು ನಿರೀಕ್ಷಿತ. ಆದರೆ, ಇದು ಬಿಜೆಪಿಗೆ ಭರ್ಜರಿ ಗೆಲುವು ಎನ್ನಲಿಕ್ಕೆ ಆಗುವುದಿಲ್ಲ. ಇದು ಮೋದಿ ಅವರ ವೈಯಕ್ತಿಕ ಗೆಲುವು ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಮೋದಿ ಅವರ ವೈಯಕ್ತಿಕ ವರ್ಚಸ್ಸಿನಿಂದ ಗುಜರಾತಿನಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಮೋದಿ ಅವರ ದೂರದರ್ಶಿತ್ವ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನ ಅವರಿಗೆ ಮತ ಹಾಕಿದ್ದಾರೆ. ಇದರಲ್ಲಿ ಬಿಜೆಪಿ ಹಿರಿಯ ನಾಯಕರ ಪಾಲು ಸೊನ್ನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾನು ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಂತೆ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೆ. ಆದರೆ, ನನ್ನ ಕನಸು ಭಗ್ನವಾಯಿತು.

ಪ್ರಧಾನಿ ಹುದ್ದೆಗೆ ಮೋದಿ : ಬಿಜೆಪಿಯಲ್ಲಿದ್ದಾಗ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಅವರೇ ಸೂಕ್ತ ಎಂದು ಹೇಳಿದ್ದೆ. ಈಗಲೂ ಅದೇ ಮಾತನ್ನು ಹೇಳುತ್ತೇನೆ. ಮೋದಿ ಪ್ರಧಾನಿ ಹುದ್ದೆದೆ ಸೂಕ್ತ ವ್ಯಕ್ತಿ.

ಸರ್ವರಿಗೂ ಸಮಬಾಳು, ಸಮಪಾಲು, ಸಮಾಜದಲ್ಲಿ ಸಾಮರಸ್ಯ ಮಂತ್ರವನ್ನು ನಿಜವಾಗಿಸಿದ್ದು ಮೋದಿ ಮಾತ್ರ ಎಂದು ಯಡಿಯೂರಪ್ಪ ಹೊಗಳಿದರು.

ಮತ್ತೆ ಬಿಜೆಪಿಗೆ: ಗೆಳೆತನವೇ ಬೇರೆ, ರಾಜಕೀಯವೇ ಬೇರೆ ಮತ್ತೆ ಬಿಜೆಪಿ ಕಡೆ ಮುಖ ಹಾಕುವುದಿಲ್ಲ. ಬಿಜೆಪಿ ತೊರೆಯದಂತೆ ಮೋದಿ ಕೇಳಿಕೊಂಡಿದ್ದು ನಿಜ. ಆದರೆ, ಪರಿಸ್ಥಿತಿ ಕೈ ಮೀರಿತ್ತು ಎಂದು ಯಡಿಯೂರಪ್ಪ ಹೇಳಿದರು.

ಕಲ್ಯಾಣ್ ಸಿಂಗ್, ಉಮಾಭಾರತಿ ಹಿಂತಿರುಗಿದಂತೆ ಬಿಜೆಪಿಗೆ ಯಡಿಯೂರಪ್ಪ ಕೂಡಾ ಮರಳುತ್ತಾರೆ, ಇಲ್ಲವೇ ಕೇಶು ಭಾಯಿ ಪಟೇಲ್ ಗೆ ಬಂದ ಪರಿಸ್ಥಿತಿ ಖಂಡಿತ ಎಂಬ ಸುದ್ದಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯಡಿಯೂರಪ್ಪ, ಕೆಜೆಪಿ ಭವಿಷ್ಯದ ಬಗ್ಗೆ ಜನರು ನಿರ್ಧರಿಸುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+