ಅಧಿಕಾರ ಪೀಠ : ಮುಸ್ಲಿಂ ಸಮುದಾಯದ ಆತಂಕದ ಕಥೆ

ಈಗಾಗಲೇ ಬೆಂಗಳೂರಲ್ಲಿ ಜೆಡಿಎಸ್‌ನ ಮುಸ್ಲಿಂ ಸಮಾವೇಶ ಕೂಡ ಯಶಸ್ವಿಯಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಹಂತ ಹಂತವಾಗಿ ಸಮಾವೇಶಗಳ ಮೂಲಕ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿದ್ದಾರೆ.
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಅಡ್ಡ ಮತದಾನ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲಿಸಿಕೊಳ್ಳುವ ಮೂಲಕ ಮುಸ್ಲಿಂ ಸಮುದಾಯದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದೆ.
ಒಂದು ಕಡೆ ಭಯೋತ್ಪದಾನೆಯ ಕರಿನೆರಳು ಮತ್ತೆ ರಾಜ್ಯ ರಾಜಕೀಯವನ್ನೆ ಬದಲಾಯಿಸಿದೆ. ಶಂಕಿತ ಭಯೋತ್ಪಾದಕ ಬಂಧನ ಮುಸ್ಲಿಂ ಸಮುದಾಯದಲ್ಲೂ ಕೂಡ ಆತಂಕ ಮನೆ ಮಾಡಿದೆ. ಎಸ್‌ಎಂಎಸ್ ಸಂದೇಶಗಳ ಮೂಲಕ ಈಶಾನ್ಯ ಜನರಲ್ಲಿ ಆತಂಕ ಮೂಡಿಸಿದ ಪ್ರಕರಣ, ಅಕ್ರಮ ಬಾಂಗ್ಲಾ ದೇಶಿಯರ ಕಾರ್ಯಕಲಾಪಗಳು, ಕಸಬ್‌ಗೆ ಗಲ್ಲು ಶಿಕ್ಷೆಯಂಥ ವಿಷಯಗಳ ಜೊತೆ ಜೊತೆಗೆ ಕೇಂದ್ರ ಸರ್ಕಾರದ ತೈಲ ಬೆಲೆಗಳ ಏರಿಕೆ ಕಲ್ಲಿದ್ದಲು ಹಗರಣಗಳ ಮುಂದೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ಈಗ ದೊಡ್ಡದಾಗಿ ಜನಸಾಮಾನ್ಯರಿಗೆ ಕಾಣುತ್ತಿಲ್ಲ.
ವಿಶೇಷವಾಗಿ ಡಿಸೇಲ್ ಬೆಲೆ ಏರಿಕೆ ಮತ್ತು ಅಡಿಗೆಅನಿಲದ ಮೇಲಿನ ನಿರ್ಬಂಧ (ವರ್ಷಕ್ಕೆ ಆರು ಗ್ಯಾಸ್) ಮಧ್ಯಮವರ್ಗದ ಜನರಲ್ಲಿ ಕಾಂಗ್ರೆಸ್ ಬಗ್ಗೆ ಮೂಡಿಸುತ್ತಿರುವ ಅಭಿಪ್ರಾಯ ಎಂಥದೆಂದು ಮುಸ್ಲಿಂ ಸಮುದಾಯ ಕೂಡ ಸೂಕ್ಷ್ಮವಾಗಿಯೆ ಅವಲೋಕಿಸಿ ನೋಡುತ್ತಿದೆ.
ಇದೆಲ್ಲಾದರ ಪರಿಣಾಮ ಈಗ ನಾವು ಯಾರ ಪರವಾಗಿ ಮತ ಚಲಾಯಿಸಬೇಕು? ಯಾರು ಹಿತವರು ಈ ಇಬ್ಬರಲ್ಲಿ (ಕಾಂಗ್ರೆಸ್-ಜೆಡಿಎಸ್) ಎಂಬುವುದೇ ಮುಸ್ಲಿಮ್‌ರಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.
ಸದ್ಯದ ಪರಸ್ಥಿತಿಯಲ್ಲಿ ಮುಸ್ಲಿಂ ಸಮುದಾಯ ಲಿಂಗಾಯಿತರು ಬಿಜೆಪಿ ಪರವಾಗಿ ಒಕ್ಕಲಿಗರು ಜೆಡಿಎಸ್ ಪರವಾಗಿ ಮತ ಚಲಾಯಿಸುವಂತೆ ಒಂದೇ ಪಕ್ಷದ ಪರವಾಗಿ ಮತ ಚಲಾಯಿಸುವ ಸ್ಥಿತಿಯಲ್ಲಂತೂ ಇಲ್ಲ. ಹಾಗಂತ ಅವರ ಮುಂದೆ ಹೆಚ್ಚಿನ ಆಯ್ಕೆಗಳು ಇಲ್ಲ.
ಈಗಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಅದು ಹೆಚ್ಚಿಗೆ ಜೆಡಿಎಸ್ ಪರವಾಗಿ, ಉಳಿದ ಭಾಗದಲ್ಲಿ ಅನಿವಾರ್ಯತೆಗಾಗಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಅವಕಾಶಗಳಿವೆ.
ಕಾಂಗ್ರೆಸ್ಸಿನ ಮುಖ್ಯ ಸಮಸ್ಯೆ ಅದರ ಪರವಾಗಿ ಯಾವುದೇ ಸಮುದಾಯ ಗಟ್ಟಿಯಾಗಿ ನಿಲ್ಲುವಂಥ ಒಂದು ವೋಟ್‌ಬ್ಯಾಂಕ್ ಹೊಂದಿಲ್ಲ. ಇದೇ ಕಾರಣದಿಂದಲ್ಲೇ ಅದು ಕಳೆದ ಬಾರಿಗಿಂತ ಶೇ 2ರಷ್ಟು ಮತಗಳನ್ನು ಈ ಬಾರಿ ಕಳೆದುಕೊಂಡರೆ ಈಗಿರುವ (80) ಸ್ಥಾನಗಳಲ್ಲಿ 10 ರಿಂದ 15 ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯ ಕೂಡ ಇಲ್ಲದಿಲ್ಲ.
ಅದರ ನೇರ ಲಾಭ ಬಿಜೆಪಿಗೋ ಅಥವಾ ಜೆಡಿಎಸ್‌ಗೋ ಅನ್ನೋದು ಅದು ಯಾವ ಪ್ರದೇಶದಲ್ಲಿ ಮತಗಳನ್ನು ಕಳೆದುಕೊಳ್ಳುತ್ತದೆ ಎಂಬುವುದರ ಮೇಲೆ ನಿಂತಿರುತ್ತದೆ. ಒಟ್ಟಲ್ಲಿ ಮತ್ತೆ ಅತಂತ್ರದ ಹಾದಿಯಲ್ಲಿ ರಾಜ್ಯದ ಪ್ರಸಕ್ತ ರಾಜಕಾರಣವಿದೆ.












Click it and Unblock the Notifications