ಕುಮಾರನ ಸಾರಥ್ಯದಲ್ಲೆ ಮುಂದಿನ ಚುನಾವಣೆ: ದೊಡ್ಡಗೌಡ್ರು

'ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಸಾರಥ್ಯದಲ್ಲೆ ಜೆಡಿಎಸ್ ಮುಂಬರುವ ಚುನಾವಣೆ ಎದುರಿಸಲಿದೆ' ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಆದರೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಮ್ಮ ಪುತ್ರ ಕುಮಾರಸ್ವಾಮಿಗೆ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ನೇತೃತ್ವ ಚುನಾವಣೆ ಎದುರಿಸಲಷ್ಟೇ. ಚುನಾವಣೆಯ ನಂತರ ಅಧಿಕಾರ ಗಳಿಸಲು ಅಗತ್ಯ ಬಲ ಬಂದರೆ ಶಾಸಕರೇ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುತ್ತಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಅಧಿಕಾರ ನೋಡಿದ್ದಾರೆ. ಈ ಎರಡು ಪಕ್ಷಗಳ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಆದ್ದರಿಂದ 'ಈ ಬಾರಿ ಜೆಡಿಎಸ್' ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.
ಕುಮಾರಸ್ವಾಮಿಗೆ ಏಕೆ?: ಬಿಜೆಪಿ ಬೆಂಬಲದೊಂದಿಗೆ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಗೆ ಮೂರೇ ತಿಂಗಳಲ್ಲಿ 150 ಕೋಟಿ ರೂ. ಭ್ರಷ್ಟಾಚಾರದ ಉಡುಗೊರೆ ಕೊಟ್ಟರು. ಆ ಶಿಕ್ಷೆಯನ್ನು ಸಹಿಸಿಕೊಂಡು ಕುಮಾರ ನೀಡಿದ ಜನಪರ ಆಡಳಿತವು ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.
ಕುಮಾರಸ್ವಾಮಿ ಅವರ ಶ್ರಮ ಮತ್ತು ಸಂಘಟನೆಯ ಶಕ್ತಿ ಬಗ್ಗೆ ಪಕ್ಷದ ಮುಖಂಡರಿಗೆ ವಿಶ್ವಾಸವಿದೆ. ಹಾಗಾಗಿ ಮುಂಬರುವ ಚುನಾವಣೆಯನ್ನು ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ಎದುರಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು' ಎಂದು ಅವರು ವಿವರಣೆ ನೀಡಿದ್ದಾರೆ.












Click it and Unblock the Notifications