ಉಗ್ರ ಕಸಬ್ ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕಿತ್ತು

Kasab should have been hanged in Public, Tukaram Omble's brother
ಮುಂಬೈ, ನ 21: ಕಸಬ್ ನನ್ನು ಗಲ್ಲಿಗೇರಿಸಿದ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಅಮಾಯಕರ ಜೀವ ಬಲಿ ತೆಗೆದುಕೊಂಡ ಇಂಥಹ ಉಗ್ರನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕಿತ್ತು ಎಂದು ಮುಂಬೈ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದ ತುಕಾರಾಂ ಒಂಬ್ಳೆ ಸಹೋದರ ಏಕನಾಥ್ ಒಂಬ್ಳೆ ಹೇಳಿದ್ದಾರೆ.

ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಎದುರಾಳಿ ಪಾಕಿಸ್ತಾನಿ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದಂತಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಲ್ಲಿ ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಕೋರಿದ್ದೆ. ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಏಕನಾಥ್ ಒಂಬ್ಳೆ ಹೇಳಿದ್ದಾರೆ.

ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿ ನೂರಾರು ಅಮಾಯಕರ ಜೀವ ಬಲಿ ತೆಗೆದುಕೊಂಡ ಅಜ್ಮಲ್ ಕಸಬ್ ನನ್ನು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕಾಗಿತ್ತು ಎನ್ನುವುದು ನಮ್ಮ ಕುಟುಂಬದ ಅಪೇಕ್ಷೆಯಾಗಿತ್ತು. ಆದರೂ ಸರಕಾರದ ಕ್ರಮ ನಮಗೆ ಸಂತಸ ತಂದಿದೆ ಎಂದು ಏಕನಾಥ್ ಒಂಬ್ಳೆ ಹೇಳಿದ್ದಾರೆ.

ಅತ್ಯಂತ ಗೌಪ್ಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರ ಕಸಬ್ ನನ್ನು ಪೂನಾದ ಯರವಾಡ ಜೈಲಿನಲ್ಲಿ ಬುಧವಾರ (ನ 21) ಬೆಳಗ್ಗೆ 7.30ರ ಸುಮಾರಿಗೆ ಗಲ್ಲಿಗೆ ಹಾಕಲಾಗಿತ್ತು.

ಮುಂಬೈ ಪೋಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿದ್ದ ತುಕಾರಾಂ ಒಂಬ್ಳೆ ಉಗ್ರ ಕಸಬ್ ನನ್ನು ಜೀವಂತವಾಗಿ ಹಿಡಿದು ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+