ಸಿಟಿ ರವಿಗೂ ಮೋದಿಯೇ ಪ್ರಧಾನಿಯಾಗಬೇಕಂತೆ

ಉನ್ನತ ಶಿಕ್ಷಣ ಸಚಿವ ಸಿಟಿ ರವಿ ಅವರು ಮುಂದಿನ ವಿಧಾನಸಭೆ ಚುನಾವಣೆ ನಿಮಿತ್ತ ತಮ್ಮ ಜಿಲ್ಲೆಯಲ್ಲಿ ಮೊನ್ನೆ ವಿಕಾಸಯಾತ್ರೆ ಹಮ್ಮಿಕೊಂಡಿದ್ದರು. ಆ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಟಿ ರವಿ ಅವರು 'ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದೊಂದೇ ನಮ್ಮ ಗುರಿಯಲ್ಲ; ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಬೇಕೆಂಬ ಸಂಕಲ್ಪವೂ ನಮ್ಮದಾಗಿದೆ' ಎಂದು ತಿಳಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಕಾಸಯಾತ್ರೆಯ ಸಮರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಿಟಿ ರವಿ ಅವರು 'ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಟ್ಟಿಗೆ ನರೇಂದ್ರ ಮೋದಿ ಅವರೂ ಪ್ರಧಾನಿ ಆಗಬೇಕು. ಇಡೀ ದೇಶ ಅಭಿವೃದ್ಧಿಯಲ್ಲಿ ಮಾದರಿ ಆಗಬೇಕು' ಎಂದು ಆಶಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷ ಬಿಟ್ಟ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ರವಿ, 'ನಾಯಕತ್ವ ಕೊಟ್ಟ ಪಕ್ಷವನ್ನು ಯಾಕೆ ಬಿಟ್ಟರು ಎನ್ನುವ ಚಿಂತೆ ಕಾಡುತ್ತದೆ. ಪಕ್ಷವನ್ನು ಬಿಟ್ಟು ಏನನ್ನೂ ಸಾಧನೆ ಮಡಲಾಗದು. ತಪ್ಪು ತಿಳಿವಳಿಕೆಯಿಂದ ಆಚೀಚೆ ಹೋದರೂ ಬಿಜೆಪಿ ರಾಷ್ಟ್ರೀಯ ವಿಚಾರಧಾರೆ ಜತೆ ಸಹಮತವಿರಲೇಬೇಕು ಎಂದು ಕಿವಿಮಾತು ಹೇಳಿದರು. ಬಿಜೆಪಿ ಮುಖಂಡರಾದ ಭಾನು ಪ್ರಕಾಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭೆ ಅಧ್ಯಕ್ಷ ಪ್ರೇಂಕುಮರ್ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications