ಬೆಂಗಳೂರು ದಕ್ಷಿಣದಲ್ಲಿ 7ಕೋಟಿ ರೂ. ಕಳವು ಮಾಲು ವಶ

ಇದರಿಂದ ಇತ್ತೀಚನ ದಿನಗಳಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ತಮ್ಮ ಅಮೂಲ್ಯ ಸೊತ್ತುಗಳನ್ನು ಕಳೆದುಕೊಂಡ ಜನರು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹೋಗಿ, ಕಳೆದುಹೋದ ತಮ್ಮ ವಸ್ತುವಿನ ಬಗ್ಗೆ ವಿಚಾರಿಸಬಹುದು.
ಈ ಪೊಲೀಸರು ಒಟ್ಟು 434 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತರಿಂದ 24 ಲಕ್ಷ ರೂ. ನಗದು, 3.45 ಕೋಟಿ ರೂ. ವೊತ್ತದ 11 ಕೆಜಿ ಚಿನ್ನ, 27 ಲಕ್ಷ ರೂ ಮೊತ್ತದ 36 ಕೆಜಿ ಬೆಳ್ಳಿಯ ಆಭರಣ,
1.14 ಕೋಟಿ ರೂ. ಮೊತ್ತದ 242 ದ್ವಿಚಕ್ರ ವಾಹನಗಳು, 7 ಲಕ್ಷ ರೂ. ಮೊತ್ತದ 9 ಆಟೊ ರಿಕ್ಷಾಗಳು, 1.13 ಕೋಟಿ ರೂ. ಮೊತ್ತದ 25 ಕಾರುಗಳು, 17 ಲಕ್ಷ ರೂ. ಮೊತ್ತದ 28 ಲ್ಯಾಪ್ ಟಾಪ್‌ಗಳು, 35 ಲಕ್ಷ ರೂ. ಮೊತ್ತದ 230 ವೊಬೈಲ್‌ಗಳು ಸೇರಿ ಒಟ್ಟು 7.21 ಕೋಟಿ ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಹನುಮಂತ ನಗರ, ಆಡುಗೋಡಿ, ಸುಬ್ರಮಣ್ಯಪುರ, ಜಯನಗರ, ಸಿದ್ದಾಪುರ, ಕುಮಾರಸ್ವಾಮಿ ಲೇಔಟ್, ಚನ್ನಮ್ಮನಕೆರೆ ಅಚ್ಚುಕಟ್ಟು, ಬಸವನಗುಡಿ, ಚಾಮರಾಜ ಪೇಟೆ, ಜೆಪಿ ನಗರ, ಬನಶಂಕರಿ, ಸೆಂಟ್ರಲ್, ತ್ಯಾಗರಾಜ ನಗರ, ಶಂಕರಪುರ, ಕೆಂಪೇಗೌಡ ನಗರ ಹಾಗೂ ಗಿರಿನಗರ ಠಾಣಾ ಪೊಲೀಸರು ಪಾಲ್ಗೊಂಡಿದ್ದರು.












Click it and Unblock the Notifications