ಫೇಸ್ ಬುಕ್ ಕಾಮೆಂಟ್, ಯುವತಿ ರಿಲೀಸ್, 9 ಜನ ಸೆರೆ

ಫೇಸ್ ಬುಕ್ ಕಾಮೆಂಟ್ ಹಾಕಿದ್ದ ಯುವತಿ ಶಹೀನ್ ದಾಡ ಹಾಗೂ ಕಾಮೆಂಟ್ ಲೈಕ್ ಮಾಡಿದ್ದ ಆಕೆ ಗೆಳೆತಿ ಇಬ್ಬರಿಗೆ ಜಾಮೀನಿನ ಮೇಲೆ ಬಿಡುಗಡೆ ಸಿಕ್ಕಿದೆ. ಇಬ್ಬರು ತಲಾ 15,000 ರು ದಂಡ ಕಟ್ಟಿ ಜೈಲಿನಿಂದ ಹೊರಬಂದಿದ್ದಾರೆ.
ಈ ನಡುವೆ ಯುವತಿಯ ಸಂಬಂಧಿಕರೊಬ್ಬರ ಕ್ಲಿನಿಕ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಸುಮಾರು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತರೆಲ್ಲರೂ ಶಿವಸೇನೆ ಕಾರ್ಯಕರ್ತರೇ? ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.
ಫೇಸ್ ಬುಕ್ ಕಾಮೆಂಟ್, ಲೈಕ್ ಮಾಡಿದ್ದಕ್ಕೆ ಯುವತಿಯರನ್ನು ಬಂಧಿಸಿದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಚೇರ್ಮನ್ ಮಾರ್ಕಂಡೇಯ ಕಟ್ಜು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಕಟ್ಜು, ಪೊಲೀಸರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕ್ರೈಂ ಮಾಡದವರನ್ನು ಕ್ರಿಮಿನಲ್ ಗಳಂತೆ ನಡೆಸಿಕೊಳ್ಳುವುದು ಬಂಧಿಸುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಯುವತಿಯರು ನಡೆದುಕೊಂಡಿಲ್ಲ. ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದಂತೆ ನಡೆದುಕೊಳ್ಳಬಾರದು ಎಂದು ಕಟ್ಜು ಟೀಕಿಸಿದ್ದಾರೆ.
ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ಕೂಡಾ ಈ ಪ್ರಕರಣದಲ್ಲಿ ಯುವತಿಯರ ಬಂಧನವನ್ನು ಖಂಡಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಯುವತಿಯರನ್ನು ಗೌರವವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ದರು. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿತ್ತು.
ಇದನ್ನು ಖಂಡಿಸಿ 21 ವರ್ಷದ ಯುವತಿ ಫೇಸ್ ಬುಕ್ ನಲ್ಲಿ "Thackeray are born and die daily and one should not observe a bandh for that",ಎಂದು ಸ್ಟೇಟಸ್ ಹಾಕಿದ್ದಳು. ಇದನ್ನು ಆಕೆ ಗೆಳತಿಯೊಬ್ಬಳು ಲೈಕ್ ಮಾಡಿದ್ದಳು. ಈಗ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಇಬ್ಬರು ಯುವತಿಯರ ಮೇಲೆ ಐಪಿಸಿ ಸೆಕ್ಷನ್ 295(a) ಹಾಗೂ 2000ರ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 649(a) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯುವತಿ ನಂತರ ತನ್ನ ತಪ್ಪಿನ ಅರಿವಾಗಿ ಕಾಮೆಂಟ್ ತೆಗೆದು ಹಾಕಿ, ಕ್ಷಮೆ ಕೋರಿದ್ದಾಳೆ.
ಆದರೆ, ಇದಕ್ಕೂ ಮುನ್ನ ವಿಷಯ ತಿಳಿದ 2000ಕ್ಕೂ ಅಧಿಕ ಶಿವಸೇನಾ ಕಾರ್ಯಕರ್ತರು ಯುವತಿಯ ಮನೆ ಮೇಲೆ ದಾಳಿ ನಡೆಸಿ ದಾಂಧಲೆ ಎಬ್ಬಿಸಿದ್ದಾರೆ. ಆಕೆ ಸಂಬಂಧಿಕರೊಬ್ಬರ ಕ್ಲಿನಿಕ್ ಮೇಲೂ ದಾಳಿ ನಡೆಸಿದ್ದರು.











Click it and Unblock the Notifications