ಅಧಿಕಾರ ಪೀಠ : ವರ್ಚಸ್ಸು ಕಳಕೊಂಡ ಜನಪ್ರತಿನಿಧಿಗಳು

ವಿಶೇಷವಾಗಿ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ಸ್ಥಾನಗಳನ್ನು ಪಡೆದರೆ ಮಾತ್ರ ಅದು ಸರಳ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯ. ಆದರೆ ಕೇಂದ್ರ ಸರ್ಕಾರದ ಅಪ್ರಿಯ ನಿರ್ಣಯಗಳು, ಹಗರಣಗಳು ಅಂತ ಅವಕಾಶಕ್ಕೆ ಸಮಾಧಿ ಕಟ್ಟುವಂತೆ ಕಾಣುತ್ತಿದೆ.
ಇನ್ನು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ನೇರ ಎದುರಾಳಿ ಜೆಡಿಎಸ್. ವಿಶೇಷ ಅಂದರೆ ಈ ಬಾರಿ ಬಿಜೆಪಿ ಕೂಡ ಈ ಬಾರಿ ಕೆಲವೊಂದು ಕ್ಷೇತ್ರಗಳಲ್ಲಿ ಈ ಎರಡು ಪಕ್ಷಗಳಿಗೂ ಸವಾಲ್ ಎಸೆಯವಷ್ಟು ಪ್ರಬಲವಾಗಿದೆ.
ಜೆಡಿಎಸ್‌ನಲ್ಲೂ ಎಲ್ಲವೂ ಸರಿಯಿಲ್ಲ ಪಕ್ಷದಲ್ಲೂ ಆಂತರೀಕ ಕಿತ್ತಾಟ ನಿಧಾನವಾಗಿ ಬೆಳಕಿಗೆ ಬರುತ್ತಿದೆ. ವಿಶೇಷವಾಗಿ ಹಾಸನದ ವಿಷಯದಲ್ಲಿ ಅದು ದೊಡ್ಡದಾಗಿ ಸ್ಟೋಟಗೊಳಬಹುದಾಗಿದೆ. ಇದರಿಂದ ಜೆಡಿಎಸ್ ಕೆಲವು ಹೊಸಸ್ಥಾನಗಳನ್ನು ಪಡೆಯುವುದರ ಜೊತೆಗೆ ಕೆಲವೊಂದನ್ನು ಕಳೆದುಕೊಳ್ಳುತ್ತದೆ.
ಕರಾವಳಿ-ಮಲೆನಾಡು-ಮಂಬೈ ಕರ್ನಾಟಕದ ವಿಷಯಕ್ಕೆ ಬಂದರೆ ನೇರ ಹಣಾಹಣಿ ಕಾಂಗ್ರೆಸ್-ಜಿಜೆಪಿ ಮಧ್ಯೆಯೆ ಇರುತ್ತದೆ. ಈ ಭಾಗದ ಬಹುತೇಕ ಶಾಸಕರು ಬಿಜೆಪಿಗೆ ಸೇರಿದ್ದು ಸ್ಥಳೀಯವಾಗಿ ಆಡಳಿತ ವಿರೋಧವನ್ನು ಅವರು ಎದುರಿಸಬೇಕಿದೆ.
ಬಹುತೇಕ ಶಾಸಕರು ಕ್ಷೇತ್ರವನ್ನು ಕೆಡೆಗಣಿಸಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿರುವ ಅಂಶ. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ಎಲ್ಲಾ ಭಾಗದಲ್ಲಿ ಪ್ರತಿಧ್ವನಿಸುತ್ತಿದೆ.
ಇದರೊಂದಿಗೆ ಬರಗಾಲ ನಿರ್ವಹಣೆಯಲ್ಲಿ ಶಾಸಕರ ವೈಫಲ್ಯ, ಅಡಿಕೆಗೆ ಬೆಂಬಲದ ಬೆಲೆ, ವಿದ್ಯುತ್ ಕೊರತೆ, ಬಿತ್ತನೆ ಬೀಜಗಳ ಕೊರತೆ, ಹದಗೆಟ್ಟ ರಸ್ತೆಗಳು, ಕೈಗೆ ಸಿಗದೆ ಇರೋ ಶಾಸಕರುಗಳು, ಶಾಸಕರ ಬೆಂಬಲಿಗರ ಕೈಯಲ್ಲಿಯೇ ಆಡಳಿತ ವ್ಯವಸ್ಥೆ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿದೆ ಇರೋದು ಇದೆಲ್ಲಾ ಶಾಸಕರು ಹಣೆಬರಹವನ್ನು ಮುಂದಿನ ದಿನಗಳಲ್ಲಿ ನಿರ್ಧಾರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇನ್ನೂ ಹೈದರಾಬಾದ್ ಕರ್ನಾಟಕದ ವಿಷಯಕ್ಕೆ ಬಂದರೆ ಕೇಂದ್ರ ಸರ್ಕಾರ 371 ಕಲಂ ಅನ್ವಯ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಕಾಂಗ್ರೆಸ್‌ಗೊಂದು ರಾಜಕೀಯ ಅಸ್ತ್ರವಾಗಬಹುದು.
ಈ ಬಾರಿ ವಿಶೇಷವಾಗಿ ಬಳ್ಳಾರಿ-ರಾಯಚೂರು ಪ್ರದೇಶದಲ್ಲಿ ಬಿಎಸ್‌ಆರ್ ಪಕ್ಷದ ಸ್ಪರ್ಧೆಯಿಂದ ನಷ್ಟವಾಗೋದು ಬಿಜೆಪಿಗೋ ಅಥವಾ ಕಾಂಗ್ರೆಸಿಗೂ ಅನ್ನೋದು ಕೂಡ ಕಾದುನೋಡಬೇಕಾದ ವಿಷಯವಾಗಿದೆ.
ಬಿ.ಆರ್.ನಂಜುಡಪ್ಪ ವರದಿಯನ್ನೆ ತೆಗೆದುಕೊಂಡು ನೋಡಿದಾಗ ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದರೆ ಈ ಹೈದರಾಬಾದ್ ಕರ್ನಾಟಕ. ಈ ಪ್ರಾಂತ್ಯದ ಅಭಿವೃದ್ದಿಗೆ ಇದುವರಿಗೆ ಅಧಿಕಾರ ನಡೆಸಿದ ಯಾವುದೇ ಪಕ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಇಲ್ಲ. ಈಗಲೂ ರಾಜಕೀಯವಾಗಿ, ಶೈಕ್ಷಣಿಕವಾಗಿ, ಕೈಗಾರಿಕಾ ಅಭಿವೃದ್ದಿ ಸೇರಿದಂತೆ ಎಲ್ಲಾ ವಿವಿಧದಲ್ಲೂ ಈ ಭಾಗ ಸಂಪೂರ್ಣವಾಗಿ ಆಡಳಿತಗಾರರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಲಿಂಗಾಯಿತರು, ಕುರುಬರು, ನಾಯಕರು, ಪರಿಶಿಷ್ಟರು ಮತ್ತು ಮುಸ್ಲಿಂರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲಿದ್ದಾರೆ. ಇಲ್ಲೂ ಅಷ್ಟೆ ಹಾಲಿ ಶಾಸಕರಲ್ಲಿ ಬಹುತೇಕರು ತಮ್ಮ ವರ್ಚಸ್ಸು ಕಳೆದುಕೊಂಡಿದ್ದಾರೆ. ಒಟ್ಟಾರೆ ಬಹುತೇಕ ರಾಜ್ಯದ ಎಲ್ಲಾ ಪಕ್ಷದ ಹಾಲಿ ಶಾಸಕರು ವೈಯಕ್ತಿಕವಾದ ವರ್ಚಸ್ಸು ಕಳೆದುಕೊಂಡಿದ್ದಾರೆ. ಪಕ್ಷದ ವರ್ಚಸ್ಸು ಇಲ್ಲ ತಮ್ಮ ಬಳಿ ಇರುವ ಆರ್ಥಿಕ ಸಂಪನ್ಮೂಲಗಳ ಮೂಲಕವೇ ಮತ್ತೆ ಗೆದ್ದುಬರುವ ಅದ್ಯಮ ವಿಶ್ವಾಸ ಬೆಂಬಲಿಗರಲ್ಲಿ ಇರೋದು ನಿಜಕ್ಕೂ ಅಶ್ಚರ್ಯವೇ ಸರಿ!












Click it and Unblock the Notifications