ಶ್ರೀಕಂಠದತ್ತ ಒಡೆಯರ್ ಗೆ ಯಡಿಯೂರಪ್ಪ ದೊಡ್ಡ ಗಾಳ

yeddyurappa-invites-srikanta-datta-wadiyar-join-kjp
ಬೆಂಗಳೂರು, ನ.16: ತಮ್ಮ ಕೆಜೆಪಿ ಪ್ರಾದೇಶಿಕ ಪಕ್ಷಕ್ಕೆ ಜೀವತುಂಬುವ ಪ್ರಯತ್ನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಅರಮನೆಯ ಅಂಗಳದಲ್ಲಿ ಕಸರತ್ತು ನಡೆಸಿದ್ದಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ತಮಗೆ ಹಿಡಿತವಿದೆ ಎಂಬುದನ್ನು ಅರಿತಿರುವ ಯಡಿಯೂರಪ್ಪ ಅವರು ಮೈಸೂರು ರಾಜವಂಶಸ್ಥ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು ಅರಮನೆಯಲ್ಲಿ ಶ್ರೀಕಂಠದತ್ತ ಒಡೆಯರ್ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು ಮೂರತು ತಾಸು ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸುದೀರ್ಘ ಮಾತುಕತೆ ವೇಳೆ ತಮ್ಮ ನೂತನ ಪಕ್ಷ KJPಗೆ ಸೇರಿಕೊಳ್ಳುವಂತೆ ಒಡೆಯರ್ ಗೆ ಆಹ್ವಾನ ನೀಡಿದ್ದಾರೆ. ಜತೆಗೆ ಹಾವೇರಿಯಲ್ಲಿ ಡಿ. 9ರಂದು ನಡೆಯಲಿರುವ ಮಹತ್ವದ ಸಮಾವೇಶದಲ್ಲಿ ಖುದ್ದಾಗಿ ಪಾಳ್ಗೊಳ್ಳುವಂತೆಯೂ ಆಮಂತ್ರಣ ನೀಡಿದ್ದಾರೆ.

ಯಡಿಯೂರಪ್ಪ ಆಹ್ವಾನಕ್ಕೆ ಶ್ರೀಕಂಠದತ್ತ ಒಡೆಯರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಕಾಂಗ್ರೆಸ್ ನಲ್ಲಿರುವ ಅವರು ಈ ಹಿಂದೆ ಕೆಲ ಕಾಲ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರು.

ಅತ್ತ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಬಳಿಕ ಒಡೆಯರ್ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಇದನ್ನೇ ಪ್ರಧಾನವಾಗಿಸಿಕೊಂಡು ಒಡೆಯರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯಡಿಯೂರಪ್ಪ ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.

ಮೈಸೂರು ಪ್ರಾಂತ್ಯದಲ್ಲಿ ಪ್ರಬಲವಾಗಿರುವ ನಾಯಕ ಸಮುದಾಯ ಈಗಲೂ ಯದು ವಂಶಸ್ಥರ ಬಗ್ಗೆ ವಿಶ್ವಾಸವಿಟ್ಟುಕೊಂಡಿದೆ. ಅದಕ್ಕಾಗಿಯೇ ಶ್ರೀಕಂಠದತ್ತರನ್ನು ಸೆಳೆಯುವ ಮೂಲಕ ಸಿದ್ದರಾಮಯ್ಯ ಪ್ರಾಬಲ್ಯವನ್ನು ಕುಗ್ಗಿಸುವುದು ಯಡಿಯೂರಪ್ಪನವರ ಉದ್ದೇಶವಾಗಿದೆ. ಸಿದ್ದುಗೆ ಸರಿಯಾಗಿ ಟಾಂಗ್ ನೀಡಲು ಹವಣಿಸುತ್ತಿರುವ ಯಡಿಯೂರಪ್ಪನವರು ತಮ್ಮ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಮೂಲಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಈಗಾಗಲೇ ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+