ಕಾಲ್ ಸೆಂಟರ್ ಉದ್ಯೋಗಿ ನದಿಗೆ ಹಾರಿ ಆತ್ಮಹತ್ಯೆ
ಮುಲ್ಕಿ,
ನ.10: ಕಾಲ್ ಸೆಂಟರ್ ಒಂದರಲ್ಲಿ ಉದ್ಯೋಗಿಯಾಗಿದ್ದ 24 ವರ್ಷದ ಯುವಕನೊಬ್ಬ ಶುಕ್ರವಾರ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಕಡವಿನ ಬಾಗಿಲು ನಿವಾಸಿ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. id="toptextpromo">ಬುಧವಾರ
ಕೆಲಸ ಮುಗಿಸಿಕೊಂಡು ವಾಪಸಾಗಿದ್ದ ವಿನೋದ್, ಮನೆಗೆ ಹಿಂದಿರುಗಿರಲಿಲ್ಲ. ತೀವ್ರ ಹುಡುಕಾಟದ ಬಳಿಕ Athikaari Bettu ಗ್ರಾಮದ ಪಲಿಮಾರು ಸೇತುವೆ ಬಳಿ ವಿನೋದ್ ಶವ ಪತ್ತೆಯಾಗಿತ್ತು. ನದಿ ಪಕ್ಕ ಮೃತ ವಿನೋದನ ಬೈಕ್ ಸಹ ಬಿದ್ದಿತ್ತು. ವಿನೋದ್, ಕೆಲವು ದಿನಗಳಿಂದ ಕೆಲಸಕ್ಕೆ ಚಕ್ಕರ್ ಹೊಡೆಯುತ್ತಿದ್ದ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಲ್ಕಿ
ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಪರೀಕ್ಷೆಯ ಬಳಿಕ ದೇಹವನ್ನು ಮೃತನ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ವಿನೋದ್ ಯಾವುದೇ ಮರಣ ಪತ್ರ ಬರೆದಿಟ್ಟಿಲ್ಲ. ಆತನ ಆತ್ಮಹತ್ಯೆಗೆ ಕಾರಣ ಏನೆಂಬುದು ಸದ್ಯಕ್ಕೆ ಯಿಳಿದುಬಂದಿಲ್ಲ.











Click it and Unblock the Notifications