ಬಿಎಸ್‌ವೈಗೆ ಆರೋಗ್ಯ ಇಲ್ಲ; ಕೆಜೆಪಿಗೆ ಉಳಿಗಾಲವಿಲ್ಲ

ಯಡಿಯೂರಪ್ಪಗೆ ಆರೋಗ್ಯ ಸರಿಯಿಲ್ಲ: ತುಮಕೂರಿನಲ್ಲಿ ಮಾತನಾಡಿರುವ ಶಾಸಕ ಸೊಗಡು ಶಿವಣ್ಣ, ಯಡಿಯೂರಪ್ಪ ಮತ್ತು ಕೆಜೆಪಿಯ ಆರೋಗ್ಯದ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಹಾಗಾಗಿ ಕೆಜೆಪಿ ಆರೋಗ್ಯದ ಗತಿಯೇನು? ಎಂದು ವ್ಯಂಗ್ಯವಾಡಿದ್ದಾರೆ.
ಕೆಜೆಪಿಗೆ ಉಳಿಗಾಲವಿಲ್ಲ: ಇನ್ನು ಮೈಸೂರಿನಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಸಿಟಿ ರವಿ ಅವರು ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ಉಳಿಗಾಲ ಇಲ್ಲ ಎಂದಿದ್ದಾರೆ.
ಯಡಿಯೂರಪ್ಪ ಬಗ್ಗೆ ಅಪಾರವಾದ ಪ್ರೀತಿ/ಅಭಿಮಾನವಿದೆ. ಆದರೆ ಅವರೆಡೆಗೆ ನಮ್ಮ ನಿಷ್ಠೆ ಈಗಿಲ್ಲ. ನಮ್ಮ ನಿಷ್ಠೆಯೇನಿದ್ದರೂ ಬೆಜೆಪಿಗಷ್ಟೇ. ಯಾವುದೇ ವ್ಯಕ್ತಿಗಲ್ಲ ಎಂದು ವಾಗ್ದಾಳಿ ನಡೆಸಿರುವ ರವಿ, ಯಡಿಯೂರಪ್ಪ ಅವರಿಗೆ ಬಿಜೆಪಿ ಸರಕಾರವನ್ನು ಉರುಳಿಸುವಷ್ಟು ಸಾಮರ್ಥ್ಯವಿಲ್ಲ ಎಂದಿದ್ದಾರೆ.












Click it and Unblock the Notifications