ಕೆಜೆಪಿಯಿಂದ ಜೆಡಿಎಸ್ ಬಲ ಕುಂದಲಿದೆ : ವಿಶ್ವನಾಥ್

Congress MP AH Vishwanath
ಮೈಸೂರು, ಡಿ.3: ಮಾಜಿಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೆ ಜೆಡಿಎಸ್ ಗೆ ಉಳಿಗಾಲವಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಹೇಳಹೆಸರಿಲ್ಲದ್ದಂತೆ ಮಾಯವಾದರೂ ಆಗಬಹುದು ಎಂದು ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಹೋರಾಟದ ಮೂಲಕ ರಾಜಕೀಯವಾಗಿ ಮೇಲಕ್ಕೆ ಬಂದ ಯಡಿಯೂರಪ್ಪ ಅವರ ಹತ್ತಿರ 40 ವರ್ಷಗಳ ಅನುಭವವಿದೆ. ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳಿಂದಾಗಿ ಜೆಡಿಎಸ್ ನೇಪತ್ಯಕ್ಕೆ ಸರಿಯಲಿದೆ ಎಂದು ವಿಶ್ವನಾಥ್ ಹೇಳಿದರು.

ಆದರೆ, ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿ ಬೆಳೆಸಿ, ಅಧಿಕಾರಕ್ಕೆ ತಂದು ಕೊನೆಗೆ ಆ ಪಕ್ಷವನ್ನು ಬಿಡುವಾಗ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಾಗ ಯಡಿಯೂರಪ್ಪ ಎಂಥಾ ನೋವು ಅನುಭವಿಸಿರಬಹುದು ಎಂಬುದನ್ನು ಊಹಿಸಬಲ್ಲೆ. ಆದರೆ, ಯಡಿಯೂರಪ್ಪ ಅವರಿಗೆ ಇದು ಅನಿವಾರ್ಯವಾಗಿತ್ತು ಎಂದು ವಿಶ್ವನಾಥ್ ಹೇಳಿದ್ದಾರೆ.

ಕೆಜೆಪಿ ಹಿಂದೆ ಕಾಂಗ್ರೆಸ್ ಇದೆ ಎಂದು ಅಸ್ತಿತ್ವ ಕಳೆದುಕೊಳ್ಳಲುವ ಗಾಬರಿಯಲ್ಲಿ ಜೆಡಿಎಸ್ ವರಿಷ್ಠರು, ಮಾಜಿ ಮುಖ್ಯಮಂತ್ರಿ ಎ ಚ್.ಡಿ.ಕುಮಾರಸ್ವಾಮಿ ಅವರು ಏನೇನೋ ಬಡಬಡಾಯಿಸಿದ್ದಾರೆ.

ಜೆಡಿಎಸ್ ರಾಷ್ಟ್ರ ಮಟ್ಟದ ಪಕ್ಷವೂ ಅಲ್ಲ, ಪ್ರಾದೇಶಿಕ ಪಕ್ಷವೂ ಅಲ್ಲ. ಅದೊಂದು ಗಲ್ಲಿ ಪಾರ್ಟಿ ಎಂದು ಗೇಲಿ ಮಾಡಿದರು. ಕೆಜೆಪಿ ಮುಂದಿನ ದಿನಗಳಲ್ಲಿ ಬಹಳ ಬಲಿಷ್ಠವಾಗಲಿದೆ. ಇದರ ಮುಂದೆ ಜೆಡಿಎಸ್ ಬಲಹೀನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದರು.

ಕೇವಲ ಮೂರು ಮಂದಿ ಸಂಸದರನ್ನು ಹೊಂದಿರುವ ಜೆಡಿಎಸ್ ವರಿಷ್ಠರು, ಕುಮಾರಸ್ವಾಮಿ ನಿಮಗೆ ನಾವು ಬೆಂಬಲ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಆದರೆ ಕಾಂಗ್ರೆಸ್ ಇವರನ್ನು ನಮಗೆ ಬೆಂಬಲ ಕೊಡಿ ಎಂದು ಇವರನ್ನು ಕೇಳಿಲ್ಲ. ಕುಮಾರಸ್ವಾಮಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಯಾವುದೇ ನೈತಿಕತೆ ಕೂಡ ಇಲ್ಲ ಎಂದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್‌ನೊಂದಿಗೆ ಯಾವ ಹಂತದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ನವರ ಸಹವಾಸ ನಮಗೆ ಬೇಡ. ಈ ಹಿಂದೆ ಇವರ ಸಹವಾಸ ಮಾಡಿದ್ದಕ್ಕೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

ಕೆಜೆಪಿ ಅಥವಾ ಇತರೆ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಭ್ರಷ್ಟಾಚಾರವಿರದ ಸರ್ಕಾರವನ್ನು ಜನ ಬಯಸುತ್ತಿದ್ದಾರೆ. ಕಾಂಗ್ರೆಸ್ ಗೆ ಆಡಳಿತ ನೀಡುವ ಭರವಸೆ ನಮಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಮುಖ್ಯಮಂತ್ರಿಯಾಗುವ ಸಾಮರ್ಥ್ಯವುಳ್ಳವರೇ, ಈ ವಿಷಯದಲ್ಲಿ ಹೈಕಮಾಂಡ್ ನಿರ್ಣಯ ಅಂತಿಮ ಎಂದು ವಿಶ್ವನಾಥ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+