ಹೀನಾ-ಬಿಲಾವಲ್ ಪ್ರಣಯ: ಕೊನೆಗೂ ಸಂಪಾದಕ ಸೆರೆ

pak-hina-rabbani-love-editor-salahuddin-chowdhury-held
ಢಾಕಾ,ನ.10: ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಮತ್ತು ಪಾಕ್ ಅಧ್ಯಕ್ಷ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ನಡುವಣ ಲವ್ ಅಫೇರ್ ಬಗ್ಗೆ ಪುಂಖಾನುಪುಂಖವಾಗಿ ಬರೆದು ಸುದ್ದಿಯಾಗಿದ್ದ ಬಾಂಗ್ಲಾ ವಾರಪತ್ರಿಕೆ Blitz ಸಂಪಾದಕನನ್ನು ಕೊನೆಗೂ ಬಂಧಿಸಲಾಗಿದೆ.

ಪಾಕ್ ಅಧ್ಯಕ್ಷ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಜತೆಗಿನ external affairs ಜಗಜ್ಜಾಹೀರಾಗಿದೆ. ಅದರ ವಿರುದ್ಧ ಫತ್ವಾ ಹೊರಡಿಸಲು ಕರ್ಮಠ ಮನಸ್ಸಿನ ಇಸ್ಲಾಮಿಕ್ ಸಂಘಟನೆಗಳು ಆಲೋಚಿಸುತ್ತಿವೆ ಎಂದೂ ಎಂದು ಬಾಂಗ್ಲಾ ವಾರಪತ್ರಿಕೆ ವರದಿ ಮಾಡಿತ್ತು. ಇದೇ ಸುದ್ದಿ ಇಡೀ ಜಗತ್ತಿನ ಮಾಧ್ಯಮಗಳಿಗೆ ಆಹಾರವಾಗಿತ್ತು.

ಸಚಿವೆ ಹೀನಾ ರಬ್ಬಾನಿ ಬಾಂಗ್ಲಾ ಪ್ರವಾಸಕ್ಕೂ ಮುನ್ನ:
ಹಣಕಾಸು ದುರ್ವವ್ಯವಹಾರದ ಆರೋಪ ಹೊರಿಸಿ, Blitz ಸಂಪಾದಕನನ್ನು ಜೈಲಿಗಟ್ಟಲಾಗಿದೆ ಎಂದು ಬಾಂಗ್ಲಾ ಮಾಧ್ಯಮಗಳು ಇಂದು ವರದಿ ಮಾಡಿವೆ. ಅಂದಹಾಗೆ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಪ್ರಸ್ತುತ ಬಾಂಗ್ಲಾ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಅವರು ಬಾಂಗ್ಲಾ ತಲುಪುವುದಕ್ಕೂ ಮುನ್ನ ಸಂಪಾದಕ ಸಲಾಹುದ್ದೀನ್ ಶೋಯೆಬ್ ನನ್ನು ಬಂಧಿಸಲಾಗಿದೆ.

ಹಣಕಾಸು ವಂಚನೆಯ ಆರೋಪದ ಮೇಲೆ ಕೋರ್ಟ್ ನಿರ್ದೇಶನದಂತೆ ವಿವಾದಿತ ಸಂಪಾದಕ ಸಲಾಹುದ್ದೀನ್ ಶೋಯೆಬ್ ಚೌಧರಿಯನ್ನು 2 ದಿನಗಳ ಹಿಂದೆಯೇ ಬಂಧಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮಸೂದೂರ್ ರಹಮಾನ್ ತಿಳಿಸಿದ್ದಾರೆ. ಸಾಜದ್ ಹುಸೇನ್ ಎಂಬ ಉದ್ಯಮಿಯು ಸಂಪಾದಕ ಸಲಾಹುದ್ದೀನ್ ಶೋಯೆಬ್ ತನಗೆ ಹಣಕಾಸು ವಂಚನೆ (6.7 ದಶಲಕ್ಷ ಟಾಕಾ ಹಣ) ಮಾಡಿದ್ದಾನೆ ಎಂದು ದೂರಿದ್ದರು.

ಗಮನಾರ್ಹವೆಂದರೆ ವಿವಾದಿತ ಸಂಪಾದಕ ಸಲಾಹುದ್ದೀನ್ ಶೋಯೆಬ್ ನನ್ನು 2003ರಲ್ಲಿಯೂ ಬಂಧಿಸಲಾಗಿತ್ತು. ಬಾಂಗ್ಲಾ ಮತ್ತು ಇಸ್ರೇಲ್ ನಡುವೆ ಯಾವುದೇ ರಾಜತಾಂತ್ರಿಕ ಬಾಂಧವ್ಯ ಇಲ್ಲ. ಆದರೆ ಸದರಿ ಸಂಪಾದಕ ಇಸ್ರೇಲ್ ಜತೆ ಕೈಜೋಡಿಸಿ, ಬೇಹುಗಾರಿಕೆಯಲ್ಲಿ ತೊಡಗಿದ್ದ ಎಂದು ಆಗ ಆರೋಪಿಸಲಾಗಿತ್ತು. 2 ತಿಂಗಳ ಹಿಂದೆ ಸಚಿವೆ ಹೀನಾ ರಬ್ಬಾನಿ ಮತ್ತು ಬಿಲಾವಲ್ ಭುಟ್ಟೋ ನಡುವೆ 'ಎಕ್ಸಟರ್ನಲ್ ಅಫೇರ್ಸ್' ಚಾಲ್ತಿಯಲ್ಲಿದೆ ಎಂದು ಸುಖಾಸುಮ್ಮನೆ ಬರೆದು ವಿವಾದಕ್ಕೀಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+