ಮಂಗಳೂರು ಹೋಂಸ್ಟೇ ದಾಳಿ: ಟಿವಿ ಪತ್ರಕರ್ತನ ಸೆರೆ

ಪ್ರಕರಣದ ಸಂಬಂಧ ದಾಖಲಾಗಿರುವ ಎಫ್ಐಆರ್ ನಲ್ಲಿ ಈತನ ಹೆಸರೂ ಕಾಣಿಸಿಕೊಂಡಿತ್ತು. ಸುಳ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಂಗಳೂರಿಗೆ ಹಿಂದಿರುಗುತ್ತಿದ್ದ ಸಂದರ್ಭ ಪಡೀಲ್ ಬಳಿ ವರದಿಗಾರ ನವೀನ್ ಅವರ ಕಾರನ್ನು ತಡೆದು ನ.7ರಂದು ರಾತ್ರಿ 10 ಗಂಟೆಯಲ್ಲಿ ಕಂಕನಾಡಿ ಪೊಲೀಸರು ಆತನನ್ನು ಬಂಧಿಸಿದರು.
ಪೊಲೀಸ್ ಇನ್ಸ್ ಪೆಕ್ಟರ್ ರವೀಶ್ ನಾಯಕ್ ಅವರು ವರದಿಗಾರ ನವೀನ್ ಸೂರಿಂಜೆ ಅವರನ್ನು ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರೆದುರು ಹಾಜರುಪಡಿಸಲಾಗಿ, ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದರು.
ಸುಳ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಜೆಡಿಎಸ್ ಕಾರ್ಯಕ್ರಮದ ವರದಿಗಾಗಿ ನವೀನ್ ಸೂರಿಂಜೆ ತೆರಳಿದ್ದರು. ಅವರ ಸಂಗಡ ಇನ್ನೂ ನಾಲ್ಕು ಮಾಧ್ಯಮ ಮಿತ್ರರು ಇದ್ದರು.
ಕಳೆದ ಜುಲೈ 28ರಂದು ಮೋರ್ನಿಂಗ್ ಮಿಸ್ಟ್ ಹೋಂಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವತಿಯರ ಮೇಲೆ ದಾಳಿ ನಡೆದ ಸಂದರ್ಭ ಸ್ಥಳದಲ್ಲಿದ್ದ ನವೀನ್ ತಮಗೆ ಸಕಾಲದಲ್ಲಿ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಅವರ ಮೇಲೆ ಕೇಸು ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಇದುವರೆಗೂ ಒಟ್ಟು 29 ಮಂದಿಯ ಬಂಧನವಾಗಿದೆ. ಯಾರೊಬ್ಬರಿಗೂ ಇದುವರೆಗೆ ಜಾಮೀನು ಸಿಕ್ಕಿಲ್ಲ.












Click it and Unblock the Notifications