ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನ ಬಂಧನ, ಭುಗಿಲೆದ್ದ ಆಕ್ರೋಶ

By Srinath
|
Google Oneindia Kannada News

ಮಂಗಳೂರು, ನ.9: ಪತ್ರಕರ್ತ ನವೀನ್ ಸೂರಿಂಜೆ ಬಂಧನ ವಿರೋಧಿಸಿ ರಾಜ್ಯಾದ್ಯಂತ ಪಕ್ಷಾತೀತವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಸರಕಾರ ತಕ್ಷಣ ಎಚ್ಚೆತ್ತು ಪತ್ರಕರ್ತ ನವೀನ್‌ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯ ಮಾತುಗಳು ಪ್ರತಿಧ್ವನಿಸಿವೆ.

ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಜುಲೈ 28ರಂದು ನಡೆದ ದಾಳಿ ಸಂಬಂಧ ಕಸ್ತೂರಿ ನ್ಯೂಸ್ 24/7 ಚಾನೆಲಿನ ವರದಿಗಾರ ನವೀನ್ ಸೂರಿಂಜೆ ಅವರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಲು ಹೊಟಿರುವುದಲ್ಲದೆ, ಪೊಲೀಸರ ಕೈಗೆ ರಾಜ್ಯವನ್ನು ಕೊಟ್ಟಿದೆ. ಪೊಲೀಸರ ವರ್ತನೆ ನಾಚಿಕೆಗೇಡು ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

homestay-attack-journo-naveen-held-protests-intensify
ಜಿಲ್ಲೆ/ತಾಲೂಕುಗಳಲ್ಲಿ ಪ್ರತಿಭಟನೆ:
ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಆಯಾ ಜಿಲ್ಲಾ/ ತಾಲೂಕು ಕಚೇರಿಗಳ ಮುಂದೆ ಸ್ಥಳೀಯ ಪತ್ರಕರ್ತರ ಸಂಘದ ಸದಸ್ಯರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ಎಸ್‌ಡಿಪಿಐ ಸಹಿತ ಹಲವು ರಾಜಕೀಯ ಪಕ್ಷಗಳು ಹಾಗೂ ಇನ್ನೂ ಹಲವಾರು ಸಂಘಟನೆಗಳು ಈ ಬಂಧನವನ್ನು ಖಂಡಿಸಿವೆ.

ಪತ್ರಕರ್ತ ತನ್ನ ಸ್ವಂತ ಲಾಭಕ್ಕಾಗಿ ವರದಿ ಮಾಡುವುದಿಲ್ಲ. ಬಜರಂಗ ದಳದವರು ಹೋಂ ಸ್ಟೇ ಮೇಲೆ ದಾಳಿ ಮಾಡಿರುವುದನ್ನು ವರದಿ ಮಾಡಿರುವುದೇ ತಪ್ಪು ಎನ್ನುವುದಾದರೆ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವುದಾದರೂ ಹೇಗೆ ಎಂಬುದು ಪತ್ರಕರ್ತರ ಪ್ರಶ್ನೆಯಾಗಿದೆ.

ಹೋಂ ಸ್ಟೇ ದಾಳಿಯ ವರದಿ ಮಾಡಿದ ಪತ್ರಕರ್ತ ಪೊಲೀಸರಿಗೆ ವಿಷಯ ಮುಟ್ಟಿಸಿಲ್ಲ ಎಂದು ಆರೋಪದ ಮೇಲೆ ದಾಳಿಕೋರರ ಜೊತೆ ಅಪರಾಧಿ ಸ್ಥಾನದಲ್ಲಿ ಪತ್ರಕರ್ತರನ್ನು ನಿಲ್ಲಿಸುವುದು ನ್ಯಾಯ ಸಮ್ಮತವಲ್ಲ ಎಂದು ಪತ್ರಕರ್ತ ನವೀನ್ ಸೂರಿಂಜೆ ಹಾಗೂ ಇನ್ನೊಬ್ಬ ಪತ್ರಕರ್ತನನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿರುವ ಪೊಲೀಸರ ಕ್ರಮವನ್ನು ಪತ್ರಕರ್ತರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಆರೆಸ್ಸೆಸ್ ಮತ್ತು ಬಿಜೆಪಿ ಒತ್ತಡಕ್ಕೆ ಮಣಿದು ಪೊಲೀಸರು ಪತ್ರಕರ್ತರನ್ನು ಬಂಧಿಸಿರುವುದು ಸರಿಯಲ್ಲ. ಇದು ಬಿಜೆಪಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವಿಗೆ ಸ್ಪಷ್ಟ ಸೂಚನೆ ಎಂದು ಪತ್ರಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

'ಒಂದು ವೇಳೆ ನವೀನ್ ಈ ದಾಳಿ ಘಟನೆಗೆ ಸಾಕ್ಷಿಯಾಗಿರದಿರುತ್ತಿದ್ದರೆ ಇಡೀ ಪ್ರಕರಣವೇ ಮುಚ್ಚಿ ಹೋಗಿಬಿಡುತ್ತಿತ್ತು. ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರೇ ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದರು. ಈ ದಾಳಿ ಕೃತ್ಯ ಜಗತ್ತಿಗೆ ತೆರೆದುಕೊಂಡಿದ್ದರಿಂದಲೇ ಕೆಲವು ಆರೋಪಿಗಳು ಬಂಧನಕ್ಕೆ ಒಳಗಾಗುವಂತಾಯಿತು.
ಮಾಧ್ಯಮದವರು ಇದೇ ರೀತಿ ವರದಿ ಮಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ನವೀನ್ ಅವರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಕಾರ್ಯ ಕೈಗೊಂಡಿದೆ' ಎಂದು ರಾಜಕೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

English summary
Mangalore Homestay attack TV Journo Naveen Soorinje was arrested by the Kankanady police inspector Ravish Nayak on November 7. As such protests across the Karnataka state intensify.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X