ಯಡಿಯೂರಪ್ಪ ಬಿಜೆಪಿ ಬಿಡೋದಕ್ಕೆ 'ಕೈ'ವಾಡ ಕಾರಣ

ನಾಲ್ಕೈದು ದಿನಗಳಲ್ಲಿ ಕಾಂಗ್ರೆಸ್ಸಿನ ಈ ಷಡ್ಯಂತರದ ವಿವರವನ್ನು ಜನತೆಯ ಮುಂದೆ ತೆರೆದಿಡುವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ನಡೆ ಬಗ್ಗೆ ಖಚಿತ ದನಿಯಲ್ಲಿ ಮಾತನಾಡಿರುವ ಈಶ್ವರಪ್ಪ ಅವರು 'ಹಾವೇರಿಯಲ್ಲಿ ಡಿ. 9ರಂದು ನಡೆಯುವ ಕೆಜೆಪಿ ಸಮಾವೇಶದಲ್ಲಿ ಬಿಜೆಪಿ ಪಕ್ಷದ ಯಾವ ಸಚಿವರೂ, ಶಾಸಕರೂ ಪಾಲ್ಗೊಳ್ಳುವುದಿಲ್ಲ. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ' ಎಂದೂ ಹೇಳಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ 'ಯಡಿಯೂರಪ್ಪ ಮತ್ತು ಅರುಣ್ ಜೇಟ್ಲಿ ಮಧ್ಯೆ ಇತ್ತೀಚೆಗೆ ಬೆಂಗಳೂರಿನಲ್ಲಿ ಏನು ಮಾತುಕತೆ ನಡೆಯಿತೋ ಅದರ ವಿವರ ನನಗೆ ಲಭ್ಯವಾಗಿಲ್ಲ. ಆದರೆ ಯಡಿಯೂರಪ್ಪನವರ ಮನವೊಲಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಅವರು ಬಿಜೆಪಿಯಲ್ಲಿ ಮುಂದುವರಿಯುವ ವಿಶ್ವಾಸ ನನಗಿದೆ' ಎಂದು ಪುನರುಚ್ಚರಿಸಿದರು.
ಈಶ್ವರಪ್ಪಗೆ ಆ ತಾಕತ್ತು ಇಲ್ಲ:
ಬಿಜೆಪಿ ನಾಯಕರು ಷಂಡರು ಎಂದು ತುಮಕೂರು ಸಂಸದ ಜಿ ಬಸವರಾಜ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 'ನಾಲ್ಕು ದಿನ ಕಾಯಿರಿ. ಯಾರು ಗಂಡಸರು, ಯಾರು ಷಂಡರು ಎಂದು ನಿಮಗೇ ತಿಳಿಯುತ್ತದೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿದ ಸಂಸದ ಬಸವರಾಜು ಅವರು ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಈಶ್ವರಪ್ಪನಿಗೆ ಇಲ್ಲ. ಅದೇನಿದ್ದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ಬಿಟ್ಟ ವಿಷ್ಯಾ' ಎಂದು ಈಶ್ವರಪ್ಪನವರ ಶಕ್ತಿ-ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.












Click it and Unblock the Notifications