ಕಸದ ಸಮಸ್ಯೆ: ಮೇಯರ್, ಆಯುಕ್ತರ ಮೇಲೆ ಲೋಕಾ ತನಿಖೆ

ಕಸದ ಸಮಸ್ಯೆ ಕಸ ವಿಲೇವಾರಿಗಾಗಿ ಹೊಸದಾಗಿ ಕರೆಯಲಾಗಿರುವ ಟೆಂಡರ್ ನಲ್ಲಿ ನಡೆದಿರುವ ಅಕ್ರಮದ ವಿರುದ್ಧ ಲೋಕಾಯುಕ್ತ ಕೋರ್ಟಿನಲ್ಲಿ ದೂರು ನೀಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್, ಮೇಯರ್ ವೆಂಕಟೇಶ್ ಮೂರ್ತಿ ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಸೇರಿದಂತೆ 7 ಜನರ ವಿರುದ್ಧ ತನಿಖೆ ನಡೆಸಿ ಜ.24, 2013ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಲಾಗಿದೆ.
ಮೇಯರ್ ಹಾಗೂ ಬಿಬಿಎಂಪಿ ಆಯುಕ್ತ ಸೇರಿದಂತೆ 7 ಜನರ ಮೇಲೆ ಅಕ್ರಮ ಅವ್ಯವಹಾರ, ಅಧಿಕಾರ ದುರ್ಬಳಕೆ ಆರೋಪಗಳನ್ನು ಹೊರೆಸಿ ಮಾಜಿ ಮೇಯರ್ ಪಿಆರ್ ರಮೇಶ್ ಅವ್ಅರು ದೂರು ಸಲ್ಲಿಸಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ನ್ಯಾಯಾಲಯ ಈ ಬಗ್ಗೆ ಅಗತ್ಯ ವಿವರ ಪಡೆದು ಕಸ ವಿಲೇವಾರಿ ಟೆಂಡರ್ ನಲ್ಲಿ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿ ಜ.24ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕಸ ವಿಲೇವಾರಿ ಟೆಂಡರ್ ನಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಕಡಿಮೆ ಮೊತ್ತಕ್ಕೆ ಟೆಂಡರ್ ಬಿಡ್ ಮಾಡಿದವರಿಗೆ ಟೆಂಡರ್ ನೀಡದೆ ಹೆಚ್ಚಿನ ಮೊತ್ತ ನೀಡಿದವರಿಗೆ ಕಸ ವಿಲೇವಾರಿ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಮೇಯರ್ ಪಿಆರ್ ರಮೇಶ್ ಮನವಿ ಸಲ್ಲಿಸಿದ್ದರು.
ಅಲ್ಲದೆ ಮಂಡೂರು ಬಳಿ ಸಂರಕ್ಷಣಾ ವಲಯವನ್ನು ಸಾವಿರ ಮೀಟರ್ ನಿಂದ 50 ಮೀಟರ್ ಗೆ ಇಳಿಸಲಾಗಿದೆ. ಡೆವಲಪರ್ ಗಳ ಲಾಬಿಗೆ ಸರ್ಕಾರ ಮಣಿದಿದೆ ಎಂದು ರಮೇಶ್ ಕೋರಿದ್ದಾರೆ.
ಎಚ್ಡಿಕೆ ಗುಡುಗು: ಕೆಲ ಭೂಮಾಫಿಯಾಗಾರರು ಕ್ಯಾಬಿನೆಟ್ ದರ್ಜೆಯ ಸಚಿವರ ಜೊತೆ ಕೈಜೋಡಿಸಿ ನೀರಾವರಿ ಭೂಮಿಯನ್ನು ಹೊಡೆಯಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಬೆಂಗಳೂರು ಕಸ ವಿಲೇವಾರಿ ಸಂಬಂಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯನ್ನು ಸದ್ಯದಲ್ಲೇ ಹೊರಗೆಳೆಯುತ್ತೇನೆ.
ಕ್ಯಾಬಿನೆಟ್ ದರ್ಜೆ ಸಚಿವರೂ ಸೇರಿ ಯಾರ್ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವುದನ್ನು ಸಮಯ ಬಂದಾಗ ಬಹಿರಂಗ ಪಡಿಸುವೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದರು.
ಮೇಯರ್ ಐಡ್ಯಾ: ಕಸದ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಆಗದೆ ಬೆಂಗಳೂರು ಮಹಾನಗರ ಪಾಲಿಕೆ ಒದ್ದಾಡುತ್ತಿರುವಾಗ ಮೇಯರ್ ವೆಂಕಟೇಶ್ ಮೂರ್ತಿ ತಲೆಗೆ ಅಮೋಘ ಐಡಿಯಾ ಹೊಳೆದಿದೆ. ಇರೋ ಬರೋ ಕಸನೆಲ್ಲ ನಗರದಲ್ಲಿರೋ ಎಲ್ಲಾ ಮೇಲ್ಸೇತುವೆ ಕೆಳಗೆ ಸುರಿದು ಬಿಡಿ ಎಂದು ಹೇಳಿದ್ದರು.
ಚಿಕ್ಕಬಳ್ಳಾಪುರದ ಹೊರವಲಯದಲ್ಲಿ 400 ಎಕರೆ ಜಮೀನನ್ನು ಕಸ ವಿಲೇವಾರಿಗೆ ನಿಗದಿಪಡಿಸಲಾಗಿತ್ತು. ಹಾಗೆಯೆ, 300 ಕೋಟಿ ರು. ವೆಚ್ಚದಲ್ಲಿ 80 ಘನ ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಬಿಬಿಎಂಪಿ ಒಪ್ಪಿಗೆ ನೀಡಲಾಗಿತ್ತು. ಆದರೆ, ಹೊಸ ಗುತ್ತಿಗೆದಾರರ ಆಯ್ಕೆಯಾಗದ ಕಾರಣ ಎಲ್ಲವೂ ಕುಂಠಿತವಾಗಿತ್ತು.












Click it and Unblock the Notifications