ಭೂ ಹಗರಣ : ನಿರ್ಮಾಪಕ ಇ ಕೃಷ್ಣಪ್ಪಗೆ ಜಾಮೀನು

Producer E Krishnappa gets anticipatory bail
ಬೆಂಗಳೂರು, ನ.6: ಭೂ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 'ಮುಂಗಾರು ಮಳೆ' ನಿರ್ಮಾಪಕ ಇ. ಕೃಷ್ಣಪ್ಪ ಅವರಿಗೆ ಸೋಮವಾರ(ನ.6) ಜಾಮೀನು ಮಂಜೂರಾಗಿದೆ. ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಇ ಕೃಷ್ಣಪ್ಪಗೆ ಜಾಮೀನು ನೀಡಿದ್ದಾರೆ.

ಯಲಹಂಕದ ಬಳಿಯ ದಾಸನಪುರ ಹೋಬಳಿಯ ದೊಂಬರಹಳ್ಳಿಯಲ್ಲಿನ 5.36 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಭೂಮಾಲೀಕರಾದ ವೆಂಕಟಾಚಲಂ ಸೇರಿದಂತೆ 9 ಮಂದಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಾಗಿತ್ತು.

ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಎಂ ಎಲ್ ಸಿ ಕೂಡಾ ಆಗಿರುವ ಇ ಕೃಷ್ಣಪ್ಪ ಅವರಿಗೆ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅವರು ತನಿಖೆ ಕೈಗೊಂಡಿದ್ದರು.

ವಿವಾಪಿತ ಆರ್ ಕೆ ಎನ್ ಕ್ಲೇವ್ ಜಾಗವನ್ನು ಭೋಗ್ಯಕ್ಕಾಗಲಿ ಅಥವಾ ಮಾರಾಟ ಮಾಡುವುದಾಗಲಿ ಮಾಡಬಾರದು ಎಂಬ ಷರತ್ತಿನ ಮೇಲೆ ಎನ್ ಕೆ ಸುಧೀಂದ್ರರಾವ್ ಅವರು ಕೃಷ್ಣಪ್ಪ ಅವರಿಗೆ ಜಾಮೀನು ನೀಡಿದ್ದಾರೆ. ಕೃಷ್ಣಪ್ಪ ಅವರು ಕೋರ್ಟಿನ ಅನುಮತಿ ಇಲ್ಲದೆ ರಾಜ್ಯ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಮೇ.21 ರಂದು ಲೋಕಾಯುಕ್ತ ಕೋರ್ಟಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಸಲ್ಲಿಸಿದ್ದರು.

ಮಾ.27 ರಂದು ಕನ್ನಡ ಕಾರ್ಯಕರ್ತ ರಘು ಎಂಬುವರು ಕೃಷ್ಣಪ್ಪ ಅವರ ವಿರುದ್ಧ ಭೂ ಹಗರಣದ ಆರೋಪ ಹೊರೆಸಿ ದೂರು ಸಲ್ಲಿಸಿದ್ದರು.

ಬೆಂಗಳೂರು ಉತ್ತರ ತಾಲೂಕು ಗೌಡನಹಳ್ಳಿಯ ಗೋಮಾಳ ಭೂಮಿಯ 234 ಎಕರೆ ಜಾಗವನ್ನು ಅಕ್ರಮವಾಗಿ ಪಡೆದಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಕ್ರಮ ಡಿನೋಟಿಫಿಕೇಷನ್ ನಡೆದಿದೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಪ್ಪ ಅವರ ಜೊತೆಗೆ ಕೆಎನ್ ಪ್ರಕಾಶ್, ಮುನಿರಾಜು, ಪ್ರೇಮನಾಥ್ ರೆಡ್ಡಿ ಹಾಗೂ ವಿಜಯ್ ಕುಮಾರ್ ಅವರನ್ನು ಸಹ ಆರೋಪಿಯನ್ನಾಗಿಸಲಾಗಿತ್ತು.

ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ಮಾಹಿತಿ ನೀಡಿ 13 ಎಕರೆ ಭೂ ದಾಖಲೆಯನ್ನು ತಮ್ಮ ಪರವಾಗಿ ಮಾಡಿಕೊಂಡಿದ್ದರು. ನಂತರ ಕಡಬಗೆರೆ ಗ್ರಾಮದಲ್ಲಿ ಲೇಔಟ್ ನಿರ್ಮಾಣದಲ್ಲಿ ತೊಡಗಿದ್ದರು ಎಂಬ ಆರೋಪ ಕೃಷ್ಣಪ್ಪ ಅವರ ಮೇಲಿದೆ.

ವಿವಾದಿತ ಸದರಿ ಜಮೀನಿಗೆ ಮುದ್ದುವೀರಪ್ಪ ಮೂಲ ಮಾಲೀಕರು. ಸುಂದರಂ ಎನ್ನುವವರನ್ನು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಮಾಡಿದ್ದ ಅವರು, ಈ ಜಮೀನನ್ನು ಅಭಿವೃದ್ಧಿ ಪಡಿಸಿ ನಿವೇಶನವನ್ನಾಗಿ ಮಾಡುವಂತೆ ತಿಳಿಸಿದ್ದರು.

ಅದರಂತೆ ನಿವೇಶನ ತಯಾರಾದಾಗ, 1992ರಲ್ಲಿ ಸುಮಾರು 130 ಕುಟುಂಬಕ್ಕೆ ಅದನ್ನು ಹಂಚಿಕೆ ಮಾಡಲಾಯಿತು. ಅಲ್ಲಿ ಕೆಲವರು ಮನೆ ಕಟ್ಟಿಕೊಂಡು 10 ವರ್ಷದಿಂದ ವಾಸವಾಗಿದ್ದಾರೆ.

ಮುದ್ದುವೀರಪ್ಪ ತೀರಿಕೊಂಡ ಮೇಲೆ, ಅವರ ಪತ್ನಿ ಹಾಗೂ ಮಕ್ಕಳು ಈ ಜಮೀನನ್ನು ಮಾರಾಟ ಮಾಡಲು ತಯಾರಿ ನಡೆಸಿದರು. ಇದನ್ನು ಅಲ್ಲಿ ವಾಸವಾಗಿದ್ದವರು ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.

ಆದರೆ, 2009ರಲ್ಲಿ ಕೃಷ್ಣಪ್ಪ ಅವರು ಒತ್ತಾಯ ಪೂರ್ವಕವಾಗಿ ಈ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+