2013ನೇ ಇಸ್ವಿ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
ಬೆಂಗಳೂರು, ನ. 22 : ವರ್ಷದ ಕೊನೆ ಬರುತ್ತಿದ್ದಂತೆ ಮುಂದಿನ ವರ್ಷ ಯಾವಗ್ಯಾವಾಗ ಸರಕಾರಿ ರಜಾ ದಿನಗಳು ಬರುತ್ತವೆ, ಯಾವಾಗ ಪರಿಮಿತ ರಜಾ ದಿನಗಳು ಬರುತ್ತವೆ ಎಂಬ ಕುತೂಲಹ ಸರಕಾರಿ ನೌಕರರಿಗೆ ಮಾತ್ರವಲ್ಲ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಲ್ಲಿಯೂ ಸಹಜವಾಗಿ ಇದ್ದೇ ಇರುತ್ತದೆ.
ವಾರಾಂತ್ಯದಲ್ಲಿ ಅಥವಾ ವಾರದ ಆರಂಭದಲ್ಲಿ ಯಾವ್ಯಾವ ಹಬ್ಬಗಳು ಬಂದಿವೆ ಎಂಬುದರತ್ತವೇ ಎಲ್ಲರ ಗಮನವೂ ಇರುತ್ತದೆ. ಹಾಗೆ ಬಂದಾಗ, ವೀಕೆಂಡ್ ಪ್ರವಾಸ ಕೈಗೊಳ್ಳಲು ಕೂಡ ಅನೇಕರಿಗೆ ಅನುಕೂಲ. ಹಾಗೆಯೆ, ಯಾವ ಮುಖ್ಯವಾದ ಹಬ್ಬ ರಜಾದಿನದಂದು ಬಂದು ರಜಾ ಕ್ಯಾನ್ಸಲ್ ಆಗುತ್ತದೆ ಎಂಬ ಆತಂಕಭರಿತ ಕುತೂಹಲವೂ ಅನೇಕರಲ್ಲಿರುತ್ತದೆ.

| ಕ್ರ.ಸಂ. | ದಿನಾಂಕ | ವಾರ | ಸಾರ್ವತ್ರಿಕ ರಜಾ ದಿನಗಳು |
| 1 | 14-01-2013 | ಸೋಮವಾರ | ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ |
| 2 | 25-01-2013 | ಶುಕ್ರವಾರ | ಈದ್ ಮಿಲಾದ್ |
| 3 | 26-01-2013 | ಶನಿವಾರ | ಗಣರಾಜ್ಯೋತ್ಸವ |
| 4 | 29-03-2013 | ಶುಕ್ರವಾರ | ಗುಡ್ ಫ್ರೈಡೆ |
| 5 | 11-04-2013 | ಗುರುವಾರ | ಚಾಂದ್ರಮಾನ ಯುಗಾದಿ (ಹಿಂದೂ ಹೊಸವರ್ಷ) |
| 6 | 23-04-2013 | ಮಂಗಳವಾರ | ಮಹಾವೀರ ಜಯಂತಿ |
| 7 | 01-05-2013 | ಬುಧವಾರ | ಕಾರ್ಮಿಕ ದಿನಾಚರಣೆ |
| 8 | 13-05-2013 | ಸೋಮವಾರ | ಬಸವ ಜಯಂತಿ |
| 9 | 09-08-2013 | ಶುಕ್ರವಾರ | ಖುತುಬ್-ಎ-ರಂಜಾನ್ |
| 10 | 15-08-2013 | ಬುಧವಾರ | ಸ್ವಾತಂತ್ರ್ಯ ದಿನಾಚರಣೆ |
| 11 | 09-09-2013 | ಸೋಮವಾರ | ಗಣೇಶ ಚತುರ್ಥಿ |
| 12 | 02-10-2013 | ಬುಧವಾರ | ಗಾಂಧಿ ಜಯಂತಿ |
| 13 | 04-10-2013 | ಶುಕ್ರವಾರ | ಮಹಾಲಯ ಅಮವಾಸ್ಯೆ |
| 14 | 14-10-2013 | ಸೋಮವಾರ | ವಿಜಯದಶಮಿ |
| 15 | 16-10-2013 | ಬುಧವಾರ | ಬಕ್ರೀದ್ |
| 16 | 18-10-2013 | ಶುಕ್ರವಾರ | ಮಹರ್ಷಿ ವಾಲ್ಮಿಕಿ ಜಯಂತಿ |
| 17 | 01-11-2013 | ಶುಕ್ರವಾರ | ಕನ್ನಡ ರಾಜ್ಯೋತ್ಸವ |
| 18 | 02-11-2013 | ಶನಿವಾರ | ನರಕ ಚತುರ್ದಶಿ |
| 19 | 04-11-2013 | ಸೋಮವಾರ | ಬಲಿಪಾಡ್ಯಮಿ |
| 20 | 14-11-2013 | ಗುರುವಾರ | ಮೊಹರಂ ಕೊನೇ ದಿನ |
| 21 | 20-11-2013 | ಬುಧವಾರ | ಕನಕದಾಸ ಜಯಂತಿ |
| 22 | 25-12-2013 | ಬುಧವಾರ | ಕ್ರಿಸ್‌ಮಸ್ |
ಈ ರಜಾದಿನಗಳ ಪಟ್ಟಿ ಮಹಾಶಿವರಾತ್ರಿ (10-03-2013), ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ (14-04-2013), ಆಯುಧ ಪೂಜೆ(13-10-2013)ಗಳನ್ನು ಒಳಗೊಂಡಿಲ್ಲ. ಯಾಕೆಂದರೆ, ಅವೆಲ್ಲ ಭಾನುವಾರದಂದು ಬಂದಿವೆ. ಕರ್ನಾಟಕ ಸರ್ಕಾರವು 2013ನೇ ವರ್ಷಕ್ಕೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಮಜಾ ಮಾಡಿ.












Click it and Unblock the Notifications