ಜಪಾನ್‌ನಿಂದ ವರದಿ : ಆತಂಕಕ್ಕೆ ಯಾವುದೇ ಕಾರಣವಿಲ್ಲ

Quake in Japan : No need to worry
ಟೋಕಿಯೋ, ಡಿ. 7 : ಕಳೆದ ವರ್ಷದ ಮಾರ್ಚ್ 11ರಂದು ಸಂಭವಿಸಿದ ಭೂಕಂಪದ ನಂತರ ಮತ್ತೊಂದು ಭೂಕಂಪ ಶನಿವಾರ ಸಂಭವಿಸಿದ್ದರೂ ಹಿಂದಿನ ಬಾರಿಯಂತೆ ಅಂತಹ ಹಾನಿಯನ್ನೇನು ಮಾಡಿಲ್ಲ. ಆಸ್ತಿಪಾಸ್ತಿಗಳಿಗೆ ಭಾರೀ ಹಾನಿ ಸಂಭವಿಸಿದ ಮತ್ತು ಸಾವುನೋವಾದ ವರದಿಗಳು ಕೂಡ ಬಂದಿಲ್ಲ.

ಅಲ್ಲಿನ ಜನರು ಕೂಡ ಮಾಧ್ಯಮಗಳಲ್ಲಿ ಬಂದ ವರದಿಗಳಂತೆ ಅಷ್ಟೇನು ಧೃತಿಗೆಟ್ಟಿಲ್ಲ. ಇಂತಹ ಅನೇಕ ಭೂಕಂಪಗಳನ್ನು ಕಂಡಿರುವ ಇಲ್ಲಿನ ಜನರು ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ. ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಒನ್ಇಂಡಿಯಾ ಕನ್ನಡದ ಸ್ನೇಹಿತ ಜಪಾನ್ ನಿವಾಸಿ ಗುರು ವೆಂಕಟ್ ಅವರು ಫೇಸ್‌ಬುಕ್ ಮುಖಾಂತರ ತಿಳಿಸಿದ್ದಾರೆ.

ಪೂರ್ವ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. 1 ಮೀಟರ್ ಎತ್ತರದ ಅಲೆಗಳು ತೀರವನ್ನು ಅಪ್ಪಳಿಸುತ್ತಿವೆ. ಆರು ನಗರಗಳಲ್ಲಿ ಮಾತ್ರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದು ಆದೇಶಿಸಲಾಗಿದೆ. ಜಪಾನಿನಲ್ಲಿ ಜನರನ್ನು ಸ್ಥಳಾಂತರಿಸುವುದು ಕೂಡ ಸಹಜವಾದ ಕ್ರಿಯೆ. ಭಾರತದಲ್ಲಿನ ಬಂಧುಬಾಂಧವರು ಜಪಾನ್‌ನಲ್ಲಿ ಇರುವ ಬಂಧುಗಳ ಬಗ್ಗೆ ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಹೇಳಿದ್ದಾರೆ.

ಭೂಕಂಪ ಆಗುತ್ತಿರುವುದು ಎಲ್ಲರ ಅರಿವಿಗೆ ಬಂದಿತು. ಆದರೆ, ಕಳೆದ ವರ್ಷ ಆದಷ್ಟು ಬೃಹತ್ ಪ್ರಮಾಣದಲ್ಲಿ ಈ ಬಾರಿ ಆಗಿಲ್ಲದಿರುವುದು ಸಮಾಧಾನದ ಸಂಗತಿ ಎಂದು ಗುರು ವೆಂಕಟ್ ಅವರು ತಿಳಿಸಿದ್ದಾರೆ. ಅಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಕೂಡ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಸಂದೇಶ ರವಾನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+