ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಪುನರಾಯ್ಕೆ: ಔಟ್ ಸೋರ್ಸಿಂಗ್ ಗತಿಯೇನು?

By Srinath
|
Google Oneindia Kannada News

obama-wins-question-mark-over-india-outsourcing-issue
ಬೆಂಗಳೂರು, ನ.7: ಬರಾಕ್ ಒಬಾಮಾ ಅವರೇನೋ ಎರಡನೆಯ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಆದರೆ ಭಾರತೀಯ ಐಟಿ ಕಂಪನಿಗಳ outsourcing ವಿಷಯ ಏನಾಯ್ತು? ಇದರಿಂದ ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಒಬಾಮಾ ಕಂಟಕರಾಗಬಹುದಾ ಎಂಬ ಆತಂಕ ಈಗ ಹೆಚ್ಚಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವುದನ್ನು ಸ್ವಾಗತಿಸಿದೆ. ಹಾಗಂತ ಇದೇನೂ ಔಪಚಾರಿಕ ಶಿಷ್ಟಾಚಾರದಂತೆ ಕಾಣುತ್ತಿಲ್ಲ. ಬದಲಿಗೆ ನಿಜಕ್ಕೂ ಒಬಾಮಾ ಪುನರಾಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

ಎರಡು ಬಲಿಷ್ಠ ಆರ್ಥ ವ್ಯವಸ್ಥೆಗಳ ನಡುವೆ ಕೆಲವು ಆತಂಕದ ವಿಚಾರಗಳು ನುಸುಳುವುದು ಸಹಜ. ಆದರೆ ಮರು ಆಯ್ಕೆಯಾಗಿರುವುದರಿಂದ ಒಬಾಮಾ ಅವರು ನೆಮ್ಮದಿಯಿಂದ ದೂರದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಇದು ಭಾರತದ ಐಟಿ ಪರವಾಗಲಿದೆ ಎಂಬ ಆಶಯ/ಭರವಸೆ ಇದೆ ಎಂದು ಗೋದ್ರೇಜ್ ಗ್ರೂಪ್ ಅಧ್ಯಕ್ಷ ಆದಿ ಗೋದ್ರೇಜ್ ಅಭಿಪ್ರಾಯಪಟ್ಟಿದ್ದಾರೆ.

ಭಾರ್ತಿ ಗ್ರೂಪ್ ಅಧ್ಯಕ್ಷ ಸುನಿಲ್ ಭಾರ್ತಿ ಅವರದ್ದೂ ಇದೇ ಆಶಾಭಾವ. 'ಒಬಾಮಾ ಗೆಲುವು ಮತ್ತು ಭಾರತದ ಔಟ್ ಸೋರ್ಸಿಂಗ್ ಭವಿಷ್ಯ ಏನಾಗಲಿದೆ ಎನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆದಿವೆ. ಆದರೆ ಅವರು ಪುನರಾಯ್ಕೆ ಆಗಿರುವುದರಿಂದ ಅದಕ್ಕೊಂದು ಸ್ಪಷ್ಟ ರೂಪ ಸಿಗುವುದು ನಿಶ್ಚಿತ. ಈ ಹಿಂದೆ ಬಿಲ್ ಕ್ಲಿಂಟನ್ ವಿಷಯದಲ್ಲೂ ಇಂತಹುದೇ ಆತಂಕ ವ್ಯಕ್ತವಾಗಿತ್ತು. ಆದರೆ ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳ outsourcing ಅಬಾಧಿತವಾಗಿ ನಡೆಯಿತು. ಆದ್ದರಿಂದ ಈ ಬಾರಿಯೂ ಅಷ್ಟೇ...' ಎಂದು ಸುನಿಲ್ ಆಶಿಸಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಬರಾಕ್ ಒಬಾಮಾ ಭಾರತಕ್ಕೆ outsourcing ಕೆಲಸ ಒಪ್ಪಿಸುವುದಕ್ಕೆ ಹಿಂದೇಟು ಹಾಕಿದ್ದರು. ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸುವುದನ್ನು ಬಿಟ್ಟು ವಿದೇಶಗಳಿಗೆ ಏಕೆ ಮಣೆ ಹಾಕಬೇಕು ಎಂದು ಒಬಾಮಾ ಗುಡುಗಿದ್ದರು.

ಗಮನಾರ್ಹವೆಂದರೆ ಭಾರತೀಯ ಐಟಿ ಉದ್ಯಮದ (outsourcing) ಶೇ. 80ರಷ್ಟು ಆದಾಯ ಬರುತ್ತಿರುವುದು ಅಮೆರಿಕ ಮತ್ತು ಯುರೋಪ್ ದೇಶಗಳಿಂದಲೇ.

ಕೊನೆಯ ಮಾತು: ಅಯ್ಯೋ ಅದೊಂದು ಚುನಾವಣೆ ಗಿಮಿಕ್ ಅಷ್ಟೆ. ಆ ವೇಳೆ, ಒಬಾಮಾಗೆ ಹಾಗೆ ಮಾತನಾಡುವುದು ಅನಿವಾರ್ಯವಾಗಿತ್ತು. ಈಗ ಚುನಾವಣೆ ಮುಗಿದಿದೆ. ಫಲಿತಾಂಶವೂ ಹೊರಬಿದ್ದಿದೆ. ಇನ್ನೇನಿದ್ದರೂ ಎಂದಿನಂತೆ/ಹಿಂದಿನಂತೆ ಐಟಿ ಕೆಲಸಗಳು ಅಬಾಧಿತವಾಗಿ ಮುನ್ನಡೆಯಲಿದೆ ಎಂದು ವಾಸ್ತವಕ್ಕೆ ಕನ್ನಡಿ ಹಿಡಿದವರು ಟೆಕ್ಕಿ ರಮೇಶ್.

English summary
Barack Obama wins Presidential elections question mark over india outsourcing issue. Leaders of India Inc on Wednesday welcomed the re-election of Barack Obama as the U.S. President saying that continuity will be good for bilateral relations, but some of them expressed concerns over the outsourcing issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X