ಪ್ರಳಯ ಆಗೋಲ್ಲ ಬರೀ ಸುಳ್ಳು : ಇಸ್ರೋ ವಿಜ್ಞಾನಿ

ಬೆಂಗಳೂರು, ಡಿ.19: ಡಿಸೆಂಬರ್ 21 ರಂದು ಜಗತ್ತಿನಲ್ಲಿ ಪ್ರಳಯವಾಗುತ್ತದೆ ಎಂದು ಜನರು ಆತಂಕ ಪಡಬೇಕಿಲ್ಲ. ಚಳಿಗಾಲದ ಒಂದು ದಿನವಾಗಿ ನಿರಾತಂಕವಾಗಿ ಕಳೆದು ಹೋಗಲಿದೆ. ಯಾವುದೇ ಸಣ್ಣ ಪ್ರಮಾಣದ ಪರಿಣಾಮದ ನಿರೀಕ್ಷೆಯಿಲ್ಲ. ಭವಿಷ್ಯಗಾರರ ಮಾತು ಕೇಳಬೇಡಿ ಎಂದು ಖ್ಯಾತ ವಿಜ್ಞಾನಿ ಪ್ರೊ ಯುಆರ್ ರಾವ್ ಹೇಳಿದ್ದಾರೆ.

ಪ್ರಳಯದ ಬೊಗಳೆ ಬಗ್ಗೆ ಜನತೆಗೆ ಇಸ್ರೋ ಕಡೆಯಿಂದ ಸಾಕಷ್ಟು ಕಡೆ ಅರಿವು ಮೂಡಿಸಲಾಗಿದೆ. ಭವಿಷ್ಯಗಾರರು, ಜ್ಯೋತಿಷಿಗಳು, ಮಾಧ್ಯಮಗಳು ಇನ್ನಾದರೂ ಎಚ್ಚೆತ್ತುಕೊಂಡು ಪ್ರಳಯದ ಬಗ್ಗೆ ನಿಜವಾದ ಮಾಹಿತಿ ಜನರಿಗೆ ತಿಳಿಸುವುದನ್ನು ರೂಢಿಸಿಕೊಳ್ಳಲಿ ಎಂದು ಯುಆರ್ ರಾವ್ ಹೇಳಿದರು.

ಡಿ.21ರಂದು ಯಾವುದೇ ಪ್ರಳಯ ಸಂಭವಿಸುವುದಿಲ್ಲ. ಎಂದಿನಂತೆ ಸೂರ್ಯೋದಯ, ಸೂರ್ಯಾಸ್ತ ಉಂಟಾಗುತ್ತದೆ. ಈ ವದಂತಿಗಳಿಗೆಲ್ಲಾ ಯಾರೂ ಭಯ ಪಡುವ ಅಗತ್ಯವಿಲ್ಲ. ಪ್ರಳಯ ಉಂಟಾಗುತ್ತದೆ ಎಂದು ಯಾರೋ ಕೆಲವರು ಜ್ಯೋತಿಷಿಗಳು
ಹೇಳಿರಬಹುದೇನೋ. ಅದು ಬಿಟ್ಟರೆ ಯಾವುದೇ ಅವಘಡ ಸಂಭವಿಸುವುದಿಲ್ಲ ಎಂದು ಪ್ರೊ.ರಾವ್ ಹೇಳಿದ್ದಾರೆ.

ಮಾಯನ್ ಕ್ಯಾಲೆಂಡರ್ ನೋಡಿ ನಾವು ದೈನಂದಿನ ಕ್ರಿಯೆ ನಡೆಸುತ್ತಿಲ್ಲ. ಮಾಯನ್ ಕ್ಯಾಲೆಂಡರ್ ಪ್ರಾಕೃತಿಕ ಚಟುವಟಿಕೆ ಹಾಗೂ ಕಾಸ್ಮಿಕ್ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ಅಲ್ಲಿ ಜನರ ನಂಬಿಕೆ ಇರಬಹುದು. ಇದರಿಂದ ವಿಶ್ವದ ಎಲ್ಲೆಡೆ ತೊಂದರೆಯಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ.

ಮಂಗಳದ ಅಂಗಳಕ್ಕೆ ಮಾನವ: ಮುಂಬರುವ ದಶಕದಲ್ಲಿ ಮಂಗಳಕ್ಕೆ ಮಾನವ ಹಾರುವುದಷ್ಟೇ ಅಲ್ಲದೆ, ಮಂಗಳ ಗ್ರಹದಲ್ಲಿ ನೆಲೆಸಲು ಆರಂಭಿಸಬಹುದು.

ಮಂಗಳ ಗ್ರಹದಲ್ಲಿ ನೀರಿನ ಅಂಶಗಳು ಪತ್ತೆಯಾಗಿವೆ. ಮನುಷ್ಯ ವಾಸಿಸಲು ಯೋಗ್ಯ ವಾತಾವರಣ ಇದೆ. ಹೀಗಾಗಿ ಮುಂದಿನ ಹತ್ತು ವರ್ಷಗಳಲ್ಲಿ ಮಾನವ ಕಾಲಿಡಲಿದ್ದಾನೆ. ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಮಂಗಳ ಗ್ರಹ ಯಾತ್ರೆ
ಕೈಗೊಳ್ಳಲಿವೆ ಎಂದು ಪ್ರೊ ರಾವ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+