ಹ್ಯಾಪಿ ಬರ್ಥಡೇ ಎಸ್ಎಂಎಸ್, gz!

SMS 20th Anniversary
ಬೆಂಗಳೂರು, ಡಿ.3: ಅಪ್ತ ಸಂಭಾಷಣಾ ಸಂವಹಕ ಎಸ್ಎಂಎಸ್, short message service ಗೆ ಇಂದು (ಡಿ.3) 20ನೇ ವಾರ್ಷಿಕೋತ್ಸವ

ವಿಕಿಪೀಡಿಯಾದ ಮಾಹಿತಿಯಂತೆ 1992ರಲ್ಲಿ ಮೊದಲ ವಾಣಿಜ್ಯ ಎಸ್ಎಂಎಸ್ ಸಂದೇಶವನ್ನು ನೀಲ್ ಪಾಪ್ವರ್ಥ್ ಎಂಬುವರು ರಿಚರ್ಡ್ ಜಾರ್ವಿಸ್ ಅವರಿಗೆ ರ್ವೋಡಾಫೋನ್ ಜಿಎಸ್ ಎಂ ನೆಟ್ವರ್ಕ್ ಮೂಲಕ ಮೆರಿ ಕ್ರಿಸ್ ಮಸ್ ಸಂದೇಶ ಕಳುಹಿಸಿದ್ದರಂತೆ.

ಅಂದು 'Merry Christmas' ಎಂದು ವ್ಯಾಕರಣಬದ್ಧವಾಗಿ ಬರೆದ ಸಂದೇಶ ಇಂದಾಗಿದ್ದರೆ "omg m3rry xma5!" ಎಂದು ವಿಶೇಷಣಾ ಸಹಿತ ಹೊರಹೊಮ್ಮುತ್ತಿತ್ತು. ಇದೇ ರೀತಿ ಶೀರ್ಷಿಕೆಯಲ್ಲಿ ಬಳಸಿರುವ 'gz' ಅಕ್ಷರಗಳು ಕೂಡಾ 'congratulations' ನ ಸಂಕ್ಷಿಪ್ತ ರೂಪವಾಗಿದೆ.

ಎಸ್ಎಂಎಸ್ ಜನಕ ಎಂದು ಕರೆಯಲ್ಪಡುವ ಮಟ್ಟಿ ಮ್ಯಾಕ್ಕೊನೆನ್, ಫ್ರೀಡ್ ಹೆಲ್ಮ್ ಹಿಲ್ಲೆಬ್ರ್ಯಾಂಡ್ ಹಾಗೂ ಬರ್ನಡ್ ಗಿಲ್ಬರ್ಟ್ ಅವರು 1984ರಲ್ಲೇ ಎಸ್ ಎಂಎಸ್ ತಂತ್ರಜ್ಞಾನ ಬೆಳವಣಿಗೆಗೆ ಪ್ರಯತ್ನಪಟ್ಟಿದ್ದರು. ಜರ್ಮನಿಯ ಫ್ರಾಂಕೋ ಜರ್ಮನ್ ಜಿಎಸ್ ಎಂ ಕಾರ್ಪೋರೇಷನ್ ನಲ್ಲಿ ಎಸ್ ಎಂಎಸ್ ಬಳಕೆ ಚಾಲನೆಯಲ್ಲಿತ್ತು.

ಇದಾದ ಎಂಟು ವರ್ಷಗಳ ನಂತರ ಮೊದಲ ಎಸ್ ಎಂಎಸ್ ರವಾನೆಯಾಗಿ ಹೊಸ ಸಂವಹನ ಸಾಧ್ಯತೆಗೆ ನಾಂದಿ ಹಾಡಲಾಯಿತು. 2010ರಲ್ಲಿ ಎಸ್ ಎಂಎಸ್ ವಾಹಕದಿಂದ ಸುಮಾರು 114.6 ಬಿಲಿಯನ್ ಡಾಲರ್ ನಷ್ಟು ಆದಾಯ ಸೃಷ್ಟಿಯಾಗಿದೆಯಂತೆ.

ಮೊಬಿಥಿಂಕಿಂಗ್.ಕಾಂ ಸಮೀಕ್ಷೆ ಪ್ರಕಾರ 2011ರಲ್ಲಿ ಸುಮಾರು 8 ಟ್ರಿಲಿಯನ್ ಎಸ್ ಎಂಎಸ್ ಗಳು ಹರಿದಾಡಿದೆ, BRB, LOL G8t.. ಈ ರೀತಿ ಹೊಸ ಬಗೆಯ ಸಂಕ್ಷಿಪ್ತ ಭಾಷೆ ಆರಂಭಗೊಂಡು SMS ಭಾಷೆ ಈಗ ಅತ್ಯಂತ ಜನಪ್ರಿಯವಾಗಿದೆ.

ಏರ್ ಟೆಲ್ ಕೊಡುಗೆ; ಒಂದು ಎಸ್ಎಂಎಸ್ ಕೂಡಾ ಜೀವ ಉಳಿಸಬಹುದು ಬೇಕಿದ್ದರೆ ಈ ಲೇಖನ ಓದಿ..ಈಗ ಭಾರತದಲ್ಲಿ ವಿಪತ್ತಿನ ಸಂದರ್ಭದಲ್ಲಿ ತನ್ನ ಗ್ರಾಹಕರು ಕಷ್ಟಪಡದಿರಲಿ ಎಂದು ಅಗ್ರಗಣ್ಯ ಸಂಸ್ಥೆ ಭಾರ್ತಿ ಏರ್ ಟೆಲ್ ಎಮೆರ್ಜೆನ್ಸಿ ಎಸ್ ಎಂಎಸ್ ಸೇವೆ ಆರಂಭಿಸಿದೆ.

ಈ ಸೇವೆಗೆ ಚಂದಾದಾರರಾದರೆ ಎಮೆರ್ಜೆನ್ಸಿ ಸಮಯದಲ್ಲಿ ನಿಮ್ಮ ಕುಟುಂಬ ವರ್ಗಕ್ಕೆ ಸುಲಭವಾಗಿ ಅಲರ್ಟ್ ಮೆಸೇಜ್ ಕಳಿಸಬಹುದಾಗಿದೆ. ಇದರಿಂದ ನೀವು ಇರುವ ಸ್ಥಳದ ಬಗ್ಗೆ ಮಾಹಿತಿ ಕೂಡಾ ರವಾನೆಯಾಗುತ್ತದೆ.

ಸುಮಾರು 10 ಜನ ಆಪ್ತರಿಗೆ ಒಮ್ಮೆಗೆ ನಿಮ್ಮ ಸಂದೇಶ ತಲುಪುತ್ತದೆ. SAFE ಎಂದು ಎಸ್ ಎಂಎಸ್ ಕಳಿಸುವ ಮುನ್ನ ನಿಮ್ಮ 10 ಜನ ಆಪ್ತರ ಪಟ್ಟಿಯನ್ನು ನಮೂದಿಸಬೇಕಾಗುತ್ತದೆ. ನೈಸರ್ಗಿಕ ವಿಪತ್ತು ಅಥವಾ ಇನ್ಯಾವುದೇ ಆತಂಕದ ಸಂದರ್ಭದಲ್ಲಿ ಈ ಸೇವೆ ಬಳಸಬಹುದಾಗಿದೆ.

Emergency Alert Service 30 ದಿನಗಳಿಗೆ 30 ರು ತೆರೆಬೇಕಾಗುತ್ತದೆ. ಆದರೆ, ಬ್ಯಾಲೆನ್ಸ್ ಖಾಲಿಯಾಗುತ್ತಿದ್ದರೆ ಚಿಂತಿಸಬೇಕಿಲ್ಲ. ಮಿನಿಮಮ್ ಬ್ಯಾಲೆನ್ಸ್ ಇದ್ದರೂ ಅಲರ್ಟ್ ಮೆಸೇಜ್ ಕಳಿಸಬಹುದು ಎಂದು ಏರ್ ಟೆಲ್ ಹೇಳಿಕೊಂಡಿದೆ.

55100 ಕ್ಕೆ ಕರೆ ಮಾಡಿ ಎಮೆರ್ಜೆನ್ಸಿ ಅಲರ್ಟ್ ಗೆ ಚಂದಾದಾರರಾಗಬಹುದು. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಈ ಸೇವೆ ಲಭ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆಸಕ್ತರು HELP ಎಂದು 55100 ಗೆ ಎಸ್ ಎಂಎಸ್ ಮಾಡಿ ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+