ನಾರ್ವೆ: ಆಂಧ್ರದ ಟಿಸಿಎಸ್ ಟೆಕ್ಕಿ ದಂಪತಿ ಸೆರೆ

ಈಗಿನ ಪ್ರಕರಣ ಏನೆಂದರೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ದೊಂಡಪಡು ಮೂಲದ ವಿ ಚಂದ್ರಶೇಖರ್ ಮತ್ತು ಅವರ ಪತ್ನಿ ಅನುಪಮಾ ಅವರು ಓಸ್ಲೊ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರುಗಳಾಗಿದ್ದಾರೆ. ಈ ದಂಪತಿ ತಮ್ಮ 6 ವರ್ಷದ ಮಗನಿಗೆ ಶಿಸ್ತು ಕಲಿಸಲು ಕಠಿಣ ಶಿಕ್ಷೆ ನೀಡಿದ್ದಾರೆ ಎಂಬುದು ಆರೋಪ.
ಪಾಲಕರು ತನ್ನನ್ನು ಭಾರತಕ್ಕೆ ಕಳುಹಿಸುವ ಬೆದರಿಕೆ ಹಾಕಿದ್ದಾರೆ ಎಂದು ಈ ದಂಪತಿಯ 6 ವರ್ಷದ ಮಗ ಸಾಯಿ ಶ್ರೀರಾಮ್ ಶಾಲಾ ಶಿಕ್ಷಕರಿಗೆ ದೂರು ನೀಡಿದ್ದ. ಅದಾದ 9 ತಿಂಗಳ ನಂತರ ಆತನ ಪೋಷಕರನ್ನು ಬಂಧಿಸಲಾಗಿದೆ ಎಂದು ಚಂದ್ರಶೇಖರ್ ಅವರ ಸಹೋದರನ ಪುತ್ರ ವಿ ಶೈಲೇಂದರ್ ಅಲವತ್ತುಕೊಂಡಿದ್ದಾರೆ.
ಚಂದ್ರಶೇಖರ್ ಅವರ ಮಗ ಶಾಲಾ ಬಸ್‌ನಲ್ಲಿ ಮೂತ್ರ ಮಾಡುತ್ತಿದ್ದ ಎನ್ನಲಾಗಿದೆ. ಆತ ಶಾಲೆಯಿಂದ ಆಟಿಕೆಗಳನ್ನು ಮನೆಗೆ ತರುತ್ತಿದ್ದ. ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿ ದಂಪತಿಯ ಗಮನಕ್ಕೆ ತಂದಿತ್ತು. ಇದರಿಂದ ಬೇಸತ್ತ ಆರೋಪಿ ದಂಪತಿಯು 'ಸರಿಯಾಗಿ ವರ್ತಿಸದಿದ್ದಲ್ಲಿ ಭಾರತಕ್ಕೆ ಕಳುಹಿಸುವುದಾಗಿ ಮಗನಿಗೆ ಎಚ್ಚರಿಸಿದ್ದರು' ಎನ್ನಲಾಗಿದೆ.
ಬಾಧಿತ ಮಗು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಚಂದ್ರಶೇಖರ್ ದಂಪತಿಯನ್ನು ಓಸ್ಲೊ ಪೊಲೀಸರು ಬಂಧಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಡಿಸೆಂಬರ್ 3ರಂದು ತೀರ್ಪು ಹೊರಬೀಳಲಿದ್ದು, ಆರೋಪ ಸಾಬೀತಾದರೆ ತಾಯಿಗೆ ಒಂದೂ ಕಾಲು ವರ್ಷ ಮತ್ತು ತಂದೆಗೆ ಒಂದೂವರೆ ವರ್ಷ ಜೈಲು ಶಿಕ್ಷೆಯಾಗಲಿದೆ.
ಈ ಮಧ್ಯೆ, ನಾರ್ವೆ ಅಧಿಕಾರಿಗಳು ದಂಪತಿಯ ಬಂಧನದ ವಿಚಾರವನ್ನು ತಮಗೆ ಅಧಿಕೃತವಾಗಿ ತಿಳಿಸಿಲ್ಲ. ಈ ವಿಚಾರದಲ್ಲಿ ಭಾರತ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಚಂದ್ರಶೇಖರ್ ಅವರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.












Click it and Unblock the Notifications