35 ಶಾಸಕರಿಗೆ ವಿದೇಶದಲ್ಲಿ ನ್ಯೂ ಇಯರ್ ಪಾರ್ಟಿ

ಇದೇ ಡಿಸೆಂಬರ್ 19ರಿಂದ ಆರಂಭವಾಗಲಿದೆ ಇವರ 'ಕೊಲಂಬಸ್ ಡಿಸ್ಕವರಿ'. ಇದು ಜನವರಿ 5ರವರೆಗೂ ನಿಗದಿಯಾಗಿದೆ. ಆಸ್ಟ್ರೇಲಿಯಾ, ಹಾಂಗ್‌ಕಾಂಗ್, ಮಲೇಷಿಯಾ ಮತ್ತು ಮಕಾವ್ ದೇಶಗಳನ್ನು ಸುತ್ತಾಡಲಿದ್ದಾರೆ ನಮ್ಮೀ ಜನನಾಯಕರು. ಈ ಪ್ರವಾಸದ ಬಾಬತ್ತಿಗೆ ಸರಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ವಿಮಾನ ಯಾನದ ಟಿಕೆಟ್‌ಗಳು ಸಹ ಬುಕ್ ಆಗಿವೆ ಎನ್ನಲಾಗಿದೆ.
ಪುಟ್ಟಣ್ಣ, ಪ್ರತಾಪ ಚಂದ್ರ ಶೆಟ್ಟಿ, ಶಶಿಲ್ ನಮೋಶಿ, ಎಸ್ ಆರ್ ಪಾಟೀಲ್, ಕೆಬಿ ಶಾಣಪ್ಪ, ಅಶ್ವತ್ಥನಾರಾಯಣ, ವೈಎ ನಾರಾಯಣಸ್ವಾಮಿ ಹಾಗೂ ಮರಿತಿಬ್ಬೇಗೌಡ, ಟಿ. ಜಾನ್, ನಾರಾಯಣ ಬಾಂಡಗೆ, ಮಹಾಂತೇಶ ಕೌಜಲಗಿ, ಭಾರತಿ ಶೆಟ್ಟಿ, ಅರುಣ್ ಶಹಾಪೂರ್ ಹೀಗೆ ಒಟ್ಟು 35 ಜನರು ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ ಎಂದು ವಿಧಾನ ಪರಿಷತ್ತಿನ ಸಚಿವಾಲಯದ ಮೂಲಗಳು ಖಚಿತ ಪಡಿಸಿವೆ.
ಪ್ರತಿಯೊಬ್ಬ ಜನನಾಯಕ(ಕಿ)ಗೂ ಪ್ರವಾಸ ಸಂದರ್ಭದಲ್ಲಿ ಸರಕಾರ ಕೇವಲ 5.5 ಲಕ್ಷ ರೂಪಾಯಿ ಖರ್ಚು ಮಾಡಲಿದೆ. ಅಂದರೆ 5.5 x 35 ~ 2 ಕೋಟಿ ರೂ.
ಇನ್ನು ನಮ್ಮೀ ಮೇಲ್ಮನೆ ಸದಸ್ಯರು ಖಂಡಿತಾ ಒಬ್ಬೊಬ್ಬರೇ ಹೋಗೊಲ್ಲ. ತಮ್ಮ ಕುಟುಂಬ ಸದಸ್ಯರನ್ನೂ ಕರೆದೊಯ್ಯುವುದು ಖಂಡಿತಾ. ಆದರೆ ಅವರ ಖರ್ಚು-ವೆಚ್ಚವನ್ನು ಅವರವರೇ ಹೊರಬೇಕು ಎಂದು ಎಲ್ಲ ಸದಸ್ಯರಿಗೆ ಸಚಿವಾಲಯ ಸೂಚಿಸಿದೆ. ಅಷ್ಟೇ ಅಲ್ಲ.
ಇಷ್ಟಕ್ಕೂ ಯಾಕೀ ಪ್ರವಾಸ?:
ಅಂದರೆ ಈ ಹಿಂದೆ ವಿಧಾನಸಭೆ ಸದಸ್ಯರು ಪ್ರವಾಸ ಕೈಗೊಂಡಾಗ ಅಲ್ಲಿ, ಕೃಷಿ, ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಲು ಪ್ರವಾಸ ಕೈಗೊಂಡಿದ್ದಾಗಿ ತಿಳಿಸಿದ್ದರು. ಇದೀಗ ಈ ಎರಡು ಸಮಿತಿ ಸದಸ್ಯರು ಕೂಡ ಪ್ರವಾಸದಲ್ಲಿ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರಂತೆ.












Click it and Unblock the Notifications