700 ಟನ್ ಚಿನ್ನ ಅದಿರು ಇದ್ದ ಹಡಗು ನಾಪತ್ತೆ

ಕಿರಣ್ ಎಂಬ ಬಂದರಿನಿಂದ ಓಖೋಟ್ಸಕ್ ತೀರಕ್ಕೆ 700 ಟನ್ ಚಿನ್ನದ ಅದಿರನ್ನು ಸಾಗಿಸುತ್ತಿದ್ದ ಅಮೂರ್ಸ್ ಕಾಯ ಹಡಗು ಸಮುದ್ರದಿಂದ ನಿಗೂಢವಾಗಿ ಕಣ್ಮರೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 9 ಜನ ನಾವಿಕರು ಸೇರಿದಂತೆ ಒಟ್ಟು 11 ಜನರನ್ನು ಹೊಂದಿದ್ದ ಹಡಗಿನ ಚಲನವಲನದ ಬಗ್ಗೆ ಸುಳಿವು ಕೂಡಾ ಸಿಗದಂತೆ ಸಿನಿಮೀಯ ರೀತಿಯಲ್ಲಿ ಮಾಯವಾಗಿದೆ.
ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಅದಿರನ್ನು ಹೊತ್ತು ತರುತ್ತಿದ್ದ ಹಡಗು ಶಾಂತಾರ್ ದ್ವೀಪದ ಸಮೀಪದಲ್ಲಿ ನಾಪತ್ತೆಯಾಗಿದೆ.
ಅಧಿಕಾರಿಗಳು ವೈಮಾನಿಕ ತಪಾಸಣೆ ಮುಂದುವರೆಸಿದ್ದಾರೆ. ಕಡಲ್ಗಳ್ಳರು ಹಡಗನ್ನು ಅಪಹರಿಸುವ ಸಾಧ್ಯತೆ ಹೆಚ್ಚಾಗಿದೆ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಹಡಗು ಮುಳುಗಡೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಾಂತಾರ್ ದ್ವೀಪದಲ್ಲಿ ಹವಾಮಾನ ವೈಪರೀತ್ಯ ವಿಪರೀತವಾಗಿರುವ ಕಾರಣ ವೈಮಾನಿಕ ತಪಾಸಣೆ ಕೂಡಾ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಪತ್ತೆಯಾಗಿದ್ದ 750 ಮೆಟ್ರಿಕ್ ಟನ್ ಬಂಗಾರದ ಅದಿರು ತುಂಬಿದ್ದ ಅಮುರ್‌ಸ್ಕಾಯಾ ಸರಕು ಸಾಗಣೆ ಹಡಗಿನ ಮಾಲೀಕನನ್ನು ಬಂಧಿಸಲಾಗಿದೆ ಎಂದು ರಷ್ಯಾದ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅ.28ರಂದು ಒಖೊಟ್ಸ್ ಸಮುದ್ರದ ಶಾಂತಾರ್ ದ್ವೀಪದ ಬಳಿ ಅಪಾಯದ ಎಚ್ಚರಿಕೆ ದೀಪ ಬೆಳಗಿದ ನಂತರ ಹಡಗು ನಾಪತ್ತೆಯಾಗಿತ್ತು. ವಾತಾವರಣ ಸೂಕ್ತವಿಲ್ಲದ ಸಮಯದಲ್ಲಿ ನಡೆಸಿದ ರಕ್ಷಣಾ ಕಾರ್ಯದ ನಂತರ ಸಮುದ್ರ ತೀರದ ಬಳಿ ಹಡಗಿನ ಭಾಗವೊಂದು ಪತ್ತೆಯಾಗಿದ್ದು ಇದನ್ನು ನಾಪತ್ತೆಯಾಗಿರುವ ಹಡಗಿನ ಭಾಗವೆಂದು ನಂಬಲಾಗಿದೆ.
ಬಂಗಾರದ ಗಟ್ಟಿಯನ್ನು ಕಿರನ್ ಸಮುದ್ರದ ಬಂದರಿನಿಂದ ಒಖೊಟ್ಸ್ ಸಮುದ್ರದ ಬಂದರಿಗೆ ಸಾಗಿಸಲಾಗುತ್ತಿತ್ತು. ತಾಂತ್ರಿಕ ದೋಷ ಹೊಂದಿದ್ದ ಹಡಗು
ಚಂಡಮಾರುತದ ವಾತಾವರವಣವನ್ನು ಗಣನೆಗೆ ತೆಗೆದುಕೊಳ್ಳದೇ ಹಾಗೂ ಅನುಮತಿ ಪಡೆಯದೇ ಸಮುದ್ರಯಾನ ಪ್ರಾರಂಭಿಸಿದ್ದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ಹಡಗಿನಲ್ಲಿದ್ದ ಜನರ ಸಾವಿಗೆ ಕಾರಣನಾಗಿರಬಹುದೆಂದು ಶಿಲ್‌ಟ್ಸಿನ್‌ನನ್ನು ಶಂಕಿಸಲಾಗಿದ್ದು, ಅಪರಾಧ ಸಾಬೀತಾದಲ್ಲಿ ಏಳು
ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಹಡಗಿನಲ್ಲಿದ್ದ ಸುಮಾರು 750 ಟನ್ ಬಂಗಾರದ ಅದಿರಿನ ಮೊತ್ತ 1 ಕೋಟಿ 21 ಲಕ್ಷ ರು ಮೌಲ್ಯ ಎಂದು ತಜ್ಞರು ಅಂದಾಜಿಸಿದ್ದಾರೆ. ಖಬೊರ್‌ವಸ್ಕ್ ಪ್ರದೇಶದ ಪೂರ್ವ ಹಾಗೂ ಜಪಾನ್‌ನ ಹೊಕ್ಕೈಡೊ ದ್ವೀಪದ ಉತ್ತರಕ್ಕಿರುವ ಒಖೊಟ್ಸ್ ಸಮುದ್ರದ ಶಾಂತಾರ್ ದ್ವೀಪದ ಬಳಿ ಹಡಗು ನಾಪತ್ತೆಯಾಗಿತ್ತು.
ಭಾರಿ ಮಳೆಯ ನಡುವೆಯೇ ಹಡಗಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಸಮುದ್ರದಲ್ಲಿ ಮುಳುಗಿದ್ದ ವಸ್ತುವೊಂದು ಹಾಗೂ ಸಮುದ್ರದ ಮೇಲ್ಮೈನಲ್ಲಿ ತೈಲ ತೇಲುತ್ತಿರುವುದನ್ನು ರಕ್ಷಣಾ ಹಡಗು ಪತ್ತೆ ಮಾಡಿದೆ.
ಆದರೆ ಹವಾಮಾನ ಸೂಕ್ತವಾಗಿಲ್ಲದ ಕಾರಣ ಈಜುಗಾರರನ್ನು ಸಮುದ್ರಕ್ಕೆ ಇಳಿಸಲಾಗದ್ದರಿಂದ
ಇದು ಅಮುರ್‌ಸ್ಕಾಯಾ ಹಡಗೇ ಅಥವಾ ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications