ಎಲ್ಲಾ ಪಕ್ಷಗಳಿಗೂ ನನ್ನ ಕಂಡರೆ ಭಯ: ಬಿಎಸ್ ವೈ

BS Yeddyurappa interview with NDTV high lights
ನವದೆಹಲಿ, ನ.27: ಕರ್ನಾಟಕ ಜನತಾ ಪಕ್ಷ ಸ್ಥಾಪನೆ ನನ್ನ ಸ್ವಾರ್ಥ ಸಾಧನೆಗಾಗಿ ಅಲ್ಲ, ಕರ್ನಾಟಕದ ಏಳಿಗೆಗಾಗಿ ಮಾತ್ರ. ಕೆಜೆಪಿಗೆ ಜೊತೆ ಕೈಜೋಡಿಸಲು 50-60 ಜನ ಶಾಸಕರು ಸಿದ್ದರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಎನ್ ಡಿಟಿವಿಯ ಶ್ರೀನಿವಾಸನ್ ಜೈನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು? ಇಲ್ಲಿದೆ ಸಂದರ್ಶನದ ಮುಖ್ಯಾಂಶಗಳು

* ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಸದಾನಂದ ಗೌಡ ನನಗೆ ನಂಬಿಕೆ ದ್ರೋಹ ಮಾಡಿದರು. ಕೇಂದ್ರದ ನಾಯಕರು ಅವರಿಗೆ ರಾಜೀನಾಮೆ ನೀಡದಂತೆ ತಾಕೀತು ಮಾಡಿದ್ದರು ಎಂಬುದು ನಂತರ ತಿಳಿಯಿತು.
* ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದ್ದು ನಾನೇ ಎಂಬ ಹೆಮ್ಮೆಯಿದೆ.
* ನಿತಿನ್ ಗಡ್ಕರಿ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ನಂತರ ಅವರು ಕೂಡಾ ಕೈ ಕೊಟ್ಟರು.
* ಈಗ ಕಾಲ ಮೀರಿದೆ ಬಿಜೆಪಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಮನಸ್ಸಿಲ್ಲ. ಕೇಂದ್ರ ನಾಯಕರ ಜೊತೆ ಮಾತುಕತೆಯಂತೂ ದೂರದ ಮಾತು.

* ಅನಂತ್ ಕುಮಾರ್ ಅವರಿಗೆ ಕರ್ನಾಟಕದ ಸಿಎಂ ಸ್ಥಾನದ ಮೇಲೆ ಕಣ್ಣಿದೆ. ಈ ಬಗ್ಗೆ ಹೈಕಮಾಂಡ್ ಮೇಲೆ ಸದಾ ಕಾಲ ಒತ್ತಡ ಹೇರುವುದೇ ಅವರ ಕಾಯಕ.
* ನನ್ನ ಮೇಲೆ ಲೋಕಾಯುಕ್ತ ವರದಿಯಲ್ಲಿ ಬಂದಿದ್ದ ಆರೋಪಗಳು ಸುಳ್ಳು ಎಂಬುದು ಸಿಬಿಐ ವರದಿಯಿಂದ ತಿಳಿದಿದೆ. ಆದರೂ ಅಡ್ವಾಣಿ ಅವರು ನನ್ನನ್ನು ಬೆಂಬಲಿಸಲಿಲ್ಲ.

* ಕಾನೂನು ಹೋರಾಟದ ಮೇಲೆ ನನಗೆ ನಂಬಿಕೆ ಇದೆ. ನಾನು ನಿರಪರಾಧಿ ಎಂದು ಸಾಬೀತಾಗುವವರೆಗೂ ಹೋರಾಟ ಮುಂದುವರೆಯಲಿದೆ.

* ಜಗದೀಶ್ ಶೆಟ್ಟರ್ ಅವರ ಸರ್ಕಾರ ಬೀಳಿಸುವುದಿಲ್ಲ. ನಾವೇ ಸಿಎಂ ಸ್ಥಾನ ಕೊಟ್ಟು ಕಿತ್ತುಕೊಳ್ಳುವುದು ಸರಿಯಲ್ಲ. ಇದನ್ನು ಜನತೆ ಮೆಚ್ಚುವುದಿಲ್ಲ.
* ನ.30 ರಂದು ರಾಜೀನಾಮೆ ನೀಡುವುದು ಖಚಿತ. ಸುಮಾರು 50-60 ಶಾಸಕರು ಕೆಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
* ನಿತಿನ್ ಗಡ್ಕರಿ ಅವರ ಹಗರಣದ ಬಗ್ಗೆ ನಾನು ಏನು ಹೇಳಲಾರೆ. ಅದು ಇಡೀ ದೇಶಕ್ಕೆ ತಿಳಿದ ವಿಚಾರ.

* ಜನರ ಸಂಪರ್ಕ ಸದಾ ಕಾಲ ಇಟ್ಟುಕೊಂಡಿದ್ದರಿಂದ ನನಗೆ ಜನ ಸಾಮಾನ್ಯರ ನೋವಿನ ಅರಿವಿದೆ. ಮುಂಬರುವ ಚುನಾವಣೆಯಲ್ಲಿ ಇದೆ ನಮಗೆ ಶ್ರೀರಕ್ಷೆಯಾಗಲಿದೆ.
* ಇದು ಪ್ರಾದೇಶಿಕ ಪಕ್ಷಗಳ ಕಾಲ. ಕರ್ನಾಟಕದ ಜನತೆ ಬದಲಾವಣೆಯನ್ನು ಬಯಸಿದ್ದಾರೆ.
* ಆರೆಸ್ಸೆಸ್ ನನ್ನನ್ನು ಬೆಂಬಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.

* ಡಿ.9 ರಂದು ಹಾವೇರಿಯಲ್ಲಿ ಕರ್ನಾಟಕ ಜನತಾ ಪಾರ್ಟಿಗೆ ಚಾಲನೆ ಸಿಗಲಿದ್ದು, ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಸೂಚಿಯಾಗಲಿದೆ.
* ರಾಜ್ಯದ ನೆಲ, ಜಲ, ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಪಕ್ಷದ ಉದ್ದೇಶ.
* 19 ಸೀಟುಗಳನ್ನು ಗೆಲ್ಲಿಸಿಕೊಟ್ಟವನು ನಾನು. ಎಲ್ಲಾ ಸಮುದಾಯದ ಬೆಂಬಲ ನನಗಿದೆ. ನಾನು ಬರೀ ಲಿಂಗಾಯತ ನಾಯಕನಲ್ಲ. ಅದಕ್ಕಾಗಿ ಎಲ್ಲಾ ಪಕ್ಷಗಳಿಗೂ ನನ್ನ ಕಂಡರೆ ಭಯ.
* ಎಲ್ ಕೆ ಅಡ್ವಾಣಿ ಅವರ ಬಗ್ಗೆ ಗೌರವವಿದೆ. ಆದರೆ, ಕೆಲವು ವಿಷಯದಲ್ಲಿ ಬೇಸರವು ಇದೆ.
* ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತ ವ್ಯಕ್ತಿ ಎಂದು ಅವರನ್ನು ಪಕ್ಷದಲ್ಲಿದ್ದಾಗ ಬೆಂಬಲಿಸಿದ್ದು ನಿಜ. ಈಗ ಆ ಬಗ್ಗೆ ಏನ್ನನ್ನೂ ಹೇಳಲಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+