ಹೊಸ ಪಕ್ಷ ಸ್ಥಾಪನೆ ಸುಳಿವು ನೀಡಿದ ವರ್ತೂರ್ ಪ್ರಕಾಶ್

ರಾಜ್ಯದಲ್ಲಿ ವೀರಶೈವ ಸಮಾಜದವರಿಂಗಿಂತಲೂ ಪ್ರಬಲರಾಗಿದ್ದೇವೆ. ನಾವು ಅದಕ್ಕಾಗಿ ಒಂದು ಹೊಸ ರಾಜಕೀಯ ಪಕ್ಷವನ್ನು ರಚನೆ ಮಾಡಲು ಚಿಂತನೆ ನಡೆದಿದೆ. ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಅಂತಿಮ ತೀರ್ಮಾನ ಕೈಕೊಳ್ಳಲಾಗುವುದು ಎಂದರು.
ಬಿಜೆಪಿ ನನಗೇನು ಸುಮ್ಮನೆ ಸಚಿವ ಸ್ಥಾನ ನೀಡಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ. ಅದಕ್ಕಾಗಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿ ಪಕ್ಷ ಸಂಕಷ್ಟದಲ್ಲಿದ್ದಾಗ ಕೈ ಹಿಡಿದು ಸರ್ಕಾರ ಉಳಿಸಿದ ಪಕ್ಷೇತರ ಶಾಸಕರ ಪೈಕಿ ವರ್ತೂರು ಪ್ರಕಾಶ್ ಕೂಡಾ ಒಬ್ಬರಾಗಿದ್ದಾರೆ. ಆದರೆ, ಇತರೆ ಪಕ್ಷೇತರ ಶಾಸಕರಿಗೆ ಹೋಲಿಸಿದರೆ ವರ್ತೂರು ಪ್ರಕಾಶ್ ಅವರಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ.
ಬಿಜೆಪಿ ಬಿಟ್ಟು ಕರ್ನಾಟಕ ಜನತಾ ಪಕ್ಷ ಎಂಬ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಹಿಂದುಳಿದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ವರ್ತೂರು ಪ್ರಕಾಶ್ ಬಿಟ್ಟು ಉಳಿದ ಪಕ್ಷೇತರ ನಾಯಕರು ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಪಕ್ಷೇತರರ ಚಿತ್ತ ಕಾಂಗ್ರೆಸ್ ನತ್ತ ಹರಿದಿದೆ.
ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸಚಿವರಾಗಿದ್ದರೂ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ವರ್ತೂರು ಆರಂಭದಲ್ಲಿ ಬಿಜೆಪಿಗೆ ಬೆಂಬಲ ನೀಡಿರಲಿಲ್ಲ. ಐವರು ಪಕ್ಷೇತರರು ಹೊರ ಹೊದ ನಂತರ ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ, ಪ್ರಯೋಜನಕ್ಕೆ ಬಾರದ ಖಾತೆ ನೀಡಿದ್ದಾರೆ ಎಂದು ಬಹಿರಂಗ ಟೀಕೆ ಮಾಡಿರುವ ಅವರು ಬಿಎಸ್‌ಆರ್ ಕಾಂಗ್ರೆಸ್ ಸೇರುವುದಾಗಿ ಹೇಳಿಕೊಂಡಿದ್ದರು.
ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ.ಸುಧಾಕರ್, ಶಿವರಾಜ್‌ತಂಗಡಗಿ, ಗೂಳಿಹಟ್ಟಿ ಶೇಖರ್ ಗುರುವಾರ(ನ.8) ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿ ಔಪಚಾರಿಕ ಚರ್ಚೆ ನಡೆಸಿದ್ದರು.
ಪಕ್ಷೇತರರ ಪೈಕಿ ಮಳವಳ್ಳಿ ಕ್ಷೇತ್ರದ ನರೇಂದ್ರ ಸ್ವಾಮಿ, ಪಾವಗಡ ಕ್ಷೇತ್ರದ ವೆಂಕಟರಮಣಪ್ಪ, ಹಿರಿಯೂರು ಕ್ಷೇತ್ರದ ಡಿ.ಸುಧಾಕರ್ ಮೂಲತಃ ಕಾಂಗ್ರೆಸ್‌ನವರಾಗಿದ್ದಾರೆ. ಕನಕರಿಗೆ ಕ್ಷೇತ್ರದ ಶಿವರಾಜ ತಂಗಡಗಿ ಮೂಲತಃ ಬಿಜೆಪಿ, ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್ ಜೆಡಿಎಸ್‌ನವರಾಗಿದ್ದರು.
ವೆಂಕಟರವಣಪ್ಪ ಹಾಗೂ ಡಿ.ಸುಧಾಕರ್ ಎಸ್.ಎಂ.ಕೃಷ್ಣರ ಬೆಂಬಲಿಗರಾಗಿದ್ದು, ಹಲವು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದು, ಶಾಸಕರೂ ಆಗಿದ್ದರು. ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದವರಾದ ನರೇಂದ್ರಸ್ವಾಮಿ ಆರಂಭದಿಂದಲೂ ಅವರೊಂದಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಎರಡು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಕನಕಗಿರಿಯಲ್ಲಿ ಲಿಂಗಾಯಿತರು ಹೆಚ್ಚಿರುವ ಕಾರಣ ಕೆಜೆಪಿಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನ ನೀಡಿದ್ದರು. ಇದನ್ನು ತಂಗಡಗಿ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications