ಸಂತೆಕಟ್ಟೆ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ ಆತ್ಮಹತ್ಯೆ

ಮೃತ ವಿದ್ಯಾರ್ಥಿನಿಯನ್ನು ರಕ್ಷಿತಾ (20) ಎಂದು ಗುರುತಿಸಲಾಗಿದೆ. ಅಂತಿಮ BSc ಓದುತ್ತಿದ್ದ ರಕ್ಷಿತಾ, ನಿತ್ಯಾನಂದ ಕೆಪಿ ಮತ್ತು ಮಾಲತಿ ಎನ್ ಅವರ ಮಗಳು. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಎಂದಿನಂತೆ ತಿಂಡಿ ಶಾಸ್ತ್ರ ಮುಗಿಸಿದ ರಕ್ಷಿತಾ, ಓದಿಕೊಳ್ಳುತ್ತೇನೆ ಎಂದು ಹೇಳಿ ಸೀದಾ ತನ್ನ ಕೋಣೆ ಸೇರಿಕೊಂಡಿದ್ದಾಳೆ.
ಎಷ್ಟು ಹೊತ್ತಾದರೂ ಮಗಳು ಹೊರಬಾರದಿದ್ದುದ್ದಕ್ಕೆ ಗಾಬರಿಗೆ ಬಿದ್ದ ಪೋಷಕರು 10.30ರಲ್ಲಿ ಕೋಣೆಯ ಬಾಗಿಲುಬಡಿದಿದ್ದಾರೆ. ಆದರೆ ಒಳಗಿಂದ ಚಿಲಕ ಹಾಕಿಕೊಂಡಿದ್ದರಿಂದ ಬಾಗಿಲು ತೆರೆದುಕೊಂಡಿಲ್ಲ. ಅನುಮಾನ ಹೆಚ್ಚಾಗಿ ಕಿಟಕಿಯಿಂದ ನೋಡಿದಾಗ ರಕ್ಷಿತಾ ದೇಹ ನೇಣಿಗೆ ಬಿಗಿದುಕೊಂಡಿದ್ದು ಕಂಡಿದೆ.
ರಕ್ಷಿತಾ ಸಾವಿನ ಪತ್ರ ಬರೆದಿಟ್ಟಿಲ್ಲ. ಪೊಲೀಸರು ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಿದ್ದು, ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲಿಸುತ್ತಿದ್ದಾರೆ.












Click it and Unblock the Notifications