ಯಡಿಯೂರಪ್ಪ ಜಾತಕ ಫಲದಲ್ಲಿ ಪ್ರಧಾನಿಯಾಗುವ ಯೋಗ

ನನಗೆ ಬಿಜೆಪಿ ಮತ್ತು ಕ್ಷೇತ್ರದ ಮತದಾರರು ಎಲ್ಲವನ್ನೂ ನೀಡಿದ್ದಾರೆ. ಬಿಜೆಪಿ ಬಿಟ್ಟು ಯಡಿಯೂರಪ್ಪ ಅವರ ಹೊಸ ಪಕ್ಷಕ್ಕೆ ಸೇರುವ ಇರಾದೆ ನನಗಿಲ್ಲ. ಯಡಿಯೂರಪ್ಪ ಬಿಜೆಪಿಯಲ್ಲೇ ಉಳಿಯಬೇಕೆಂದು ಬಯಸುತ್ತೇನೆ.
ಅವರು ಬಿಜೆಪಿಯಲ್ಲಿದ್ದರೆ ಅವರ ಜಾತಕ ಫಲದಲ್ಲಿ ಪ್ರಧಾನಮಂತ್ರಿ ಆಗುವ ಯೋಗವಿದೆ. ಅದು ಸಾಕಾರವಾಗ ಬೇಕಾದರೆ ಅವರು ಬಿಜೆಪಿಯಲ್ಲಿ ಮುಂದುವರಿಯಬೇಕೆಂದು ಕೃಷ್ಣಯ್ಯ ಶೆಟ್ಟಿ ಭವಿಷ್ಯ ನುಡಿದ್ದಾರೆ.
ಕಾರ್ತಿಕ ಸೋಮವಾರದ ಪ್ರಯುಕ್ತ ತಾಲೂಕಿನ ಜನತೆಗೆ ಧರ್ಮಸ್ಥಳಕ್ಕೆ ಉಚಿತ ಬಸ್ ಪ್ರವಾಸ ಆಯೋಜಿಸಿ ಮಾತನಾಡುತ್ತಿದ್ದ ಕೃಷ್ಣಯ್ಯ ಶೆಟ್ಟಿ, ಮಾಧ್ಯಮಗಳು ಬಿಂಬಿಸುವಂತೆ ಪಕ್ಷದಲ್ಲಿ ತುಂಬಾ ಭಿನ್ನಾಭಿಪ್ರಾಯಗಳು ಇಲ್ಲ.
ಸಣ್ಣಪುಟ್ಟ ಗೊಂದಲಗಳಿರುವುದು ಸಹಜ. ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಕೃಷ್ಣಯ್ಯ ಶೆಟ್ಟಿ ಹೇಳಿದ್ದಾರೆ.
ನಾನು ಬಿಜೆಪಿಯ ಶಿಸ್ತಿನ ಸಿಪಾಯಿ, ಮುಂದಿನ ದಿನದಲ್ಲಿ ಪಕ್ಷ ಏನು ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸಲು ಸಿದ್ದನಿದ್ದೇನೆ. ಮಾಲೂರು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕೆಲಸ ನಡೆಸಿದ್ದೇನೆ.
ಕ್ಷೇತ್ರದ ಜನತೆಗೆ ನನ್ನ ಕೆಲಸ ಕಾರ್ಯಗಳಲ್ಲಿ ತೃಪ್ತಿಯಿದೆ ಎಂದು ಹೇಳಲು ಕೃಷ್ಣಯ್ಯ ಶೆಟ್ಟಿ ಮರೆಯಲಿಲ್ಲ.












Click it and Unblock the Notifications