ವಿಶ್ವಕಪ್ ತಂಡದ ಕರ್ನಾಟಕದ ಕ್ರಿಕೆಟಿಗರಿಗೆ ಬಹುಮಾನ

CM announces cash award to blind cricketers
ಬೆಂಗಳೂರು, ಡಿ. 15 : ಪಾಕಿಸ್ತಾನವನ್ನು ಸದೆಬಡಿದು ಟಿ20 ಕ್ರಿಕೆಟ್ ವಿಶ್ವಕಪ್ ಎತ್ತಿದ ಭಾರತದ ಅಂಧರ ತಂಡದಲ್ಲಿದ್ದ ಕರ್ನಾಟಕದ ಮೂರು ಆಟಗಾರರಾದ ತಂಡದ ನಾಯಕ ಶೇಖರ್ ನಾಯಕ್, ಪ್ರಕಾಶ್ ಜಯರಾಮಯ್ಯ ಮತ್ತು ಎಸ್. ರವಿ ಅವರಿಗೆ 3 ಲಕ್ಷ ರು. ನಗದು ಬಹುಮಾನ ನೀಡುವುದಾಗಿ ಕರ್ನಾಟಕ ಸರಕಾರ ಘೋಷಿಸಿದೆ.

ತಮ್ಮ ನಿವಾಸದಲ್ಲಿ ಕ್ರಿಕೆಟ್ ಕಪ್ ವಿಜೇತರನ್ನು ಸನ್ಮಾನ ಮಾಡಿದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಟ್ರೋಫಿ ಗೆದ್ದ ಆಟಗಾರರಿಗೆ ಕ್ರೀಡಾ ಕೋಟಾದ ಆಧಾರದ ಮೇಲೆ ಸರಕಾರದ ವತಿಯಿಂದ ನಿವೇಶನ ನೀಡಬೇಕೆಂಬ ಮನವಿಯನ್ನು ಪರಿಶೀಲಿಸುವುದಾಗಿ ವಾಗ್ದಾನ ನೀಡಿದರು.

ವಿಶ್ವಕಪ್ ಗೆದ್ದ ಅಂಧ ಕ್ರಿಕೆಟರಿಗೆ ಉಳಿದ ಕ್ರಿಕೆಟಗರಿಗೆ ನೀಡುವಂತೆ ಬೆಂಗಳೂರಿನಲ್ಲಿ ನಿವೇಶನ ನೀಡಬೇಕೆಂದು ಬೆಂಗಳೂರಿನಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜಿಸಿದ್ದ ಸಂಘಟಕರು ಮತ್ತು ಸಮರ್ಥನಮ್ ಟ್ರಸ್ಟ್ ಫಾರ್ ಡಿಸೇಬಲ್ಡ್ ಸಂಸ್ಥೆ ಮುಖ್ಯಮಂತ್ರಿಗೆ ಮಾಡಿದ್ದವು. ಟಿ20 ವಿಶ್ವಕಪ್ ಆಯೋಜಿಸಲು ಸರಕಾರದಿಂದ ಹಣ ಬಿಡುಗಡೆ ಮಾಡಿದ್ದಕ್ಕೆ ಈ ಸಂಸ್ಥೆಗಳು ಸರಕಾರಕ್ಕೆ ಧನ್ಯವಾದ ಅರ್ಪಿಸಿವೆ.

ಗುಜರಾತ್ ಮಾದರಿಯಂತೆ ಅಂಗವಿಕಲರ ಕ್ರೀಡೆಯನ್ನು ಪ್ರೋತ್ಸಾಹಿಸಲು ಪ್ರತ್ಯೇಕ ನಿಧಿಯನ್ನು ಒದಗಿಸಬೇಕು ಎಂದು ಮನವಿ ಮಾಡಿವೆ. ಅಂಧ ಕ್ರಿಕೆಟಿಗರಿಗೆ ಸನ್ಮಾನ ಮಾಡಿದ ಸಂದರ್ಭದಲ್ಲಿ ವಿಶ್ವ ಅಂಧ ಕ್ರಿಕೆಟ್ ಕೌನ್ಸಿಲ್‌ನ ಪದಾಧಿಕಾರಿಗಳು, ಸಮರ್ಥನಮ್ ಟ್ರಸ್ಟ್‌ನ ಟ್ರಸ್ಟಿಗಳು, ಕ್ರೀಡಾ ಮತ್ತು ಯುವ ಸೇವೆ ಇಲಾಖೆಯ ಕಾರ್ಯದರ್ಶಿಗಳು ಮುಖ್ಯಮಂತ್ರಿ ನಿವಾಸದಲ್ಲಿ ಹಾಜರಿದ್ದರು.

ಒಂದು ಕಡೆ ಹಿರಿಯ ಕ್ರಿಕೆಟ್ ಆಟಗಾರರು ಕಳಪೆ ಆಟವಾಡುತ್ತಿದ್ದರೆ, ಅದ್ಭುತವಾಗಿ ಆಡಿ ಭಾರತದ ಧ್ವಜವನ್ನು ಅಂಧ ಕ್ರಿಕೆಟಿಗರು ಎತ್ತಿಹಿಡಿದಿರುವುದು ನೂರಾರು ಅಭಿಮಾನಿಗಳಿಗೆ ಹರ್ಷ ತಂದಿದೆ. ಮೂವೆನ್‌ಪಿಕ್ ಹೋಟೆಲಿನಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಆಟಗಾರರನ್ನು ತೆರೆದ ಜೀಪಿನಲ್ಲಿ ಒಯ್ಯುವಾಗ ದಾರಿಯುದ್ದಕ್ಕೂ ನೂರಾರು ಮಕ್ಕಳು ಭಾರತದ ತ್ರಿವರ್ಣ ಧ್ವಜ ಹಿಡಿದು ಕ್ರಿಕೆಟ್ ಆಟಗಾರರಿಗೆ ಜಯಘೋಷ ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+