ತಾಕತ್ತಿದ್ರೆ ಯಡಿಯೂರಪ್ಪಗೆ ನೋಟಿಸ್ ಕೊಡ್ರಿ

Dhanjay kumar
ಬೆಂಗಳೂರು, ನ.11: ಕರ್ನಾಟಕ ಜನತಾ ಪಕ್ಷದ ಹಂಗಾಮಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು ಬಿಜೆಪಿ ವರಿಷ್ಠರಿಗೆ ಭಾನುವಾರ(ನ.11) ಸಕತ್ ಚಾಲೆಂಜ್ ಹಾಕಿದ್ದಾರೆ. ಬಿಜೆಪಿ ಹೈಕಮಾಂಡ್ ಗೆ ತಾಕತ್ತಿದ್ದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪಕ್ಷ ವಿರೋಧಿ ಎಂದು ನೋಟಿಸ್ ಜಾರಿ, ಪಕ್ಷದಿಂದ ಹೊರಹಾಕಿ ಎಂದು ಧನಂಜಯ್ ಕುಮಾರ್ ಸವಾಲು ಎಸೆದಿದ್ದಾರೆ.

ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ಮೊದಲ ಬಾರಿ ಕೆಜೆಪಿ ಮುಖಂಡರ ಸಭೆ ನಡೆಸಿದ ಧನಂಜಯ್ ಕುಮಾರ್ ಅವರು ಈ ರೀತಿ ಸವಾಲು ಹಾಕಿದರು.

ಯಡಿಯೂರಪ್ಪ ಅವರು ಪಕ್ಷ ತೊರೆಯುವುದು ಖಾತ್ರಿಯಾಗುತ್ತಿದ್ದಂತೆ ಬಿಜೆಪಿ ನಾಯಕರು ಬಿಎಸ್ ವೈ ಅವರ ಕೈಕಾಲು ಹಿಡಿದು ಕೊಂಡು ಬೇಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ಮನ ನೊಂದಿದೆ. ಅವರು ಮತ್ತೆ ಹಿಂತಿರುಗಿ ನೋಡುವುದಿಲ್ಲ ಎಂದು ಧನಂಜಯ್ ಕುಮಾರ್ ಹೇಳಿದರು.

ಯಡಿಯೂರಪ್ಪ ಅವರನ್ನು ಕಿತ್ತೊಗೆಯುವ ಧೈರ್ಯ ಬಿಜೆಪಿಗೆ ಇಲ್ಲ. ಹೀಗಾಗಿ ಒಬ್ಬೊಬ್ಬರಾಗಿ ಸಂಧಾನ ನಡೆಸುತ್ತಲೇ ಇದ್ದಾರೆ. ಆದರೆ, ಇದೆಲ್ಲವೂ ವಿಫಲವಾಗುತ್ತದೆ. ಕೆಜೆಪಿ ಕಟ್ಟುವುದು ಖಾತ್ರಿಯಾಗಿದೆ. ಆದರೂ ಬಿಜೆಪಿ ಅವರು ಯಡಿಯೂರಪ್ಪ ಅವರ ಹಿಂದೆ ಬಿದ್ದಿರುವುದು ನಗು ತರಿಸುತ್ತದೆ ಎಂದರು.

ಮೈಸೂರು ಉಸ್ತುವಾರಿ ಸಚಿವ ರಾಮದಾಸ್ ಅವರು ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಕಾಲು ಹಿಡಿದು ಗೋಗೆರದು ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಈಗ ಅವರ ವಿರುದ್ಧವೇ ದನಿ ಎತ್ತುತ್ತಿದ್ದಾರೆ. ರಾಮದಾಸ್ ಗೆ ಕೇಡುಗಾಲ ಬಂದಿದೆ. ಮುಂದಿನ ಚುನಾವಣೆಯಲ್ಲಿ ಮೈಸೂರು ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಧನಂಜಯ್ ಹೇಳಿದರು.

ಯಡಿಯೂರಪ್ಪ ಬೆಂಬಲಿಗರ ವಿರುದ್ದ ಬಿಜೆಪಿ ಕ್ರಮ ಕೈಗೊಂಡರೆ ಸರ್ಕಾರ ಆತ್ಮಹತ್ಯೆ ಮಾಡಿಕೊಂಡಂತೆ. ಹಾವೇರಿಯಲ್ಲಿ ಡಿ.9 ರಂದು ನಡೆಯುವ ಸಮಾರಂಭಕ್ಕೆ ಬಿಜೆಪಿ ಸರ್ಕಾರದ ಸುಮಾರು 45 ಶಾಸಕರು, ಸಚಿವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾವು ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಧನಂಜಯ್ ಕುಮಾರ್ ತಿಳಿಸಿದರು.

ಡಿವಿ ಸದಾನಂದ ಗೌಡ ಉಂಡಮನೆಗೆ ದ್ರೋಹ ಬಗೆದ ವ್ಯಕ್ತಿ. ಅವರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಧನಂಜಯ್ ಕುಮಾರ್ ಸುಮ್ಮನಾದರು. ಧನಂಜಯ್ ಕುಮಾರ್ ಅವರು ಸೆಕೆಂಡ್ ಹ್ಯಾಂಡ್ ರಾಜಕಾರಣಿ ಎಂದು ಸದಾನಂದ ಗೌಡ ಲೇವಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಅನವಶ್ಯಕವಾಗಿ ಜೈಲಿಗೆ ಕಳುಹಿಸಿದರು ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ' ಎಂದು ಯಡಿಯೂರಪ್ಪ ಅವರು ಗುಬ್ಬಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದಾಗ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+