ಬಿಎಸ್‌ವೈ ಬಂಟರ ಉಚ್ಛಾಟನೆ: 2.30ಕ್ಕೆ ಸುದ್ದಿಸ್ಫೋಟ

ಇತ್ತ ಹಾವೇರಿಯಲ್ಲಿ ನಾಳೆ ಯಡಿಯೂರಪ್ಪ ತಮ್ಮ ತಾಕತ್ತು ಪ್ರದರ್ಶಿಸಲು ವೇದಿಕೆ ಸಿದ್ಧಪಡಿಸಿಕೊಂಡಿರುವಾಗಲೇ ಅತ್ತ ನವದೆಹಲಿಯ ಸಭೆ ಸೇರಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿ ವರಿಷ್ಠರು ಯಡಿಯೂರಪ್ಪಗೆ ಕಡಿವಾಣ ಹಾಕಲು ಪ್ರತಿತಂತ್ರ ರೂಪಿಸುತ್ತಿದ್ದಾರೆ.
Testing the Waters: ಅದರ ಅಂಗವಾಗಿ ಯಡಿಯೂರಪ್ಪ ಜತೆ ಗಾಢವಾಗಿ ಗುರುತಿಸಿಕೊಂಡು, ಇತ್ತ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಕೆಲ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲು ವರಿಷ್ಠರು ಬಹುತೇಕ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ಸದ್ಯಕ್ಕೆ ನಾಲ್ಕಾರು ಮಂದಿಯನ್ನು ಉಚ್ಛಾಟಿಸುವುದು. ಆನಂತರ ಯಡಿಯೂರಪ್ಪ ರಿಯಾಕ್ಷನ್ ನೋಡಿಕೊಂಡು ಮುಂದಿನ/ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಆಟವನ್ನೂ ಬಿಜೆಪಿ ಹೂಡುವ ಸಾಧ್ಯತೆಯಿದೆ. ಇದರಿಂದ ನಾಳಿನ ಹಾವೇರಿ ಸಮಾವೇಶದಲ್ಲಿ ಯಡಿಯೂರಪ್ಪನವರಿಂದ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ಅವರನ್ನು ಕಟ್ಟಿಹಾಕುವುದು ಬಿಜೆಪಿ ಕೋರ್ ಕಮಿಟಿಯ ತಂತ್ರವಾಗಿದೆ.
ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಮಧ್ಯಾಹ್ನ 2.30ಕ್ಕೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ವರಿಷ್ಠರ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.












Click it and Unblock the Notifications