ಪತ್ರಕರ್ತರಿಗೇ ಗಿಳಿಪಾಠ ಹೇಳಿದ ಗೋ ಮಧುಸೂದನ್

ಇದೀಗ ಉಸ್ತುವಾರಿ ಸಚಿವ ರಾಮ್‌ದಾಸ್ ಮೇಲೆ ಅದೇ ಪಕ್ಷದ ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಭೂಕಬಳಿಕೆಯ ಆರೋಪ ಮಾಡಿ ತಾನೊಬ್ಬ ನಿಷ್ಠಾವಂತ ಎಂಬಂತೆ ಪೋಸ್ ಕೊಟ್ಟಿದ್ದರು. ಇದಾದ ಎರಡೇ ದಿನಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ, ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ಅವರು ಮಧುಸೂದನ್‌ರವರು ತಮ್ಮ ಪ್ರಭಾವ ಬಳಸಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ನಿವೇಶನವನ್ನು ಕಡಿಮೆ ಬೆಲೆಗೆ ಜಯಲಕ್ಷ್ಮಿಪುರಂನಲ್ಲಿರುವ ವಿದ್ಯಾಶ್ರಮಕ್ಕೆ ಮಂಜೂರು ಮಾಡಿಸಿಕೊಡುವ ಮೂಲಕ ಅವ್ಯವಹಾರ ಎಸಗಿದ್ದಾರೆ. ಇದು ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎಂಬುವುದನ್ನು ಬಯಲು ಮಾಡಿದ್ದರು.
ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ಮಾಡಿರುವ ಆರೋಪಕ್ಕೆ ಮೈಸೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಂಗಳವಾರ ಸ್ಪಷ್ಟನೆ ನೀಡಿದ ಮಧುಸೂದನ್, ವಿದ್ಯಾಶ್ರಮ ಶಿಕ್ಷಣ ಸಂಸ್ಥೆಗೆ ಒಬ್ಬ ಎಂಎಲ್‌ಸಿಯಾಗಿ ಶಿಫಾರಸು ಮಾಡಿದ್ದೇನೆ ಹೊರತು ಅದರಲ್ಲಿ ನನ್ನ ಪಾಲುದಾರಿಕೆಯಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಜಿ.ಕೆಟಗರಿ ನಿವೇಶನಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸಿಎ ನಿವೇಶನವನ್ನು ಮಂಜೂರು ಮಾಡಿಸಿದ್ದಾಗಿಯೂ, ಲಕ್ಷ್ಮಣ್ ಆರೋಪ ಮಾಡಿದಂತೆ ಎಂಟು ನಿವೇಶನಗಳು ಅಲ್ಲ, ಕೇವಲ ನಾಲ್ಕು ನಿವೇಶನಗಳನ್ನು ಮಾತ್ರ ಮಂಜೂರು ಮಾಡಿದ್ದಾಗಿ, ಜೊತೆಗೆ ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವುದಿಲ್ಲ ಅದರ ಬೆಲೆ ಸುಮಾರು ತೊಂಬತ್ತೆರಡು ಲಕ್ಷ ರೂಪಾಯಿ ಎಂಬುವುದಾಗಿ ಹೇಳಿ ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ನಿವೇಶನಗಳಿಗಾಗಿ ಅರ್ಜಿ ಗುಜರಾಯಿಸಿ ಹತ್ತಾರು ವರ್ಷ ಕಳೆದಿದ್ದರೂ ಮುಡಾದಿಂದ ನಿವೇಶನ ಹಂಚಿಕೆಯಾಗಿಲ್ಲ. ಹೀಗಿರುವಾಗ ನೀವು ಕೇವಲ ಐದೇ ದಿನದಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧುಸೂದನ್, ಪ್ರಭಾವ ಇದ್ದರೆ ಏನು ಬೇಕಾದರು ಮಾಡಬಹುದೆಂದು ಹೇಳುತ್ತಾ, ನೋಡಿ ಚಾಮುಂಡಿಬೆಟ್ಟಕ್ಕೆ ಮೆಟ್ಟಲು ಹತ್ತಿಯೂ ಹೋಗಬಹುದು.... ಕಾರಿನಲ್ಲಿಯೂ ಹೋಗಬಹುದು.... ಹೆಲಿಕಾಫ್ಟರ್‌ನಲ್ಲಿಯೂ ಹೋಗಿ ಇಳಿಯಬಹುದಲ್ಲವೆ? ಎಂಬ ಗಿಳಿಪಾಠವನ್ನೂ ಹೇಳಿಕೊಟ್ಟರು.












Click it and Unblock the Notifications