ಸಚಿವರ ಕಚೇರಿಯಲ್ಲಿ ಹೋಮ, ಹವನ, ವಾಸ್ತು ನಿಷಿದ್ದ

ಈ ಸಂಬಂಧ ಬರುವ ತಿಂಗಳು ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರಕಾರ ಸಕಲ ಸಿದ್ದತೆ ನಡೆಸಿದೆ.
ಕರ್ನಾಟಕ ವಿಧಾನಮಂಡಲದ ಕಾಯ್ದೆ-1956ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.
ಹೊಸದಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ವಾಸ್ತು ಹೆಸರಿನಲ್ಲಿ ಬೇಕಾಬಿಟ್ಟಿ ನವೀಕರಣ ಮಾಡಿ ಕಟ್ಟಡದ ಮೂಲ ಸ್ವರೂಪವನ್ನೇ ಬದಲಾಯಿಸಲಾಗುತ್ತಿತ್ತು.
ಅಷ್ಟೇ ಅಲ್ಲದೆ ಕಚೇರಿ ಮತ್ತು ವಸತಿ ಕಟ್ಟಡಗಳಲ್ಲಿ ಹೋಮ, ಹವನ ಇತ್ಯಾದಿ ಧಾರ್ಮಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಮಸೂದೆಯ ಮಂಡನೆಯ ಉದ್ದೇಶ ಎಂದು ವಿಧಾನ ಪರಿಷತ್ ಸಭಾಪತಿ ಡಿ ಎಚ್ ಶಂಕರಮೂರ್ತಿ ಹೇಳಿದ್ದಾರೆ.
ಸಂವಿಧಾನದ ನಿಯಮಗಳಿಗೆ ಆಗುವ ಅಪಚಾರ ಮತ್ತು ನವೀಕರಣದಿಂದ ಬೊಕ್ಕಸಕ್ಕೆ ಹೊರೆಯಾಗುವುದನ್ನು ತಡೆಯುವುದು ಮಸೂದೆಯ ಉದ್ದೇಶ.
ಜೆಡಿಎಸ್ ನಾಯಕ ಎಂ ಸಿ ನಾಣಯ್ಯ ಈ ಹಿಂದೆ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿದ್ದರು. ಈಗ ಸರಕಾರವೇ ಮಸೂದೆ ಮಂಡಿಸಲು ನಿರ್ಧರಿಸಿದೆ ಎಂದು ಶಂಕರಮೂರ್ತಿ ಹೇಳಿದ್ದಾರೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 5 ರಿಂದ ಬೆಳಗಾವಿಯಲ್ಲಿ ಆರಂಭವಾಗಲಿದೆ.












Click it and Unblock the Notifications