6 ಐಎಎಸ್, 1 ಐಎಫ್ಎಸ್ ಅಧಿಕಾರಿಗೆ ವರ್ಗಾವಣೆ

* ಅರವಿಂದ್ ಜಾದವ್-ಎಸಿಎಸ್ ಪ್ರವಾಸೋದ್ಯಮ ಇಲಾಖೆ(ಹೆಚ್ಚುವರಿ ಹೊಣೆ),
* ಸಿ.ಎಸ್ ಕೇದಾರ್-ಅಧ್ಯಕ್ಷ, ಕೆಯುಐಡಿಎಫ್‌ಸಿ,
* ಸುಬೀರ್ ಹರಿಸಿಂಗ್-ಅಧ್ಯಕ್ಷ, ಬಿಡಿಎ(ಹೆಚ್ಚುವರಿ),
* ಶಂಭು ದಯಾಳ್ ಮೀನಾ-ಪ್ರಧಾನ ಕಾರ್ಯದರ್ಶಿ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ,
* ಇ.ವೆಂಕಟಯ್ಯ-ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ(ಹೆಚ್ಚುವರಿ),
* ಮೊಹಮ್ಮದ್ ಮೊಹ್ಸಿನ್-ಆಡಳಿತಾಧಿಕಾರಿ-ಕಾಡಾ ಬೆಳಗಾವಿ.ಐಎಫ್‌ಎಸ್:
* ಕೆ.ಎಚ್.ನಾಗರಾಜ್-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ ಜಿಲ್ಲೆ.
ಬಿಡಿಎ ಅಧ್ಯಕ್ಷರಾಗಿದ್ದ ಸಿಎಚ್ ಕೇದಾರ್ ಅವರು ಈಗ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಶಿವಮೊಗ್ಗ ಕಚೇರಿಯಲ್ಲಿ ಸಂರಕ್ಷಣಾಧಿಕಾರಿಯಾಗಿದ್ದ ನಾಗರಾಜ್ ಅವರು ಹಾಸನ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಇತ್ತೀಚೆಗೆ ಕರ್ನಾಟಕ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿತ್ತು.
ಡಾ.ಸಿ.ಸೋಮಶೇಖರ್-ಅಬಕಾರಿ ಆಯುಕ್ತ, ಡಾ.ಎನ್. ಎಸ್.ಚನ್ನಪ್ಪಗೌಡ- ಕೆಎಸ್ಸಾರ್ಟಿಸಿ ನಿರ್ದೇಶಕ, ಎಸ್.ಶಂಕರ ನಾರಾ ಯಣ-ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಹಾಗೂ ಎನ್. ಪ್ರಕಾಶ್-ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿತ್ತು.
ಈ ಪೈಕಿ ಚನ್ನಪ್ಪ ಗೌಡರ ವರ್ಗಾವಣೆ ಹಿಂದೆ ಸ್ಥಳೀಯ ಶಾಸಕ ಯೋಗೀಶ್ ಅವರ ಕೈವಾಡವಿದೆ. ಇಬ್ಬರ ನಡುವೆ ಇತ್ತೀಚೆಗೆ ನಡೆದ ಮಾತಿನ ಚಕಮಕಿ ಡಿಸಿ ವರ್ಗಾವಣೆಗೆ ಕಾರಣವಾಗಿದೆ ಎಂಬ ಸುದ್ದಿ ಇದೆ.












Click it and Unblock the Notifications