ಡಿ.10ಕ್ಕೆ ಮಹೂರ್ತ ನಿಗದಿ-ಬಿಎಸ್‌ವೈ ಮರು ಮರುಸ್ಪಷ್ಟನೆ

ಇತ್ತ ಯಡಿಯೂರಪ್ಪನವರು ಹೀಗೆ ಹೇಳಿದ್ದನ್ನು ಕೇಳಿಸಿಕೊಂಡ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು 'ಯಡಿಯೂರಪ್ಪ ಪಕ್ಷ ಬಿಡುವ ಬಗ್ಗೆ ಮತ್ತೆ ಮತ್ತೆ ಕೇಳಬೇಡಿ. ಅವರು ಎಲ್ಲೂ ಹೋಗೊಲ್ಲ. ಪಕ್ಷ ಬಿಡ್ತಾರೆ ಎಂದು ಭಾವಿಸುವುದು ದೊಡ್ಡ ಜೋಕ್' ಎಂದು ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಇನ್ನೇನು ಹೇಳಿದರು:
* ತಮ್ಮ ನಿವಾಸದಲ್ಲಿ ಬೆಂಬಲಿಗ ಸಚಿವರು, ಶಾಸಕರು ಹಾಗೂ ಸಂಸದರ ಸಭೆಯನ್ನು ಖುದ್ದಾಗಿ ನಾನು ಕರೆದಿಲ್ಲ. ಅವರಾಗಿಯೇ ಸುಮ್ಮನೆ ಬರುತ್ತಿದ್ದಾರೆ ಅಷ್ಟೇ. ಅದಕ್ಕಾಗಿ ಇಂದು ಮಧ್ಯಾಹ್ನ 2.30ಕ್ಕೆ ಎಲ್ಲರೂ ಡಾಲರ್ಸ್ ಕಾಲನಿಯಲ್ಲಿ ಸೇರುತ್ತಿದ್ದೇವೆ.
* ಯಾವುದೇ ಸಚಿವರು, ಶಾಸಕರು ಅಥವಾ ಸಂಸದರು ನನ್ನನ್ನು ಬೆಂಬಲಿಸಿ ರಾಜೀನಾಮೆ ನೀಡುವುದಿಲ್ಲ. ಇದರಿಂದ ಜಗದೀಶ್ ಶೆಟ್ಟರ್ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ.
* ಪಕ್ಷದ ವರಿಷ್ಠ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗುವ ಪ್ರಶ್ನೆಯೇ ಇಲ್ಲ.












Click it and Unblock the Notifications