ಅಕ್ರಮ ಸೈಟು ನುಂಗಿದ ಕೆಎಚ್ ಮುನಿಯಪ್ಪ ?

PIL against KH Muniyappa
ಬೆಂಗಳೂರು, ನ.28: ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರು ಕೂಡಾ ಭೂ ಹಗರಣದ ಜಾಲದಲ್ಲಿ ಸಿಕ್ಕಿಕೊಂಡಿದ್ದಾರೆ. ಅಕ್ರಮವಾಗಿ ಜಿ ಕೆಟಗೆರಿ ನಿವೇಶನ ಪಡೆದ ಆರೋಪ ಹೊತ್ತಿದ್ದಾರೆ. ವಕೀಲ ರಮೇಶ್ ಎಂಬುವವರು ಮುನಿಯಪ್ಪ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಂಸದರಾಗಿದ್ದ ಮುನಿಯಪ್ಪ ಅವರು ಬೆಂಗಳೂರಿನಲ್ಲಿ ತಮಗೆ ಯಾವುದೇ ನಿವೇಶನ ಇಲ್ಲ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

2002ರ ಜುಲೈ ತಿಂಗಳಿನಲ್ಲಿ ಬನಶಂಕರಿ ಮೂರನೇ ಹಂತದಲ್ಲಿ 60 X 80 ವಿಸ್ತೀರ್ಣದ 'ಜಿ' ಕೆಟಗೆರಿ ನಿವೇಶನ ಪಡೆದಿದ್ದಾರೆ ಎಂದು ವಕೀಲ ರಮೇಶ್ ಅವರು ಆರೋಪಿಸಿದ್ದಾರೆ.

ನಿವೇಶನದ ಮೌಲ್ಯ ಸುಮಾರು 2 ಕೋಟಿ ರುಪಾಯಿಯಾಗುತ್ತದೆ. ಮಾರುಕಟ್ಟೆ ದರ 24 ಲಕ್ಷ ರು ಇದ್ದರೂ 7,51,825 ರುಪಾಯಿ ಮಾತ್ರ ನೀಡಿ ನಿವೇಶನ ಪಡೆಯಲಾಗಿದೆ.

ಮುನಿಯಪ್ಪ ಅವರ ಪತ್ನಿ ಹೆಸರಿನಲ್ಲಿ ಬೊಮ್ಮಸಂದ್ರ ಹಾಗೂ ಸಂಜಯನಗರದಲ್ಲಿ ನಿವೇಶನಗಳಿದ್ದರೂ ತಮಗೆ ನಿವೇಶನಗಳಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಡಿವಿ ಚಂದ್ರಶೇಖರ ರೆಡ್ಡಿ ಎಂಬುವರ ಪರವಾಗಿ ವಕೀಲ ರಮೇಶ್ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಮುನಿಯಪ್ಪ ಪ್ರತಿಕ್ರಿಯೆ: ಶಾಸಕರಿಗೆ ಮತ್ತು ಸಂಸದರಿಗೆ ಜಿ ಕೆಟಗೆರಿ ನಿವೇಶನ ಪಡೆಯುವ ಅವಕಾಶವಿರುತ್ತದೆ. ಅದೇ ರೀತಿ ನಾನು ಕೂಡಾ ನಿವೇಶನ ಪಡೆದಿದ್ದೇನೆ.

ಇದರಲ್ಲಿ ನಾನು ಯಾವುದೇ ಅಕ್ರಮ ಎಸೆಗಿಲ್ಲ. ನನ್ನ ಹೆಸರಿನಲ್ಲಿ ಇರುವುದು ಒಂದೇ ನಿವೇಶನ ಹಾಗೂ ಅದರಲ್ಲಿ ಮನೆ ಕಟ್ಟಲಾಗಿದೆ.

ನನ್ನ ಬೆಳವಣಿಗೆ ಸಹಿಸದ ಕೆಲವರು ಈ ರೀತಿ ಷಡ್ಯಂತ್ರದ ಮೂಲಕ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕವೇ ತಕ್ಕ ಉತ್ತರ ನೀಡುತ್ತೇನೆ ಎಂದು ಕೇಂದ್ರ ಸಣ್ಣ ಕೈಗಾರಿಕಾ ಸಚಿವ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+