ನರೇಂದ್ರ ಮೋದಿ ಬಗ್ಗೆ ಸುಷ್ಮಾ ಅಚ್ಚರಿಯ ಹೇಳಿಕೆ

ಅಸೆಂಬ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಸುಷ್ಮಾ, ಮೋದಿ ಅಭಿವೃದ್ದಿಯ ಹರಿಕಾರ.
ಅವರ ಅವಧಿಯಲ್ಲಿ ಗುಜರಾತ್ ಅದ್ಭುತ ಅಭಿವೃದ್ದಿಯನ್ನು ಕಂಡಿದೆ. ಅವರಿಗೆ ರಾಷ್ಟ್ರಮಟ್ಟದಲ್ಲೂ ಉತ್ತಮ ಹೆಸರಿದೆ ಎಂದು ಮೋದಿಯನ್ನು ಕೊಂಡಾಡಿದ್ದಾರೆ.
ಮೋದೀಜಿ ನಮ್ಮ ಪಕ್ಷದ ಹಿರಿಯ ನಾಯಕ. ಅವರ ಅಧಿಕಾರದ ಅವಧಿಯಲ್ಲಿ ಗುಜರಾಜಿನ ಅಭಿವೃದ್ದಿ ರಾಷ್ಟ್ರಕ್ಕೆ ಮಾದರಿಯಾಗಿದೆ.
ಅವರು ಪ್ರಧಾನಿ ಹುದ್ದೆ ನಿಭಾಯಿಸುವ ಎಲ್ಲಾ ಕ್ಷಮತೆ ಹೊಂದಿದ್ದಾರೆಂದು ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ್ದಾರೆ.
ಸುಷ್ಮಾ ಅವರ ಈ ಹೇಳಿಕೆ ಪಕ್ಷದ ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಲ್ ಕೆ ಆಡ್ವಾಣಿ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಮೈತ್ರಿಕೂಟದ ಪ್ರಮುಖ ನಾಯಕ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೋದಿಯವರನ್ನು ಪ್ರಧಾನಿಯೆಂದು ಬಿಂಬಿಸುವುದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಹುದ್ದೆಗೆ ಸುಷ್ಮಾ ಸ್ವರಾಜ್ ಸೂಕ್ತ ಆಯ್ಕೆಯೆಂದು ಇತ್ತೀಚಿಗೆ ನಿಧನ ಹೊಂದಿದ್ದ ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿಕೆ ನೀಡಿದ್ದರು.











Click it and Unblock the Notifications