ಅಜ್ಮಲ್ ಕಸಬ್ ಸೊಳ್ಳೆ ಕಡಿತಕ್ಕೆ ಬಲಿ: ಜನಾಭಿಪ್ರಾಯ

Kasab died of Dengue; Hanging an eyewash?
ಪುಣೆ, ನ.21: ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿದ್ದು ಖಾತ್ರಿಯಾಗುತ್ತಿದ್ದಂತೆ ಅನೇಕ ಊಹಾಪೋಹ ಸುದ್ದಿಗಳು ಹಬ್ಬುತ್ತಿದೆ.ಅದರಲ್ಲಿ ಬಹುಮುಖ್ಯವಾದದ್ದು, 'ಆಪರೇಷನ್ ಎಕ್ಸ್' ನ ರಹಸ್ಯ ಕಾರ್ಯಾಚರಣೆ. ಕಸಬ್ ಗಲ್ಲಿಗೇರಿಸಲು ನಿಯೋಜಿಸಲಾಗಿದ್ದ ತಂಡದ ಕಾರ್ಯಾಚರಣೆ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕಸಬ್ ಗಲ್ಲಿಗೇರಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮಹರಾಷ್ಟ್ರ ಗೃಹ ಸಚಿವ ಆರ್ ಆರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಿಂದ ದೊರೆತ ಜನಾಭಿಪ್ರಾಯದಂತೆ ಕಸಬ್ ನನ್ನು ಗಲ್ಲಿಗೇರಿಸಿದ್ದು ಕೇವಲ ಕಣ್ಣೊರೆಸುವ ತಂತ್ರ, ಕಸಬ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಆತನ ಸತ್ತಿದ್ದು ಡೆಂಗ್ಯೂ ನಿಂದಲೆ ಹೊರತು ಗಲ್ಲಿಗೇರಿಸಿದ್ದರಿಂದ ಅಲ್ಲ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.

ಹಾಗಾದರೆ, ನೂರಾರು ಜನರ ಅಮಾಯಕ ಪ್ರಾಣ ತೆಗೆದ ಪಾತಕಿಯನ್ನು ಕೇವಲ ಒಂದು ಸೊಳ್ಳೆ ಕೊಂದು ಹಾಕಿತೇ? ಕಾಂತ್ರಿವೀರ್ ಚಿತ್ರದಲ್ಲಿ ನಾನಾ ಪಾಟೇಕರ್ ಡೈಲಾಗ್ ನೆನಪಾಗುತ್ತದೆ 'ಸಾಲಾ ಏಕ್ ಮಚ್ಚರ್ ಆದ್ಮಿ ಕೋ ಹಿಜಡಾ ಬನಾ ದೇ ತಿ ಹೈ' ನಿಜಕ್ಕೂ ಸೊಳ್ಳೆ ಕಡಿತಕ್ಕೆ ಕಸಬ್ ಬಲಿಯಾಗಿದ್ದಾನೆ. ಉಗ್ರರಿಗೆ ಅದಕ್ಕಿಂತ ಅವಮಾನ ಮತ್ತೊಂದಿಲ್ಲ ಎನ್ನಬಹುದು.

1. Pawan Durani ‏@pawandurani Question: Kasab was reported to be suffering with Dengue . Does the Indian law allow sick to be hanged ? || #Kasab ||

What is the catch ? 2. Transfer Pricing ‏@ArmsLengthTP Question - Curious! Did #Kasab die of dengue? Is govt's hasty action a cover up? @sardesairajdeep shd invite d Mosquito on India at 9 & find out!

3. Rohit Roy ‏@rohitroy500 Question - "@rajesh2tweet: @rohitroy500 Kasab might hv died on Dengue....Govt claiming he is hanged." No wayyyy! Are u serious???

4. иєєℓ ѕσиι ... ‏@iNeelSoni Question - Ajmal Kasab had dengue few weeks before. Govt really hanged him or he died because of dengue ? #MillionDollarQuestion

Kiran Kumar S ‏@KiranKS : How is the mosquito scene in and around Tihar jail? Looks like dengue is the only hope in Afzal Guru's case.

ಡೆಂಗ್ಯೂ ಜ್ವರಕ್ಕೆ ಕಾರಣವಾಗುವುದು ಒಂದು ಯಃಕಶ್ಚಿತ್ ಸೊಳ್ಳೆ Aedes mosquito. ಕಸಬ್ ನನ್ನು ಅಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿರುವಾಗ ಅತ್ಯಧಿಕ ಭದ್ರತೆಯ ಆರ್ಥರ್ ಜೈಲಿನೊಳಕ್ಕೆ ನುಸುಳಿ ಕಸಬ್ ನನ್ನು ಕಚ್ಚಿತ್ತು.

ಮುಂಬೈನ ಸರಕಾರಿ JJ Hospital ವೈದ್ಯರು ಜೈಲಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಒಪ್ಪಿಗೆ ನೀಡಿರಲಿಲ್ಲ. ನ.5 ರ ನಂತರ ಆತನ ಸ್ಥಿತಿ ಹದಗೆಟ್ಟಿತ್ತು ಎನ್ನಲಾಗಿದೆ. ಆದರೆ, ಕೆಲವು ಮಾಧ್ಯಮಗಳಲ್ಲಿ ಕಸಬ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಎನ್ನಲಾಗಿದೆ.

ಜ್ವರ ಇದ್ದರೆ ನೇಣು ಹೇಗೆ ಸಾಧ್ಯ?: ಉಗ್ರ ಕಸಬ್ ನನ್ನು ಗಲ್ಲಿಗೇರಿಸುವಾಗ ಡೆಂಗ್ಯೂ ಜ್ವರ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಸಣ್ಣ ಪ್ರಮಾಣ ಕಾಯಿಲೆ ಇದ್ದರೂ ನೇಣು ಹಾಕಲು ಸಾಧ್ಯವಿಲ್ಲ. ಅನಾರೋಗ್ಯ ಪೀಡಿತರನ್ನು ಗಲ್ಲಿಗೇರಿಸಬಾರದು ಎಂದು ಕಾನೂನು ಹೇಳುತ್ತದೆ. ಅದರೆ, ಯೆರವಾಡ ಜೈಲಿನಲ್ಲಿ ನಡೆದಿದ್ದೇನು? ಕಸಬ್ ಅಂತ್ಯ ಸಂಸ್ಕಾರ ಅದೇ ಜೈಲಿನಲ್ಲಿ ನಡೆಯುವುದು ಏಕೆ? ಎಂಬ ಪಬ್ಲಿಕ್ ಪ್ರಶ್ನೆಗೆ ಯುಪಿಎ ನಾಯಕರು ಉತ್ತರಿಸಬಲ್ಲರೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+